ಬೆಂಗಳೂರು: ವಾಟ್ಸ್‌ಆ್ಯಪ್ ಸಂವಹನದ ಖಾಸಗಿ ಮಾಹಿತಿ ಮೇಲೆ ಹ್ಯಾಕರ್‌ಗಳು ಕಣ್ಣಿಟ್ಟಿದ್ದಾರೆ ಎಂಬ ವದಂತಿಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ನ ಸುರಕ್ಷತೆಗಾಗಿಫಿಂಗರ್ ಪ್ರಿಂಟ್ ಲಾಕ್ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ.
ಇದರಿಂದಾಗಿ ಚಾಟಿಂಗ್ ಮತ್ತು ಕರೆಗಳು ಹೆಚ್ಚು ಸುರಕ್ಷಿತವಾಗಲಿವೆ ಎಂದು ವಾಟ್ಸ್ಆ್ಯಪ್ ಕಂಪನಿಯೂ ಪ್ರಕಟಣೆಯಲ್ಲಿ ತಿಳಿಸಿದೆ.
ಆ್ಯಂಡ್ರಾಯ್ಡ್ ಮಾದರಿಯ ಸ್ಮಾರ್ಟ್‌ಪೋನ್‌ಗಳಲ್ಲಿ ಈ ವೈಶಿಷ್ಟ್ಯವಿದೆ. ಫಿಂಗರ್ ಪ್ರಿಂಟ್ ಲಾಕ್ ವ್ಯವಸ್ಥೆಯನ್ನು ಅಳವಡಿಕೊಳ್ಳುವವರು ಗೂಗಲ್ ಪ್ಲೆಸ್ಟೋರ್‌ನಲ್ಲಿ ಆ್ಯಪ್‌ನ ಅಪ್‌ಡೇಟ್ ಮಾಡಿಕೊಂಡು ಬಳಸಬಹುದಾಗಿದೆ.
ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರು ಮೊದಲಿಗೆ ಗೂಗಲ್ ಪ್ಲೆಸ್ಟೋರ್‌ನಲ್ಲಿ ವ್ಯಾಟ್ಸ್‌ಆ್ಯಪ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ. ನಂತರ ವಾಟ್ಸ್ಆ್ಯಪ್ ಓಪನ್ ಮಾಡಿ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ. ಬಳಿಕ ಅಕೌಂಟ್ ಹಾಗೂ ಪ್ರೈವಸಿಯನ್ನು ಆಯ್ಕೆ ಮಾಡಿಕೊಂಡರೆ ಕಳೆಗಡೆ ಫಿಂಗರ್‌ಪ್ರಿಂಟ್ ಲಾಕ್ ಎಂದು ತೋರಿಸುತ್ತದೆ. ಅದನ್ನು ಎನೇಬಲ್ ಮಾಡಿಕೊಳ್ಳುವ ಮೂಲಕ ವಾಟ್ಸ್‌ಆ್ಯಪ್‌ಗೆ ಫಿಂಗರ್‌ಪ್ರಿಂಟ್ ಲಾಕ್ ಅಳವಡಿಸಿಕೊಳ್ಳಬಹುದು.
ಫಿಂಗರ್‌ಪ್ರಿಂಟ್ ಲಾಕ್‌ನಲ್ಲಿ 1 ನಿಮಿಷದಿಂದ 30 ನಿಮಿಷಗಳವರೆಗೂ ಆಟೋ ಲಾಕ್ ವ್ಯವಸ್ಥೆ ಲಭ್ಯವಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.