ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಫೋನ್, ಐಪ್ಯಾಡ್‌, ಮ್ಯಾಕ್‌ಗಳಲ್ಲಿ ಭದ್ರತಾ ದೋಷ: ಆ್ಯಪಲ್ ಎಚ್ಚರಿಕೆ

Last Updated 19 ಆಗಸ್ಟ್ 2022, 3:03 IST
ಅಕ್ಷರ ಗಾತ್ರ

ಸ್ಯಾನ್ ಫ್ರಾನ್ಸಿಸ್ಕೊ: ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್‌ಗಳಲ್ಲಿ ಭದ್ರತಾ ದೋಷದ ಕುರಿತು ಆ್ಯಪಲ್ ಎಚ್ಚರಿಕೆ ನೀಡಿದೆ.

ಭದ್ರತಾ ದೋಷದಿಂದಾಗಿ ಹ್ಯಾಕರ್‌ಗಳಿಗೆ ಡಿವೈಸ್ ಮೇಲೆ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಹಾಗಾಗಿ ತುರ್ತಾಗಿ ಸಾಫ್ಟ್‌ವೇರ್ ಅಪ್‌ಡೇಟ್ ಇನ್‌ಸ್ಟಾಲ್ ಮಾಡುವಂತೆ ಕಂಪನಿಯು ವಿನಂತಿಸಿದೆ.

ಐಫೋನ್ 6ಎಸ್ ಹಾಗೂ ನಂತರದ ಮಾದರಿಗಳು, ಐಪ್ಯಾಡ್‌ನ 5ನೇ ತಲೆಮಾರಿನ ಸೇರಿದಂತೆ ಹಲವು ಡಿವೈಸ್, ಐಪ್ಯಾಡ್ ಪ್ರೊ, ಐಪ್ಯಾಡ್ ಏರ್ 2, ಮ್ಯಾಕ್ ಕಂಪ್ಯೂಟರ್ (macos monterey)ಹಾಗೂ ಕೆಲವು ಐಪಾಡ್ಡಿವೈಸ್‌ಗಳಲ್ಲಿ ದೋಷ ಕಂಡುಬರುವ ಭೀತಿಯಿದೆ.

ಈ ದೋಷದಿಂದಾಗಿ ಹ್ಯಾಕರ್‌ಗಳು ಡಿವೈಸ್ ಮೇಲೆ ಸಂಪೂರ್ಣ ಆಡ್ಮಿನ್ ಆಕ್ಸೆಸ್ ಪಡೆಯುವ ಸಾಧ್ಯತೆಯಿದೆ ಎಂದು ಸೋಷಿಯಲ್ ಫ್ರೂಫ್ ಸೆಕ್ಯೂರಿಟಿ ಸಿಇಒ ರಾಚೆಲ್ ಟೊಬ್ಯಾಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT