ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತದಲ್ಲಿ ಮಾಹಿತಿ ಹುಡುಕಾಟ ಸರಳಗೊಳಿಸಲು ಗೂಗಲ್‌ ಜೊತೆ ಐಸಿಸಿಆರ್‌ ಒಪ್ಪಂದ

Last Updated 29 ಸೆಪ್ಟೆಂಬರ್ 2022, 10:39 IST
ಅಕ್ಷರ ಗಾತ್ರ

ನವದೆಹಲಿ: ಇಂಟರ್‌ನೆಟ್‌ನಲ್ಲಿ ಸಂಸ್ಕೃತದಲ್ಲಿ ಮಾಹಿತಿಯನ್ನು ಹುಡುಕುವ ಪ್ರಕ್ರಿಯೆಯನ್ನು ಸರಳಗೊಳಿಸುವುದಕ್ಕೆ ಸಂಬಂಧಿಸಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು (ಐಸಿಸಿಆರ್‌), ಗೂಗಲ್‌ನೊಂದಿಗೆ ಗುರುವಾರ ಒಪ್ಪಂದಕ್ಕೆ ಸಹಿ ಹಾಕಿತು.

ಸಾಮಾನ್ಯವಾಗಿ ಬಳಸಲಾಗುವ ಒಂದು ಲಕ್ಷ ಸಂಸ್ಕೃತದ ವಾಕ್ಯಗಳು ಹಾಗೂ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಅವುಗಳ ಅನುವಾದಗಳನ್ನು ಸಹ ಗೂಗಲ್‌ ಸಂಸ್ಥೆಗೆ ಐಸಿಸಿಆರ್‌ ಒದಗಿಸಿದೆ.

ಐಸಿಸಿಆರ್‌ನ ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ಹಾಗೂ ಗೂಗಲ್‌ನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

‘ಸಂಸ್ಕೃತದಲ್ಲಿ ಅನುವಾದ ಕಾರ್ಯವನ್ನು ಮತ್ತಷ್ಟು ಸುಧಾರಿಸುವ ಸಲುವಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸಂಸ್ಕೃತದಲ್ಲಿರುವ ಮಾಹಿತಿಯನ್ನು ಇತರ ಭಾಷೆಗಳಿಗೆ ಅನುವಾದ ಮಾಡುವುದಕ್ಕಾಗಿ ಬಳಸಲಾಗುವ ಕೃತಕಬುದ್ಧಿಮತ್ತೆ (ಎಐ) ಹಾಗೂ ಮಷಿನ್‌ ಲರ್ನಿಂಗ್‌ ತಂತ್ರಜ್ಞಾನವನ್ನು ಸುಧಾರಿಸಲು ಗೂಗಲ್‌ಗೆ ಇದರಿಂದ ಸಾಧ್ಯವಾಗಲಿದೆ’ ಎಂದು ಸಹಸ್ರಬುದ್ಧೆ ಹೇಳಿದರು.

‘ಭಾರತೀಯರ ಪಾಲಿಗೆ ಸಂಸ್ಕೃತ ಒಂದು ಭಾಷೆ ಮಾತ್ರವಲ್ಲ. ಭಾರತೀಯ ಚಿಂತನೆ ಹಾಗೂ ಅಂತಃಸತ್ವವನ್ನು ಅರ್ಥ ಮಾಡಿಕೊಳ್ಳಲು ಕೂಡ ಸಾಧನವಾಗಿದೆ’ ಎಂದರು.

‘ಭಾರತೀಯ ತತ್ವಜ್ಞಾನ, ಚಿಂತನೆ ಹಾಗೂ ಅಗಾಧ ಜ್ಞಾನಸಂಪತ್ತನ್ನು ಗೂಗಲ್‌ ಮೂಲಕ ಜಗತ್ತಿಗೆ ತಲುಪಿಸುವ ಕಾರ್ಯವನ್ನು ಐಸಿಸಿಆರ್‌ ಮಾಡಲಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT