ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಿಟೇಲ್‌ ವರ್ತಕರಿಗೆ ಟೆಕ್‌ ಪಾಠ

Published : 18 ಡಿಸೆಂಬರ್ 2019, 19:40 IST
ಫಾಲೋ ಮಾಡಿ
Comments

ಇತ್ತೀಚೆಗೆಹಲಸೂರಿನಕೊನ್‌ರಾಡ್‌ಹೋಟೆಲ್‌ನಲ್ಲಿಮೈಕ್ರೋಸಾಫ್ಟ್‌ ಸಹಭಾಗಿತ್ವದಲ್ಲಿ 20ನೇಇಂಡಿಯಾ ಫ್ಯಾಶನ್‌ ಫೋರಂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಬಾರಿಯ ಫ್ಯಾಶನ್‌ ಫೋರಂನ ಪ್ರಮುಖ ಉದ್ದೇಶವೇ ಫ್ಯಾಶನ್‌ ಜಗತ್ತಿನಲ್ಲಿ ಚಿಲ್ಲರೆ ವ್ಯಾಪಾರಿಗಳ ಪ್ರಗತಿ. ಈ ಹಿನ್ನೆಲೆ‘ದಿ ಪ್ಯೂಚರ್‌ ಆಫ್‌ ಫ್ಯಾಶನ್‌ ರಿಟೇಲ್‌’ ಎಂಬ ವಿಷಯದಡಿ ವಿಚಾರ ಸಂ‌ಕಿರಣ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ 20ನೇ ಇಂಡಿಯಾ ಫ್ಯಾಷನ್‌ ಫೋರಂನ ಹೊಸ ಅಧ್ಯಕ್ಷನಾಗಿ ರಿಲಾಯನ್ಸ್‌ ರಿಟೇಲ್‌ ಸಿಇಓ ಅಖಿಲೇಶ್‌ ಪ್ರಸಾದ್‌ ಅವರನ್ನು ಆರಿಸಲಾಯಿತು.

ವಿಚಾರ ಸಂಕಿರಣದಲ್ಲಿರಿಲಾಯನ್ಸ್‌ ರಿಟೇಲ್‌ ಸಿಇಓಅಖಿಲೇಶ್‌ ಪ್ರಸಾದ್‌, ಅರವಿಂದ್‌ ಬ್ರ್ಯಾಂಡ್‌ ಮತ್ತು ರಿಟೇಲ್‌ ಸಿಇಓ ಸುರೇಶ್‌.ಜೆ, ಅಮೆಜಾನ್‌ ಫ್ಯಾಶನ್‌ ಮುಖ್ಯಸ್ಥ ಅರುಣ್‌ ಸರ್‌ದೇಶ್‌ಮುಖ್‌, ಆದಿತ್ಯ ಬಿರ್ಲಾ ಫ್ಯಾಶನ್‌ ಆ್ಯಂಡ್‌ ರಿಟೇಲ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಶೀಷ್‌ ದೀಕ್ಷಿತ್‌, ಟೈಟನ್‌ ಕಂಪೆನಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಸಿ.ಕೆ ವೆಂಕಟರಮಣ್‌, ಅರವಿಂದ್‌ ಬ್ರ್ಯಾಂಡ್‌ ಇಂಟರ್‌ನೆಟ್‌ ಸಿಇಓ ಮುಕುಲ್‌ ಬಫ್ನಾ ಮುಖ್ಯ ಅತಿಥಿಗಳಾಗಿದ್ದರು.ಇವರು ತಮ್ಮ ಬ್ರ್ಯಾಂಡ್‌ ಸಫಲತೆ ಬಗ್ಗೆ ಮತ್ತು ಮಾರುಕಟ್ಟೆ ತಂತ್ರದ ಬಗ್ಗೆ ಹೇಳಿದರು. ಫ್ಯಾಶನ್‌ ಜಗತ್ತಿಗೆ ಕಾಲಿಡಲಿರುವ ಹೊಸ ಪ್ರತಿಭೆ, ಚಿಲ್ಲರೆ ವ್ಯಾಪಾರಿಗಳಿಗೆ ಸಲಹೆಗಳನ್ನು ಕೂಡ ನೀಡಿದರು.

ಕೇವಲ ಆ್ಯಪ್‌ ,ಮೂಲಕ ಮಾತ್ರವಲ್ಲದೇ ಶಾಪ್‌ಗೆ ಆಗಮಿಸುವ ಗ್ರಾಹಕರ ನೀಡುವ ಗುಣಮಟ್ಟ, ಅತಿಥ್ಯದಲ್ಲಿ ಕೊರತೆ ಉಂಟಾಗಬಾರದು.ಗ್ರಾಹಕರೊಂದಿಗೆ ಒಳ್ಳೆಯ ಸಂಬಂಧ, ಫ್ಯಾಶನ್‌ ಜಗತ್ತಿನಲ್ಲಿ ಬಹಳ ಮಹತ್ತರವಾದದ್ದು. ಹಾಗಾಗಿ ಆನ್‌ಲೈನ್‌ನಲ್ಲಿ ಹೇಗೆ ಜನರು, ಸಿಬ್ಬಂದಿ ಇಲ್ಲದೆ,ತಮ್ಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ.ಅದೇ ರೀತಿ ಮಳಿಗೆಗೆ ಆಗಮಿಸುವ ಗ್ರಾಹಕರಿಗೆ ಆರ್ಟಿಫಿಷಲ್‌ ಇಂಟಲಿಜೆಂಟ್ಸ್‌ ಸಹಾಯದಿಂದ ಅವರ ನೆಚ್ಚಿನ ಉಡುಗೆಗಳನ್ನುಆರಿಸುವ ಅವಕಾಶ ಒದಗಿಸಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಗೆಹೆಚ್ಚಿನ ವಿದೇಶಿ ಕಂಪೆನಿಗಳು ಆಗಮಿಸುತ್ತಿದೆ . ಇಂತಹ ಪರಿಸ್ಥಿತಿಯಲ್ಲಿ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಂಡು, ಚಿಲ್ಲರೆ ವ್ಯಾಪಾರಿಗಳುಗ್ರಾಹಕರಿಗೆ ಇನ್ನಷ್ಟು ಗುಣಮಟ್ಟ ಒದಗಿಸಬೇಕು ಎಂಬುದರ ಬಗ್ಗೆ ಮೈಕ್ರೋಸಾಫ್ಟ್‌ನ ಬ್ಯುಸಿನೆಟ್‌ ಗ್ರೂಪ್‌ನ ಮುಖ್ಯಸ್ಥ ಪ್ರವೀಣ್‌ ಮೆಲ್ಲಚೆರುವ ತಿಳಿಸಿದರು.

ವಿಚಾರ ಸಂಕಿರಣದ ಜೊತೆಗೆ‘ಅನ್ವೇಷಣೆ ಮತ್ತು ಟ್ರೆಂಡ್‌ ಗುರುತಿಸುವಿಕೆ ಮೂಲಕ ಸುಸ್ಥಿರತೆ (Sustainability through innovation and traceability) ಎಂಬ ವಿಷಯದ ಮೇಲೆಪವರ್‌ ಪಾಯಿಂಟ್‌ ಪ್ರೆಸಂಟೇಶನ್‌ನನ್ನುಕೂಡ ಆಯೋಜಿಸಲಾಗಿತ್ತು. ಇದರಲ್ಲಿ ಸೌತ್‌ ಏಷ್ಯಾ ಲೆನ್ಸಿಂಗ್‌(South Asia-Lenzing),ದಿ ವೂಲ್‌ಮಾರ್ಕ್‌ ಕಂಪೆನಿ (The Woolmark Company),ಕ್ರೇಯಾ ವರ್ಲ್ಡ್‌ವೈಡ್‌(Crea Worldwide),ಫ್ಯಾಶನ್‌ ಎಜ್ಯುಕೇಶನ್‌ ಅನಂತ್‌ ನ್ಯಾಷನಲ್‌ ಯುನಿವರ್ಸಿಟಿ(Fashion education, Anant National University)ಲೆವಿ ಸ್ಟ್ರೌಸ್‌ ಆ್ಯಂಡ್‌ ಕೋ(Levi Strauss & Co),ಸರ್ಕ್ಯುಲರ್‌ ಅಪ್ರೇಲ್‌ ಇನೋವೇಶನ್‌ ಫ್ಯಾಕ್ಟರಿಯ(Circular Apparel Innovation Factory) ಪ್ರತಿನಿಧಿಗಳು ಭಾಗವಹಿಸಿದ್ದರು. ಜೊತೆಗೆ ಐಎಫ್‌ಎಫ್‌ನ 20ನೇ ಫೋರಂನಲ್ಲಿ ವಿವಿಧ ಬ್ರ್ಯಾಂಡ್‌ನ ಸಣ್ಣ ಮಳಿಗೆಯನ್ನು ನಿರ್ಮಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT