ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ನೀಲಿ ಬಣ್ಣದ 'ಬಾಲ ಆಧಾರ್‌'; 5ನೇ ವಯಸ್ಸಿಗೆ ಬಯೋಮೆಟ್ರಿಕ್‌ ಕಡ್ಡಾಯ

Last Updated 13 ಫೆಬ್ರುವರಿ 2020, 12:38 IST
ಅಕ್ಷರ ಗಾತ್ರ

ಬೆಂಗಳೂರು: ಪುಟ್ಟ ಮಗುವಿಗೂ ಅಧಿಕೃತ ಆಧಾರ್‌ ಪಡೆಯಲು ಸಾಧ್ಯವಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಐದು ವರ್ಷದೊಳಗಿನ ಮಕ್ಕಳಿಗೆ 'ಬಾಲಆಧಾರ್‌' ನೀಡುತ್ತಿದೆ. ನೀಲಿ ಬಣ್ಣದ ವಿಶೇಷ ಆಧಾರ್ ನೋಂದಣಿಗಾಗಿ ಆಧಾರ್‌ ವೆಬ್‌ಸೈಟ್‌ ಮೂಲಕವೇ ದಿನ ಬುಕ್‌ ಮಾಡಿಕೊಳ್ಳುವ ಅವಕಾಶವಿದೆ.

ಈಗಾಗಲೇ ಮಗು ಶಾಲೆಗೆ ಹೋಗುತ್ತಿದ್ದರೆ, ಅಲ್ಲಿ ನೀಡಿರುವ ಫೋಟೊ ಐಡಿ ಕಾರ್ಡ್‌ನ್ನು ಆಧಾರ್‌ ನೋಂದಣಿ ಸಮಯದಲ್ಲಿ ನೀಡಬಹುದು. ಜನನ ಪ್ರಮಾಣಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಪಾಲಕರ ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆಯೊಂದಿಗೆ ಸಂಪರ್ಕಿಸಿ ನೀಲಿ ಬಣ್ಣದ 'ಬಾಲಆಧಾರ್‌' ನೀಡಲಾಗುತ್ತದೆ.

ಮಗು ಐದು ವರ್ಷ ದಾಟುತ್ತಿದ್ದಂತೆ ಬಯೋಮೆಟ್ರಿಕ್‌ ಮಾಹಿತಿ ಅಪ್‌ಡೇಟ್‌ ಮಾಡಿಸುವ ಮೂಲಕ ಆಧಾರ್‌ ಸಕ್ರಿಯಗೊಳಿಸಿಕೊಳ್ಳಬೇಕು. 12 ಅಂಕಿಗಳ ಆಧಾರ್‌ ಗುರುತಿನ ಚೀಟಿ ವಿಳಾಸ ಆಧಾರವಾಗಿಯೂ ಪರಿಗಣಿಸಲಾಗುತ್ತದೆ. ಬಯೋಮೆಟ್ರಿಕ್‌ ಮಾಹಿತಿಯನ್ನು 5ನೇ ವಯಸ್ಸಿನಲ್ಲಿ ಹಾಗೂ 15ನೇ ವಯಸ್ಸಿನಲ್ಲಿ ಅಪ್‌ಡೇಟ್‌ ಮಾಡಿಸುವುದು ಕಡ್ಡಾಯವಾಗಿದೆ.

ಪ್ರಮುಖಾಂಶಗಳು

* ನೀಲಿ ಬಣ್ಣದ ಆಧಾರ್‌ ಮಗುವಿನ ಬಯೋಮೆಟ್ರಿಕ್‌ ಮಾಹಿತಿ ಒಳಗೊಂಡಿರುವುದಿಲ್ಲ

* 5ನೇ ವಯಸ್ಸಿನಲ್ಲಿ ಮಗುವಿನ ಬೆರಳು ಗುರುತು ಹಾಗೂ ಕಣ್ಣಿನ ಸ್ಕ್ಯಾನ್‌ (ಐರಿಸ್‌) ಮಾಡಿಸಬೇಕು

* 15ನೇ ವಯಸ್ಸಿನಲ್ಲಿ ಮತ್ತೊಮ್ಮೆ ಬಯೋಮೆಟ್ರಿಕ್‌ ಮಾಹಿತಿ ಅಪ್‌ಡೇಟ್‌ ಮಾಡಿಸಬೇಕು

* ಮಗುವಿನ ಆಧಾರ್‌ ನೋಂದಣಿಗೆ ಜನನ ಪ್ರಮಾಣಪತ್ರ, ಪಾಲಕರ ಮೊಬೈಲ್‌ ಸಂಖ್ಯೆ, ಶಾಲೆಯ ಗುರುತಿನ ಚೀಟಿ ಅಗತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT