ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CES 2021: ಈ ಬಾರಿ ವರ್ಚುವಲ್ ಎಲೆಕ್ಟ್ರಾನಿಕ್ಸ್ ಶೋ

Last Updated 11 ಜನವರಿ 2021, 7:27 IST
ಅಕ್ಷರ ಗಾತ್ರ

ಸ್ಯಾನ್ ಫ್ರಾನ್ಸಿಸ್ಕೊ: ಜಗತ್ತಿನ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಶೋ ಎಂದೇ ಹೆಸರಾಗಿರುವ 'ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ 2021' ಸೋಮವಾರ ಆರಂಭವಾಗಿದ್ದು ಈ ಬಾರಿ ವರ್ಚುವಲ್ ಮಾದರಿಯಲ್ಲಿ ನಡೆಯಲಿದೆ. ಟೆಕ್ ಲೋಕದ ವಿವಿಧ ಬ್ರ್ಯಾಂಡ್ ಮತ್ತು ಕಂಪನಿಗಳು ಹೊಸ ಉತ್ಪನ್ನ, ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸುವ ಪ್ರಮುಖ ಸಮಾವೇಶ ಇದಾಗಿದ್ದು, ಈ ಬಾರಿ ಆನ್‌ಲೈನ್‌ಗೆ ಸೀಮಿತವಾಗಿದೆ.

ಸಿಇಎಸ್ 2021

ಗ್ಯಾಜೆಟ್ ಕ್ಷೇತ್ರದಲ್ಲಿ ಸಿಇಎಸ್ ಸಮಾವೇಶಕ್ಕೆ ವಿಶೇಷ ಮನ್ನಣೆಯಿದೆ. ರೊಬಾಟಿಕ್ಸ್, ಸ್ಮಾರ್ಟ್ ಡಿವೈಸ್ ಮತ್ತು ಡಿಜಿಟಲ್ ಹೆಲ್ತ್ ಸಹಿತ ಅತ್ಯಾಧುನಿಕ ತಂತ್ರಜ್ಞಾನದ ಉತ್ಪನ್ನಗಳನ್ನು ಕಂಪನಿಗಳು ಸಿಇಎಸ್ ಶೋದಲ್ಲಿ ಪ್ರದರ್ಶಿಸುತ್ತವೆ. ಹೊಸತನ್ನು ಪರಿಚಯಿಸಲು ಜಾಗತಿಕವಾಗಿ ಸಿಇಎಸ್ ಸೂಕ್ತ ವೇದಿಕೆಯಾಗಿದೆ.

ವರ್ಚುವಲ್ ಸಮಾವೇಶ

ಈ ಬಾರಿ 1800ಕ್ಕೂ ಅಧಿಕ ಪ್ರದಶರ್ಕರು ಸಿಇಎಸ್ 2021 ಶೋದಲ್ಲಿ ವರ್ಚುವಲ್ ಮೂಲಕ ಪಾಲ್ಗೊಳ್ಳುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿಯಿಂದಾಗಿ ಈ ಬಾರಿ ಆನ್‌ಲೈನ್‌ ಶೋ ನಡೆಯುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.

ಕಳೆದ ವರ್ಷಗಳಲ್ಲಿ ಸುಮಾರು 4000ಕ್ಕೂ ಅಧಿಕ ಪ್ರದರ್ಶಕರು ಸಿಇಎಸ್ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, 1,75,000 ಮಂದಿ ಭೇಟಿ ನೀಡುತ್ತಿದ್ದರು. ಹೊಸ ತಂತ್ರಜ್ಞಾನ ಮತ್ತು ಗ್ಯಾಜೆಟ್ ಪ್ರದರ್ಶನ, ಬಿಡುಗಡೆ ಮಾತ್ರವಲ್ಲದೆ, ಹೊಸ ಸಾಧ್ಯತೆ, ಅವಿಷ್ಕಾರಗಳ ಬಗ್ಗೆ ವಿಶೇಷ ಭಾಷಣ ಕೂಡ ಸಿಇಎಸ್ 2021ರಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT