ಬುಧವಾರ, ಆಗಸ್ಟ್ 10, 2022
20 °C

ಕೋವಿಡ್‌–19 ಲಸಿಕೆ ಪಡೆಯಲು ವಿ ಆ್ಯಪ್‌ನಲ್ಲಿದೆ ಸರಳ ಮಾರ್ಗ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ವಿ ಆ್ಯಪ್‌ನ ಸ್ಕ್ರೀನ್‌ ಶಾಟ್‌

ಬೆಂಗಳೂರು: ಕೋವಿಡ್‌–19 ಲಸಿಕೆ ಪಡೆಯಲು ಅನುವಾಗುವ ನಿಟ್ಟಿನಲ್ಲಿ ವಿಐ ತನ್ನ ಗ್ರಾಹಕರಿಗಾಗಿ ಕೋವಿನ್ ಆ್ಯಪ್‌ನ ಸ್ಲಾಟ್ ಹುಡುಕುವ ವಿಭಾಗವನ್ನು 'ವಿ ಆ್ಯಪ್' (Vi app) ಜತೆ ಸಮನ್ವಯಗೊಳಿಸಿದೆ. ಇದೀಗ ವಿ ಬಳಕೆದಾರರು ಲಸಿಕೆ ಪಡೆಯುವ ಸ್ಲಾಟ್‌ಗಳ ಲಭ್ಯತೆಯನ್ನು ಈ ಆ್ಯಪ್ ಮೂಲಕ ಕಂಡುಕೊಳ್ಳಬಹುದಾಗಿದೆ.

ವಿ ಗ್ರಾಹಕರು ತಮ್ಮ ಹುಡುಕಾಟವನ್ನು ವಯಸ್ಸು, ಲಸಿಕೆ ಹೆಸರುಗಳು (ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್), ಡೋಸ್, ಪಾವತಿ ಮಾಡಿ ಪಡೆಯುವ ಲಸಿಕೆ ಅಥವಾ ಉಚಿತ ಲಸಿಕೆ, ಹೀಗೆ ಫಿಲ್ಟರ್ ಮಾಡಲು ಕೂಡಾ ಅವಕಾಶವಿದೆ. ಇದರ ಜತೆಗೆ ತಮ್ಮ ವಿಳಾಸಕ್ಕೆ ಸನಿಹದಲ್ಲಿ ಲಭ್ಯವಿರುವ ಸ್ಲಾಟ್‌ಗಳ ವಿವರಗಳನ್ನೂ ಪಡೆಯಬಹುದಾಗಿದೆ. ಈ ಸೇವೆಯು ವಿ ಪ್ರೀಪೆಯ್ಡ್ ಹಾಗೂ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಲಭ್ಯವಿರುತ್ತದೆ.

ಲಸಿಕೆ ಸ್ಲಾಟ್‌ಗಳನ್ನು ಮೂರು ಸುಲಭ ಹಂತಗಳಲ್ಲಿ ಕಾಯ್ದಿರಿಸಬಹುದಾಗಿದೆ.

* "ಗೆಟ್ ಯುವರ್‌ಸೆಲ್ಫ್ ವ್ಯಾಕ್ಸಿನೇಟೆಡ್ ಟುಡೇ" ಆಪ್ಷನ್ ಕ್ಲಿಕ್ ಮಾಡಿ
* ಲಸಿಕೆ ಸ್ಲಾಟ್ ಹುಡುಕಿ ಅಥವಾ ನೋಟಿಫಿಕೇಶನ್ ಅಲರ್ಟ್ ಸೆಟ್ ಮಾಡಿ
* ಪ್ರಕ್ರಿಯೆ ಪೂರ್ಣಗೊಳ್ಳಲು ಬಳಕೆದಾರರು ಕೋವಿನ್ ಪೋರ್ಟೆಲ್‌ಗೆ ನಿರ್ದೇಶಿಸಲ್ಪಡುತ್ತಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು