ಗುರುವಾರ , ಏಪ್ರಿಲ್ 15, 2021
26 °C

23.5 ಕೋಟಿ ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಯೂಟ್ಯೂಬ್ ಬಳಕೆದಾರರ ದತ್ತಾಂಶ ಸೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಾಮಾಜಿಕ ಮಾಧ್ಯಮ ವಿಶ್ಲೇಷಣಾ ಕಂಪನಿಯೊಂದು ಸುಮಾರು 23.5 ಕೋಟಿ ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಮತ್ತು ಯೂಟ್ಯೂಬ್ ಬಳಕೆದಾರರ ದತ್ತಾಂಶವನ್ನು ಸೋರಿಕೆ ಮಾಡಿದೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರ ದತ್ತಾಂಶವನ್ನು ಕಾನೂನುಬದ್ಧವಾಗಿ ಮಾರಾಟ ಮಾಡುವ ಕಂಪನಿ ‘ಸೋಶಿಯಲ್ ಡೇಟಾ’ವು ದತ್ತಾಂಶ ಬಳಸಲು ಪಾಸ್‌ವರ್ಡ್ ಮತ್ತು ದೃಢೀಕರಣ ಪ್ರಕ್ರಿಯೆಯನ್ನೂ ಹೊಂದಿಲ್ಲದೆ ಇರುವುದು ಹ್ಯಾಕರ್‌ಗಳಿಗೆ ದತ್ತಾಂಶ ಸುಲಭವಾಗಿ ದೊರೆಯುವಂತೆ ಮತ್ತು ಡಾರ್ಕ್‌ ವೆಬ್‌ಸೈಟ್‌ಗಳಲ್ಲಿ ಸಂಗ್ರಹಿಸಿಡುವಂತೆ ಮಾಡಿದೆ.

ಸೋರಿಕೆಯಾಗಿರುವ ದತ್ತಾಂಶಗಳಲ್ಲಿ ವೈಯಕ್ತಿಕ ಮಾಹಿತಿ, ಯೂಸರ್‌ ನೇಮ್, ಅಧಿಕೃತವಾಗಿ ನೋಂದಣಿ ಮಾಡಿದ ಹೆಸರು, ಅಕೌಂಟ್ ಡಿಸ್ಕ್ರಿಪ್ಷನ್, ಅಕೌಂಟ್ ಉದ್ಯಮ ಅಥವಾ ಜಾಹೀರಾತು ವಿಭಾಗಕ್ಕೆ ಸೇರಿದೆಯೇ ಎಂಬ ಮಾಹಿತಿ, ಫಾಲೋವರ್ ಎಂಗೇಜ್‌ಮೆಂಟ್ ಅಂಕಿಂಶ, ಫಾಲೋವರ್ ಹೆಚ್ಚಳದ ಮಾಹಿತಿ, ಬಳಕೆದಾರರ ಲಿಂಗ, ವಯಸ್ಸು, ಇರುವ ಪ್ರದೇಶ, ಲೈಕ್‌ಗಳು, ಕೊನೆಯ ಪೋಸ್ಟ್‌ ಮಾಡಿದ ಸಮಯ, ವಯಸ್ಸು, ಇ–ಮೇಲ್, ಮೊಬೈಲ್ ಫೋನ್ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿ ಸೇರಿವೆ ಎನ್ನಲಾಗಿದೆ.

ದತ್ತಾಂಶ ಸೋರಿಕೆಯಾಗಿರುವುದನ್ನು 'ಬಾಬ್ ಡಯಾಚೆಂಕೊ’ದ ಸೈಬರ್ ಭದ್ರತಾ ತಂಡ ಪತ್ತೆಹಚ್ಚಿದೆ. ಇನ್‌ಸ್ಟಾಗ್ರಾಂನ 19,23,92,954, ಟಿಕ್‌ಟಾಕ್‌ನ 4,21,29,799, ಹಾಗೂ ಯೂಟ್ಯೂಬ್‌ನ 39,55,892 ದತ್ತಾಂಶಗಳು ಮೂರು ಪ್ರತ್ಯೇಕ ಐಪಿವಿ6 ಅಡ್ರೆಸ್‌ಗಳಲ್ಲಿ ಹೋಸ್ಟ್ ಮಾಡಲಾದ ಬಹಿರಂಗಪಡಿಸದ ವೆಬ್‌ಸೈಟ್‌ಗಳಲ್ಲಿ ದಾಖಲಾಗಿವೆ ಎಂದು ತಂಡ ಪತ್ತೆಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು