ಶುಕ್ರವಾರ, ಅಕ್ಟೋಬರ್ 2, 2020
24 °C

‘ಡಿಜಿಟಲ್ ಸುದ್ದಿಗೆ ನಿಯಂತ್ರಣ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನ್‌ಲೈನ್‌ ಸುದ್ದಿ

ಬೆಂಗಳೂರು: ಆನ್‌ಲೈನ್ ಮತ್ತು ಡಿಜಿಟಲ್‌ ಸುದ್ದಿ ವಲಯದ ಮೇಲೆ ಕಾನೂನಿನ ಯಾವುದೇ ನಿಯಂತ್ರಣವಿಲ್ಲ. ಅಗತ್ಯ ಕಾನೂನುಗಳು ಇಲ್ಲದೆಯೇ ಡಿಜಿಟಲ್ ಸುದ್ದಿ ವೇದಿಕೆಗಳು ಕಾರ್ಯನಿರ್ವಹಿಸುತ್ತಿವೆ. ಈ ತೊಡಕುಗಳನ್ನು ನಿವಾರಿಸಲು ಕಾನೂನಾತ್ಮಕ ಬದಲಾವಣೆ ಬೇಕು ಎಂದು ಅಧ್ಯಯನ ವರದಿಯೊಂದು ಶಿಫಾರಸು ಮಾಡಿದೆ.

ವಿಧಿ ಎಂಬ ಸ್ವಯಂಸೇವಾ ಸಂಸ್ಥೆಯು ಸಮೀಕ್ಷೆಯ ಆಧಾರದಲ್ಲಿ ಈ ಅಧ್ಯಯನ ನಡೆಸಿದೆ.

ಜಾಹೀರಾತು ನಿಯಂತ್ರಣ: ಡಿಜಿಟಲ್ ಸುದ್ದಿಗಳ ಜಾಹೀರಾತು ವರಮಾನದ ಮಾದರಿಯು, ಮಾರುಕಟ್ಟೆಯ ವೈಫಲ್ಯಗಳನ್ನು ಸೂಚಿಸುವಂತಿದೆ. ಡಿಜಿಟಲ್‌ ಸುದ್ದಿ ಪೋರ್ಟಲ್‌ಗಳಿಗೆ ಜಾಹೀರಾತು ಮಾರುಕಟ್ಟೆ ಸಿದ್ಧವಾಗಿಸುವುದಕ್ಕಾಗಿ ಆನ್‌ಲೈನ್‌ ಜಾಹೀರಾತು ವೇದಿಕೆಗಳ ಪಾತ್ರ ಮತ್ತು ಪ್ರವೃತ್ತಿಗಳ ಬಗ್ಗೆ ತನಿಖೆ ನಡೆಸುವುದು ಅಗತ್ಯ. ಭಾರತೀಯ ಸ್ಪರ್ಧಾತ್ಮಕತೆ ಆಯೋಗದ ಮೂಲಕ ಈ ಬಗ್ಗೆ ತನಿಖೆ ನಡೆಸುವುದು ಆರಂಭಿಕ ಹೆಜ್ಜೆ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಯುವುದು ಅತ್ಯಂತ ಮುಖ್ಯ. ತಪ್ಪು ಮಾಹಿತಿ ಹರಡುವಿಕೆ ಸರಪಳಿಯ ಎಲ್ಲಾ ಕೊಂಡಿಗಳನ್ನು ಕಳಚುವುದು ಅತ್ಯಂತ ಅವಶ್ಯಕ. ಇದಕ್ಕಾಗಿ ಹಲವು ಹಂತದ ಕಾನೂನುಗಳು ಮತ್ತು ಪೂರಕ ಕಾನೂನುಗಳನ್ನು ಜಾರಿಗೆ ತರಬೇಕು. ಸ್ವಯಂಪ್ರೇರಿತವಾಗಿ ಕೆಲವು ನಿಬಂಧನೆಗಳನ್ನು ಹಾಕಿಕೊಳ್ಳಬೇಕು. ಆಗ ಮಾತ್ರ ತಪ್ಪುಮಾಹಿತಿ ಹರಡುವಿಕೆ ತಡೆಗಟ್ಟಲು ಒಂದು ಸಮಗ್ರ ಕಾರ್ಯತಂತ್ರ ರೂಪಿಸಲು ಸಾಧ್ಯವಾಗುತ್ತದೆ ಎಂದು ಶಿಫಾರಸು ಮಾಡಲಾಗಿದೆ.

ಹೊಣೆಗಾರಿಕೆ ಹೇರಿಕೆ: ಆನ್‌ಲೈನ್‌ ಸುದ್ದಿಯ ಹರಿವು ಸಂವೇದನಾಶೀಲವಾಗಿ ಇರುವಂತೆ ನೋಡಿಕೊಳ್ಳಲು ಡಿಜಿಟಲ್‌ ಸುದ್ದಿ ಮಾಧ್ಯಮಕ್ಕೆ ಸಂಬಂಧಿಸಿದಂತೆ ಇರುವ ಕಾನೂನಿನ ಕೊರತೆಗಳನ್ನು ನೀಗಿಸಬೇಕು. ಸ್ವಯಂಪ್ರೇರಿತ ನೋಂದಣಿ ಪ್ರಕ್ರಿಯೆ ಮತ್ತು ಸಂಪಾದಕೀಯ ಹೊಣೆಗಾರಿಕೆಗಾಗಿ ಸಂಕ್ಷಿಪ್ತವಾದ ನಿಯಮಾವಳಿ ಸಿದ್ಧತೆ ವಿಚಾರದಲ್ಲಿ ಭಾರತೀಯ ಪ್ರೆಸ್‌ ಕೌನ್ಸಿಲ್‌ಗೆ ಸೀಮಿತ ಅಧಿಕಾರಿಗಳನ್ನಷ್ಟೇ ನೀಡಬೇಕು ಎಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು