ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಬುಲೆನ್ಸ್‌ಗೆ ಪೂರಕ: ಜೀವರಕ್ಷಣೆಗೆ ಧಾವಿಸಲಿದೆ ಡ್ರೋನ್‌

ಆಂಬುಲೆನ್ಸ್‌ಗೆ ಪೂರಕವಾಗಿ ಬಳಸಲು ನಡೆಯುತ್ತಿದೆ ಪೂರ್ವತಯಾರಿ
Last Updated 20 ನವೆಂಬರ್ 2020, 1:42 IST
ಅಕ್ಷರ ಗಾತ್ರ

ಬೆಂಗಳೂರು: ಬಹುತೇಕ ರಸ್ತೆ ಅಪಘಾತಗಳಲ್ಲಿ ಗಾಯಾಳುಗಳು ಮೃತಪಡುವುದು ತೀವ್ರ ರಕ್ತಸ್ರಾವದಿಂದ. ಗಾಯಗಳಿಂದ ಹೊರಸೂಸುವ ರಕ್ತವು ತಕ್ಷಣವೇ ಹೆಪ್ಪುಗಟ್ಟುವಂತೆ ಮಾಡುವ ಔಷಧ ಲಭ್ಯ. ಆದರೆ, ಅದನ್ನು ಸಕಾಲದಲ್ಲಿ ಗಾಯಾಳುವಿಗೆ ತಲುಪಿಸುವುದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸಲು ಡ್ರೋನ್‌ಗಳನ್ನು ಬಳಸಲು ನಮ್ಮ ದೇಶದಲ್ಲೂ ಗಂಭೀರ ಪ್ರಯತ್ನಗಳು ನಡೆಯುತ್ತಿವೆ.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2020ರಲ್ಲಿ ಬೆಂಗಳೂರಿನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿಬಿ) ನಿರ್ದೇಶಕ ಪ್ರೊ.ಎಸ್‌.ಸಡಗೋಪನ್‌ ಅವರು ತುರ್ತು ವೈದ್ಯಕೀಯ ಸೇವೆ ತಲುಪಿಸಲು ಡ್ರೋನ್‌ ಬಳಕೆ ಕುರಿತು ವಿಚಾರ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ತುರ್ತು ವೈದ್ಯಕೀಯ ಸೇವೆಗೆ ಡ್ರೋನ್‌ ಬಳಕೆ ಬಗ್ಗೆ ಭಾರತ ಹಾಗೂ ಅಮೆರಿಕ ಜಂಟಿ ಸಹಭಾಗಿತ್ವದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಅಪಘಾತದಲ್ಲಿ ಜನರು ಗಾಯಗೊಂಡ ಬಗ್ಗೆ ಮಾಹಿತಿ ಸಿಕ್ಕಿದರೂ ಎಷ್ಟೋ ಬಾರಿ ಆಂಬುಲೆನ್ಸ್‌ಗಳು ತಕ್ಷಣವೇ ಗಾಯಾಳುಗಳಿರುವ ಸ್ಥಳಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ರಕ್ತ ಹೆಪ್ಪುಗಟ್ಟಿಸುವ ಔಷಧವನ್ನು ವ್ಯಕ್ತಿ ಗಾಯಗೊಂಡ ಎಂಟು ನಿಮಿಷಗಳ ಒಳಗೆ ನೀಡಿದರೆ ಅವರು ಬದುಕಿ ಉಳಿಯುವ ಸಾಧ್ಯತೆ ಹೆಚ್ಚು. ಆಂಬುಲೆನ್ಸ್‌ಗಳಿಗೆ ಪೂರಕವಾಗಿ ತಕ್ಷಣದಲ್ಲೇ ಔಷಧಿಯ ಪೂರೈಕೆಗೆ ಡ್ರೋನ್‌ಗಳನ್ನು ಬಳಸಿಕೊಂಡಿದ್ದೇ ಆದಲ್ಲಿ ಸಾವಿಗೀಡಾಗುವ ಸಾಧ್ಯತೆ ಇರುವ ಶೇ 50ರಷ್ಟು ಗಾಯಾಳುಗಳ ಪ್ರಾಣ ಉಳಿಸಬಹುದು’ ಎಂದರು.

‘ರಕ್ತ ಹೆಪ್ಪುಗಟ್ಟಿಸಲು ಬಳಸುವ ಔಷಧ ಕಿಟ್‌ ಹೆಚ್ಚೆಂದರೆ 400ರಿಂದ 500ಗ್ರಾಂ ತೂಕವಿರುತ್ತದೆ. ಈ ಕಿಟ್‌ ಅನ್ನು ಸಕಾಲದಲ್ಲಿ ಸ್ಥಳಕ್ಕೆ ತಲುಪಿಸುವ ಭರವಸೆದಾಯಕ ಪ್ರಯತ್ನಗಳನ್ನುಐಐಐಟಿಬಿಯು ಪೆನ್ಸಿಲ್ವೆನಿಯಾ ವಿಶ್ವವಿದ್ಯಾಲಯದ ಜೊತೆ ಸೇರಿ ನಡೆಸುತ್ತಿದೆ. ಹೈದರಾಬಾದ್‌ನ ಮಾಸ್ಟರ್‌ ಕಂಟ್ರೋಲ್‌ ಸೆಂಟರ್‌ ಕೂಡಾ ಈ ಪ್ರಯತ್ನಗಳಲ್ಲಿ ನಮಗೆ ನೆರವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT