ದೇಶದಲ್ಲಿ ಶೀಘ್ರದಲ್ಲೇ ದೊರೆಯಲಿದೆ ಸ್ಟಾರ್‌ಲಿಂಕ್ ಇಂಟರ್‌ನೆಟ್: ಎಲೊನ್ ಮಸ್ಕ್

ಬೆಂಗಳೂರು: ಟೆಸ್ಲಾ ಖ್ಯಾತಿಯ ಎಲೊನ್ ಮಸ್ಕ್ ನೇತೃತ್ವದ ಬಹುನಿರೀಕ್ಷಿತ ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆಗಳು ದೇಶದಲ್ಲಿ ಶೀಘ್ರದಲ್ಲೇ ದೊರೆಯಲಿದೆ ಎನ್ನಲಾಗಿದೆ.
ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಪೇಸ್‌ಎಕ್ಸ್ ಸಿಇಒ ಎಲೊನ್ ಮಸ್ಕ್, ಸ್ಟಾರ್‌ಲಿಂಕ್ ಸೇವೆಗಳು ಭಾರತದಲ್ಲಿ ಶೀಘ್ರದಲ್ಲೇ ದೊರೆಯಲಿದೆ. ಸರ್ಕಾರ ಮತ್ತು ನಿಯಂತ್ರಣ ಸಂಸ್ಥೆಗಳಿಂದ ಪೂರಕ ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಡಿಮೆ ದರಕ್ಕೆ ಎಲ್ಲೆಡೆ ಇಂಟರ್‌ನೆಟ್ ಸೇವೆ ಒದಗಿಸುವ ಉದ್ದೇಶವನ್ನು ಸ್ಟಾರ್‌ಲಿಂಕ್ ಹೊಂದಿದೆ.
ಈಗಾಗಲೇ ಆಸ್ಟ್ರೇಲಿಯಾ, ಕೆನಡಾ, ಚಿಲಿ, ಇಂಗ್ಲೆಂಡ್ ಮತ್ತು ಅಮೆರಿಕ ಸಹಿತ 14 ವಿವಿಧ ರಾಷ್ಟ್ರಗಳಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆ ಒದಗಿಸುತ್ತಿದೆ.
ಮಿನಿ ಉಪಗ್ರಹ ಬಳಸಿಕೊಂಡು, ಅದರ ಮೂಲಕ ಹೆಚ್ಚಿನ ವ್ಯಾಪ್ತಿಯನ್ನು ತಲುಪುವ ಯೋಜನೆಯನ್ನು ಸ್ಪೇಸ್‌ಎಕ್ಸ್ ಸಮೂಹದ ಸ್ಟಾರ್‌ಲಿಂಕ್ ಹೊಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.