Whatsapp: ಫೇಸ್‌ಬುಕ್ ಜತೆ ಮಾಹಿತಿ ಹಂಚಿಕೆ ಬಗ್ಗೆ ವಾಟ್ಸ್‌ಅ್ಯಪ್ ಸ್ಪಷ್ಟನೆ

ಜಾಗತಿಕವಾಗಿ ಅತಿಹೆಚ್ಚಿನ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅ್ಯಪ್ ವಾಟ್ಸ್‌ಅ್ಯಪ್ ಇತ್ತೀಚೆಗೆ ಹೊಸ ಅಪ್‌ಡೇಟ್ ಬಿಡುಗಡೆ ಮಾಡಿದೆ. ಅದರಲ್ಲಿ ಬಳಕೆದಾರರ ವಿವರವನ್ನು ಫೇಸ್‌ಬುಕ್ ಜತೆ ಹಂಚಿಕೊಳ್ಳುವುದಾಗಿ ಹೇಳಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈ ಮಧ್ಯೆ ಹೊಸದಾಗಿ ಹೇಳಿಕೆ ಬಿಡುಗಡೆ ಮಾಡಿದ್ದು, ದತ್ತಾಂಶ ಹಂಚಿಕೆ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದಿದೆ. ಫೇಸ್‌ಬುಕ್ ಒಡೆತನದ ವಾಟ್ಸ್‌ಅ್ಯಪ್ ಈಗಾಗಲೇ ಬಳಕೆದಾರರಿಗೆ ಹೊಸ ಅಪ್‌ಡೇಟ್ ಬಗ್ಗೆ ನೋಟಿಫಿಕೇಶನ್ ಕಳುಹಿಸಲಾರಂಭಿಸಿದೆ.
ವಾಟ್ಸ್‌ಅ್ಯಪ್ ಬ್ಯುಸಿನೆಸ್ ಆವೃತ್ತಿ ಕೂಡ ಪರಿಚಯಿಸಿದ್ದು, ಅದನ್ನು ಬಳಸುತ್ತಿರುವವರಿಗೆ ಉದ್ಯಮ ನಿರ್ವಹಣೆ ಮತ್ತು ಗ್ರಾಹಕರನ್ನು ಸೆಳೆಯಲು ಈ ಕ್ರಮ ಅನುಕೂಲವಾಗಲಿದೆ ಎಂದು ಫೇಸ್‌ಬುಕ್ ಹೇಳಿತ್ತು. ಫೆ. 8, 2021ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಹೇಳಿತ್ತು. ಆದರೆ ಫೇಸ್‌ಬುಕ್ ಈ ಕ್ರಮಕ್ಕೆ ವಿರೋಧ ಕೇಳಿಬಂದಿದ್ದರಿಂದ, ಬಳಕೆದಾರರ ವೈಯಕ್ತಿಕ ಮಾಹಿತಿ ಹಂಚಿಕೆ ಇರುವುದಿಲ್ಲ, ಗ್ರಾಹಕರ ದತ್ತಾಂಶ ಸುರಕ್ಷಿತವಾಗಿರಲಿದೆ ಎಂದು ಹೇಳಿದೆ.
ಟೆಲಿಗ್ರಾಂ ಅ್ಯಪ್ ಡೌನ್‌ಲೋಡ್ ಹೆಚ್ಚಳ
ವಾಟ್ಸ್‌ಅ್ಯಪ್ ಹೊಸ ಅಪ್‌ಡೇಟ್ ಜನರಲ್ಲಿ ಗೊಂದಲ ಮೂಡಿಸಿರುವುದು ಮತ್ತು ಅಸಮಾಧಾನಕ್ಕೆ ಕಾರಣವಾಗಿರುವಂತೆಯೇ, ಟೆಲಿಗ್ರಾಂ ಮತ್ತು ಸಿಗ್ನಲ್ ಅ್ಯಪ್ ಬಳಕೆದಾರರ ಸಂಖ್ಯೆ ಏರಿಕೆಯಾಗಿದೆ. ಸಾಮಾಜಿಕ ತಾಣಗಳಲ್ಲೂ ವಾಟ್ಸ್‌ಅ್ಯಪ್ ಅಪ್‌ಡೇಟ್ ಬಗ್ಗೆ ಟ್ರೋಲ್ ಹರಿದಾಡುತ್ತಿದೆ. ಜತೆಗೆ ಟೆಸ್ಲಾ ಮುಖ್ಯಸ್ಥ ಎಲೊನ್ ಮಸ್ಕ್ ಕೂಡ ಜನರಿಗೆ ವಾಟ್ಸ್‌ಅ್ಯಪ್ ಬಿಟ್ಟುಬಿಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: Parler App: ಗೂಗಲ್ ಪ್ಲೇ ಸ್ಟೋರ್ನಿಂದ ಪಾರ್ಲರ್ ಅ್ಯಪ್ ಔಟ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.