ಶುಕ್ರವಾರ, ಏಪ್ರಿಲ್ 16, 2021
31 °C

ಇನ್‌ಸ್ಟಾಗ್ರಾಮ್ ರೀಲ್ಸ್ ವಿಡಿಯೊ ಫೇಸ್‌ಬುಕ್‌ನಲ್ಲಿ ಹಂಚಿಕೆಗೆ ಹೊಸ ವೈಶಿಷ್ಟ್ಯ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇನ್‌ಸ್ಟಾಗ್ರಾಮ್‌ನ ರೀಲ್ಸ್‌ನಲ್ಲಿ ಕ್ರಿಯೇಟ್ ಮಾಡಲಾಗುವ ಕಿರು ವಿಡಿಯೊ ತುಣುಕುಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯವನ್ನು ಭಾರತದಲ್ಲಿ ಪರೀಕ್ಷಿಸುತ್ತಿರುವುದಾಗಿ ಫೇಸ್‌ಬುಕ್ ಸೋಮವಾರ ತಿಳಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ 30 ಸೆಕೆಂಡುಗಳ ಉದ್ದದ ರೀಲ್‌ಗಳನ್ನು ರಚಿಸುವ ಕೆಲವು ಭಾರತೀಯ ಬಳಕೆದಾರರಿಗೆ ಅವುಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲು ಶಿಫಾರಸು ಮಾಡುವ ಆಯ್ಕೆಯನ್ನು ಪರೀಕಾರ್ಥ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಹೆಚ್ಚುವರಿಯಾಗಿ, ಮುಖ್ಯ ಅಪ್ಲಿಕೇಶನ್‌ನಲ್ಲಿ ರೀಲ್ಸ್ ವೈಶಿಷ್ಟ್ಯವು ತನ್ನದೇ ಆದ ಆವೃತ್ತಿಯನ್ನು ಹೊಂದಿರುತ್ತದೆ ಎಂದು ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆ ಫೇಸ್‌ಬುಕ್ ಹೇಳಿದೆ. .

"ಭಾರತದಲ್ಲಿ, ಇನ್‌ಸ್ಟಾಗ್ರಾಮ್ ಕಂಟೆಂಟ್ ಸೃಷ್ಟಿಕರ್ತರು ತಮ್ಮ ರೀಲ್‌ಗಳನ್ನು ಫೇಸ್‌ಬುಕ್‌ನಲ್ಲಿ ಶಿಫಾರಸು ಮಾಡಲು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ನಾವು ಪರೀಕ್ಷಿಸುತ್ತಿದ್ದೇವೆ ... ಕಂಟೆಂಟ್ ಸೃಷ್ಟಿಕರ್ತರು ಈ ಮೂಲಕ ಹೊಸ ವೀಕ್ಷಕರನ್ನು ತಲುಪಬಹುದು. ಜನರು ಹೆಚ್ಚು ಮನರಂಜನೆಯ ವಿಷಯವನ್ನು ರಚಿಸಿ ಹಂಚಿಕೊಳ್ಳಬಹುದು" ಎಂದು ಫೇಸ್‌ಬುಕ್ ವಕ್ತಾರರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಬೈಟ್ಡ್ಯಾನ್ಸ್ನ ಟಿಕ್ಟಾಕ್ನಂಥ ಒಂದು ಫೀಚರ್ ಇನ್ಸ್ಟಾಗ್ರಾಮ್ನ ರೀಲ್ನಲ್ಲಿದೆ. ಇದರಲ್ಲಿ ಬಳಕೆದಾರರು ಸಣ್ಣದಾದ ಮೊಬೈಲ್-ಸ್ನೇಹಿ ವಿಡಿಯೊಗಳನ್ನ ರೆಕಾರ್ಡ್ ಮಾಡಬಹುದು. ಮತ್ತು ಮ್ಯೂಸಿಕ್ ಲೈಬ್ರರಿಯಿಂದ ಬೇಕಾದ ಸಂಗೀತವನ್ನು ಸೇರಿಸಬಹುದು ಮತ್ತು ಸ್ಪೆಷಲ್ ಎಫೆಕ್ಟ್ಸ್ ಕೊಡಬಹುದು.

ಕಳೆದ ವರ್ಷ ಜೂನ್‌ನಲ್ಲಿ ಭಾರತದಲ್ಲಿ ಟಿಕ್‌ಟಾಕ್ ನಿಷೇಧದ ಹಿನ್ನೆಲೆಯಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಲಾಗಿತ್ತು. ಸಣ್ಣ ವಿಡಿಯೊಗಳ ರಚನೆ ಬಗ್ಗೆ ಯುವ ಸಮುದಾಯದಲ್ಲಿ ಹುಚ್ಚೆಬ್ಬಿಸಿತ್ತು. ಹಾಗಾಗಿ, ಟಿಕ್ ಟಾಕ್ ನಿಷೇಧದ ಬಳಿಕ ಇನ್‌ಸ್ಟಾಗ್ರಾಮ್ ಈ ಹೆಜ್ಜೆ ಇಟ್ಟಿತ್ತು.

ಟಿಕ್‌ಟಾಕ್‌ನ ಯಶಸ್ಸು ಅನೇಕ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಿರು-ವಿಡಿಯೊ ಸೇವೆಗಳನ್ನು ಸೇರಿಸಲು ಪ್ರೇರೇಪಿಸಿದೆ, ಕಳೆದ ನವೆಂಬರ್‌ನಲ್ಲಿ ಸ್ನ್ಯಾಪ್‌ ಚಾಟ್ 'ಸ್ಪಾಟ್‌ಲೈಟ್' ಅನ್ನು ಹೊರತಂದಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು