ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದ್ರೆಜ್‌‌ನಿಂದ ಸೆನ್ಸರ್ ಆಧಾರಿತ ನೋಟು ಎಣಿಕೆ ಯಂತ್ರ ಬಿಡುಗಡೆ

Last Updated 29 ಜನವರಿ 2022, 15:15 IST
ಅಕ್ಷರ ಗಾತ್ರ

ಮುಂಬೈ: ಗೋದ್ರೆಜ್‌ ಸಮೂಹದ ‘ಗೋದ್ರೆಜ್‌ ಸೆಕ್ಯುರಿಟಿ ಸಲ್ಯೂಷನ್ಸ್‌’ ಸೆನ್ಸರ್ ಆಧಾರಿತ ನೋಟು (ಕರೆನ್ಸಿ) ಎಣಿಕೆ ಯಂತ್ರ ‘ವ್ಯಾಲ್ಯುಮ್ಯಾಟಿಕ್’ ಅನ್ನು ಬಿಡುಗಡೆ ಮಾಡಿದೆ.

ಬ್ಯಾಂಕಿಂಗ್, ಹಣಕಾಸು ಸೇವೆಗಳು ಹಾಗೂ ವಿಮೆ (ಬಿಎಫ್‍ಎಸ್‍ಐ), ರಿಟೇಲ್ ಮತ್ತು ವಾಣಿಜ್ಯ ವಲಯಕ್ಕೆ ಅನುಕೂಲವಾಗುವಂತೆ ಇಮೇಜ್ ಸೆನ್ಸರ್ ತಂತ್ರಜ್ಞಾನ (ಸಿಐಎಸ್) ಆಧಾರಿತ ನೋಟು ಎಣಿಕೆ ಯಂತ್ರ ಇದಾಗಿದೆ.

‘ವ್ಯಾಲ್ಯುಮ್ಯಾಟಿಕ್’ ಸಾಧನದ ಮೂಲಕ ನೋಟುಗಳ ಮುಖಬೆಲೆಯನ್ನು ನಿಖರವಾಗಿ ಪತ್ತೆಹಚ್ಚುವುದರ ಜತೆಗೆ ನಕಲಿ ನೋಟುಗಳ ಹಾವಳಿ ತಪ್ಪಿಸಬಹುದು’ ಎಂದು ಕಂಪನಿ ಹೇಳಿದೆ.

ಪ್ರಮುಖ ಭದ್ರತಾ ಸೇವೆಗಳನ್ನು ಒದಗಿಸುವ ಗೋದ್ರೇಜ್ ಸೆಕ್ಯುರಿಟಿ ಸಲ್ಯೂಷನ್ಸ್‌, ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾತ್ರವಲ್ಲದೆ ರಿಟೇಲ್ ಮತ್ತು ವಾಣಿಜ್ಯ ಕ್ಷೇತ್ರಗಳಿಗೂ ಕರೆನ್ಸಿ ನಿರ್ವಹಣೆಯ ಸೇವೆ ಹಾಗೂ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ.

2024ರ ವೇಳೆಗೆ ನೋಟು ಎಣಿಕೆ ಯಂತ್ರಗಳ ಮಾರುಕಟ್ಟೆಯಲ್ಲಿನ ಹೂಡಿಕೆಯನ್ನು ಶೇ 6ರಿಂದ ಶೇ 15ರವರೆಗೆ ಹೆಚ್ಚಿಸುವ ಗುರಿ ಹೊಂದಿರುವುದಾಗಿ ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT