ಗುರುವಾರ , ಏಪ್ರಿಲ್ 9, 2020
19 °C

ಗೂಗಲ್‌ ಅಸಿಸ್ಟೆಂಟ್‌ ಬರಲಿವೆ ಹೊಸ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಗೂಗಲ್‌ ಅಸಿಸ್ಟೆಂಟ್‌ನಲ್ಲಿ ಇನ್ನಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಲಾಸ್‌ ವೆಗಾಸ್‌ನಲ್ಲಿ ಈಚೆಗೆಷ್ಟೇ ನಡೆದ ಕನ್ಸ್ಯೂಮರ್‌ ಎಲೆಕ್ಟ್ರಾನಿಕ್‌ ಷೋದಲ್ಲಿ (ಸಿಇಎಸ್‌) ಈ ಕುರಿತು ಮಾಹಿತಿ ನೀಡಿದೆ. ಅವುಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಪೂರ್ವ ನಿಯೋಜನೆ

ಗೂಗಲ್‌ ಅಸಿಸ್ಟೆಂಟ್‌ ಜತೆ ಸಂಪರ್ಕಿಸಿರುವ ಸ್ಮಾರ್ಟ್‌ ಸಾಧನಗಳನ್ನು ಯಾವ ಸಮಯಕ್ಕೆ ಆನ್‌ ಅಥವಾ ಆಫ್‌ ಮಾಡಬಹುದು ಎನ್ನುವ ಬಗ್ಗೆ ಮುಂಚಿತವಾಗಿಯೇ ನಿಯೋಜನೆ (schedule action) ಮಾಡಬಹುದು.

ಉದಾಹರಣೆಗೆ: ಬೆಳಗ್ಗೆ ಆರು ಗಂಟೆಗೆ ಕಾಫಿ ಬೇಕು ಎಂದಾದರೆ, Hey Google, run the coffee maker at 6 a.m”. ಎಂದು ಮುನ್ಸೂಚನೆ ಕೊಟ್ಟಿದ್ದರೆ, ನೀವು ಏಳುವ ಹೊತ್ತಿಗೆ ಬಿಸಿ ಬಿಸಿ ಕಾಫಿ ಸಿದ್ಧವಾಗಿರುತ್ತದೆ. ಗೂಗಲ್‌ ಹೋಮ್ ಆ್ಯಪ್‌ ಮೂಲಕ ಏರ್‌ ಪ್ಯೂರಿಫೈಯರ್‌, ಬಾತ್‌ ಟಬ್‌, ವಾಕ್ಯೂಮ್‌ ಸೇರಿದಂತೆ 20ಕ್ಕೂ ಅಧಿಕ ಸಾಧನಗಳನ್ನು ನಿಯಂತ್ರಿಸಬಹುದಾಗಿದೆ.

ನೋಟ್ಸ್‌ ಮತ್ತು ಸ್ಪೀಡ್‌ ಡಯಲ್‌

ನೋಟ್‌ಗಳನ್ನು ಸೃಷ್ಟಿಸುವ ಮತ್ತು ನಿರ್ದಿಷ್ಟ ನಂಬರ್‌ಗೆ ತಕ್ಷಣವೇ ಸಂಪರ್ಕಿಸುವ ಕೆಲಸವೂ ಮಾಡಬಹುದಾಗಿದೆ.

ಕೇಳಿಸಿಕೊಳ್ಳುವುದು

ನಿಮಗಿಷ್ಟವಾದ ವೆಬ್‌ ಕಂಟೆಂಟ್‌ ಅನ್ನು ಜೋರಾಗಿ, ಹೆಚ್ಚು ಆಪ್ತವಾಗಿ ಸಹಜವಾದ ಧ್ವನಿಯಲ್ಲಿ (listening webpages) ಓದಿ ಹೇಳಲಿದೆ. ಸುದ್ದಿ, ಲೇಖನಗಳು, ಬ್ಲಾಗ್‌ ಬರಹಗಳನ್ನು ಕೇಳಿಸಿಕೊಳ್ಳಬಹುದು. ಒಂದು ಭಾಷೆಯಲ್ಲಿರುವ ಕಂಟೆಂಟ್‌ ಅನ್ನು 42 ಭಾಷೆಗಳಿಗೆ ಭಾಷಾಂತರಿಸಬಲ್ಲದು. ಆಂಡ್ರಾಯ್ಡ್‌ 5 ಮತ್ತು ನಂತರದ ವರ್ಷನ್‌ಗಳಿರುವ ಫೋನ್‌ಗಳಲ್ಲಿಯೂ ಈ ವೈಶಿಷ್ಟ್ಯ ಬಳಕೆಗೆ ಲಭ್ಯವಾಗಲಿದೆ.

ಪ್ರೈವಸಿ ಕಂಟ್ರೋಲ್‌:

ಬೇರೆಯವರಿಗೆ ಕೊಟ್ಟ ಸೂಚನೆಯನ್ನು ನಿಮ್ಮ ಗೂಗಲ್‌ ಅಸಿಸ್ಟೆಂಟ್‌ ಪಾಲಿಸಬಾರದು ಎಂದಾದರೆ, “Hey Google, that wasn’t for you” ಎಂದು ಹೇಳಿದರೆ ಅದನ್ನು ಅಲ್ಲಿಗೇ ಬಿಟ್ಟುಬಿಡುವ ಆಯ್ಕೆ ನೀಡಲಾಗುತ್ತಿದೆ. ಅಂತೆಯೇ, ಕೆಲವು ವೈಯಕ್ತಿಕ ಮಾಹಿತಿಗಳನ್ನು ಸೇವ್ ಮಾಡಿಕೊಳ್ಳದಂತೆ ನಿಯಂತ್ರಿಸಲು “Hey Google, are you saving my audio data?” ಎಂದು ಕೇಳಿದರೆ, ಪ್ರೈವಸಿ ಸೆಟ್ಟಿಂಗ್ಸ್‌ ಆಯ್ಕೆ ತೆರೆದುಕೊಳ್ಳುತ್ತದೆ. ಆಗ ಅಲ್ಲಿ ಬದಲಾವಣೆಗಳನ್ನು ಮಾಡಬಹುದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು