Google Chrome: ಭದ್ರತಾ ದೋಷ ಸರಿಪಡಿಸಿದ ಗೂಗಲ್

ಬೆಂಗಳೂರು: ಸರ್ಚ್ ಇಂಜಿನ್ ಸೇವೆ ಒದಗಿಸುವ ಗೂಗಲ್ ಕ್ರೋಮ್, ಬ್ರೌಸರ್ ಅಪ್ಲಿಕೇಶನ್‌ನಲ್ಲಿದ್ದ 10 ದೋಷಗಳನ್ನು ಸರಿಪಡಿಸಿದೆ.
ಕಂಪ್ಯೂಟರ್‌ಗಳಲ್ಲಿ ಹೆಚ್ಚಿನ ಬಳಕೆಯಲ್ಲಿರುವ ಗೂಗಲ್ ಕ್ರೋಮ್‌ನಲ್ಲಿ ಹಲವು ಭದ್ರತಾ ಲೋಪವಿದ್ದು, ಅವುಗಳನ್ನು ಭದ್ರತಾ ಸಂಶೋಧಕರು ಪತ್ತೆ ಹಚ್ಚಿದ್ದರು.
ದೋಷವನ್ನು ಒಪ್ಪಿಕೊಂಡಿದ್ದ ಗೂಗಲ್, ನಂತರ ಅವುಗಳನ್ನು ಹಂತಹಂತವಾಗಿ ಸರಿಪಡಿಸಿದೆ.
ಗೂಗಲ್ ಕ್ರೋಮ್‌ನಲ್ಲಿದ್ದ ಭದ್ರತಾ ಲೋಪದಿಂದಾಗಿ ಹ್ಯಾಕರ್ಸ್ ಸುಲಭದಲ್ಲಿ ಬಳಕೆದಾರರ ಮಾಹಿತಿ ಕದಿಯುವ ಆತಂಕವಿತ್ತು. ಆದರೆ ಅವುಗಳನ್ನು ಸರಿಪಡಿಸಲಾಗಿದೆ ಎಂದು ಗೂಗಲ್ ಹೇಳಿದೆ.
ಜತೆಗೆ ದೋಷಗಳನ್ನು ಪತ್ತೆಹಚ್ಚಿದ್ದ ಸೈಬರ್ ತಂತ್ರಜ್ಞರಿಗೆ ಬಹುಮಾನದ ಮೊತ್ತವನ್ನು ಗೂಗಲ್ ನೀಡಿದೆ.
ಗೂಗಲ್ಗೆ ಮತ್ತೆ ದಂಡ ವಿಧಿಸಿದ ಸಿಸಿಐ
ಅಲ್ಲದೆ, ಗೂಗಲ್ ಕ್ರೋಮ್ ಬ್ರೌಸರ್ ಅಪ್‌ಡೇಟ್ ಬಿಡುಗಡೆ ಮಾಡಿದ್ದು, ವಿಂಡೋಸ್ ಬಳಕೆದಾರರು ಕೂಡಲೇ 107.0.5304.106/.107 ಆವೃತ್ತಿ ಡೌನ್‌ಲೋಡ್ ಮಾಡಿಕೊಂಡು ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
Satellite Phones: ಸ್ಯಾಟಲೈಟ್ ಫೋನ್ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.