ಭಾನುವಾರ, ಜೂನ್ 26, 2022
26 °C

ಕ್ರೋಮ್‌ನಲ್ಲಿ 'ಗೂಗಲ್‌ ಲೆನ್ಸ್‌': ಚಿತ್ರ ಮಾಹಿತಿಯ ಹುಡುಕಾಟ ಈಗ ಇನ್ನಷ್ಟು ಸುಲಭ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕ್ರೋಮ್‌ನಲ್ಲಿ ಗೂಗಲ್‌ ಲೆನ್ಸ್‌

ಚಿತ್ರದ ಮಾಹಿತಿ, ಅದರ ಮೂಲ, ವಿವರ ಎಲ್ಲವನ್ನೂ ಕ್ಷಣದಲ್ಲಿ ಹುಡುಕಿ ಮುಂದಿಡಲು 'ಗೂಗಲ್‌ ಲೆನ್ಸ್‌' ಹೆಚ್ಚು ಬಳಕೆಯಲ್ಲಿದೆ. ಚಿತ್ರಗಳ ಮಾಹಿತಿ ತಿಳಿಯುವ ತಂತ್ರಜ್ಞಾನವು ಹುಡುಕು ತಾಣ ಗೂಗಲ್‌ ಕ್ರೋಮ್‌ನಲ್ಲಿ ಈಗ ಮತ್ತಷ್ಟು ಸುಲಭವಾಗಿದೆ.

ಹಿಂದಿನಿಂದಲೂ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಆ್ಯಪ್‌ಗಳು ಅಥವಾ ಕ್ಯಾಮೆರಾ ಆ್ಯಪ್‌ಗಳ ಮೂಲಕ 'ಗೂಗಲ್‌ ಲೆನ್ಸ್‌' ಬಳಕೆಗೆ ಸಿಗುತ್ತಿದೆ. 2021ರಿಂದ ಕ್ರೋಮ್‌ ಬ್ರೌಸರ್‌ ಮೂಲಕ ಡೆಸ್ಕ್‌ಟಾಪ್‌ನಲ್ಲೂ ಬಳಕೆಗೆ ಸಿಗುತ್ತಿದೆ. ಈ ಹಿಂದೆ, ಕ್ರೋಮ್‌ನಲ್ಲಿ 'ಗೂಗಲ್‌ ಲೆನ್ಸ್‌' ಹುಡುಕಾಟಕ್ಕೆ ಆಯ್ಕೆ ಮಾಡಿದರೆ, ಹೊಸ ವೆಬ್‌ಪೇಜ್‌ ತೆರೆದುಕೊಳ್ಳುತ್ತಿತ್ತು. ಈಗ ಗೂಗಲ್‌ ಮಾಡಿರುವ ಅಪ್‌ಡೇಟ್‌ನಿಂದಾಗಿ ಚಿತ್ರ ಇರುವ ಪುಟದಲ್ಲಿಯೇ ಬಲ ಭಾಗದಲ್ಲಿ ತೆರೆದುಕೊಳ್ಳುವ ಪ್ಯಾನೆಲ್‌ನಿಂದ ಅಗತ್ಯ ಮಾಹಿತಿ ಪಡೆಯಬಹುದು.

ಏನು ಗೂಗಲ್‌ ಲೆನ್ಸ್‌ ಉಪಯೋಗ?

* ಫೋಟೊ ಮೂಲವನ್ನು ಅಥವಾ ಎಲ್ಲೆಲ್ಲಿ ಆ ಚಿತ್ರವು ಬಳಕೆಯಾಗಿದೆ/ ಪ್ರಕಟವಾಗಿದೆ ಎಂಬುದನ್ನು ತಿಳಿಯಲು

* ಚಿತ್ರದಲ್ಲಿರುವ ವಸ್ತು, ಸ್ಥಳ, ವ್ಯಕ್ತಿ ಅಥವಾ ಜೀವಿಯ ಕುರಿತು ಮಾಹಿತಿ ಪಡೆಯಲು

 

ಕ್ರೋಮ್‌ನಲ್ಲಿ ಗೂಗಲ್‌ ಲೆನ್ಸ್‌ ಬಳಸುವುದು ಹೇಗೆ?

 

* ಮಾಹಿತಿ ತಿಳಿಯಬೇಕಿರುವ ಚಿತ್ರ/ ಅದರ ಪುಟ ತೆರೆಯಿರಿ

* ಆ ಚಿತ್ರದ ಮೇಲೆ ರೈಟ್‌ ಕ್ಲಿಕ್‌ ಮಾಡಿ

* ಹಲವು ಆಯ್ಕೆಗಳಿರುವ ಮೆನು ತೆರೆಯುತ್ತದೆ

* ಅದರಲ್ಲಿ 'Search image with Google Lens'ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ

* ಡೆಸ್ಕ್‌ಟಾಪ್‌ ಸ್ಕ್ರೀನ್‌ನ ಬಲ ಭಾಗದಲ್ಲಿ ಚಿತ್ರಕ್ಕೆ ಸಂಬಂಧಿಸಿದ ವಿವರ ಕಾಣುತ್ತದೆ

* ಅಲ್ಲಿ ಚಿತ್ರದ ಯಾವುದೇ ಭಾಗದಲ್ಲಿ ಕ್ಲಿಕ್‌ ಮಾಡಿ, ಹುಡುಕಾಟ ಅಗತ್ಯವಿರುವ ಭಾಗವನ್ನು ಆಯ್ಕೆ ಮಾಡಬಹುದು. ಸರ್ಚ್‌, ಟೆಕ್ಸ್ಟ್‌, ಟ್ರಾನ್ಸ್‌ಲೇಟ್‌ ಆಯ್ಕೆಗಳು ಕೆಳಭಾಗದಲ್ಲಿ ಹಾಗೂ ಚಿತ್ರದ ಮೂಲ ಹುಡುಕುವ ಇಮೇಜ್‌ ಸೋರ್ಸ್‌ ಆಯ್ಕೆಯು ಮೇಲ್ಭಾಗದಲ್ಲಿ ಕಾಣಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು