ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Year in Search 2022: ವಾರ್ಷಿಕ ಸರ್ಚ್ ಟ್ರೆಂಡ್ ಬಿಡುಗಡೆ ಮಾಡಿದ ಗೂಗಲ್

ಗೂಗಲ್ ದೇಶದಲ್ಲಿ ಈ ವರ್ಷದ ಸರ್ಚ್ ಟ್ರೆಂಡ್ ವಿವರ ಬಿಡುಗಡೆ
Last Updated 8 ಡಿಸೆಂಬರ್ 2022, 11:11 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಸರ್ಚ್ ಇಂಜಿನ್ ದೈತ್ಯ ಗೂಗಲ್, ದೇಶದಲ್ಲಿ ವಾರ್ಷಿಕ ಟ್ರೆಂಡ್‌ಗಳನ್ನು ಬಿಡುಗಡೆ ಮಾಡಿದೆ. ಭಾರತೀಯರು ಯಾವ ವಿಚಾರದ ಕುರಿತು ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಿದ್ದರು ಎನ್ನುವ ಬಗ್ಗೆ ವಿವರವನ್ನು ಕಲೆ ಹಾಕಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಕುರಿತು ಈ ವರ್ಷ ಹೆಚ್ಚಿನ ಜನರು ಹುಡುಕಾಟ ನಡೆಸಿದ್ದಾರೆ. ನಂತರದ ಸರ್ಚ್, ಕೋವಿನ್ ಕುರಿತದ್ದಾಗಿದೆ. ಬಳಿಕ, ಫಿಫಾ ವರ್ಲ್ಡ್ ಕಪ್, ಏಷ್ಯಾ ಕಪ್, ಐಸಿಸಿ ಮೆನ್ಸ್ ಟಿ20 ವರ್ಲ್ಡ್ ಕಪ್, ಬ್ರಹ್ಮಾಸ್ತ್ರ ಸಿನಿಮಾ, ಇ–ಶ್ರಮ್ ಕಾರ್ಡ್, ಕಾಮನ್‌ವೆಲ್ತ್ ಗೇಮ್ಸ್, ಕೆಜಿಎಫ್ ಚಾಪ್ಟರ್–2, ಇಂಡಿಯನ್ ಸೂಪರ್ ಲೀಗ್ ಇದು ಈ ವರ್ಷದ ಟಾಪ್ 10 ಸರ್ಚ್‌ ಆಗಿದೆ.

ವ್ಯಕ್ತಿಗಳ ವಿಚಾರಕ್ಕೆ ಸಂಬಂಧಿಸಿದರೆ, ನೂಪುರ್ ಶರ್ಮಾ ಅವರ ಬಗ್ಗೆ ಹೆಚ್ಚಿನ ಜನರು ಹುಡುಕಾಟ ನಡೆಸಿದ್ದಾರೆ. ನಂತರದಲ್ಲಿ, ದ್ರೌಪದಿ ಮುರ್ಮು, ರಿಷಿ ಸುನಾಕ್, ಲಲಿತ್ ಮೋದಿ, ಸುಷ್ಮಿತಾ ಸೇನ್, ಅಂಜಲಿ ಅರೋರಾ, ಅಬ್ದು ರೋಜಿಕ್, ಏಕನಾಥ್ ಶಿಂದೆ, ಪ್ರವೀಣ್ ತಂಬೆ, ಅಂಬರ್ ಹರ್ಡ್ ಬಗ್ಗೆ ಹೆಚ್ಚು ಹುಡುಕಾಟ ದಾಖಲಾಗಿದೆ.

ಕೋವಿಡ್ ವ್ಯಾಕ್ಸಿನ್ ನಿಯರ್ ಮಿ ಎನ್ನುವುದು ಮತ್ತೊಂದು ಸರ್ಚ್ ಆಗಿದ್ದರೆ, ಹೌ ಟು ಡೌನ್‌ಲೋಡ್ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಎನ್ನುವುದು ‘ಹೌ ಟು‘ ವಿಭಾಗದಲ್ಲಿ ಹೆಚ್ಚು ಹಿಟ್ಸ್ ಕಂಡಿದೆ.

ರೆಸಿ‍ಪಿ ವಿಭಾಗದಲ್ಲಿ ಪನೀರ್ ಪಸಂದಾ ಗರಿಷ್ಠ ಸರ್ಚ್ ಇದ್ದರೆ, ಲತಾ ಮಂಗೇಷ್ಕರ್ ನಿಧನದ ಕುರಿತು ಗರಿಷ್ಠ ಜನರು ಹುಡುಕಾಟ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT