ಗೂಗಲ್ ಕ್ಯಾಮರಾ ಆ್ಯಪ್, ಆಂಡ್ರಾಯ್ಡ್‌ನಲ್ಲಿರುವ ಅತ್ಯುತ್ತಮ ಫೋಟೋಗ್ರಾಫಿ ಆ್ಯಪ್‌ಗಳಲ್ಲಿ ಒಂದಾಗಿದೆ. ಆದರೆ ಇದು ಮಧ್ಯ ಶ್ರೇಣಿಯ ಹಾಗೂ ಟಾಪ್ ಎಂಡ್ ಮಾದರಿಗಳಿಗೆ ಸೀಮಿತವಾಗಿತ್ತು.
ಬಳಿಕ ಸರ್ಚ್ ಎಂಜಿನ್ ದೈತ್ಯ ಗೂಗಲ್, ಬಜೆಟ್ ಫೋನ್‌ಗಳಿಗಾಗಿ ಕಡಿಮೆ ಸಾಮರ್ಥ್ಯದ ಹಾರ್ಡ್‌ವೇರ್‌ನ ಫೋನ್‌ಗಳಲ್ಲಿಯೂ ಕಾರ್ಯಾಚರಿಸುವ ಕ್ಯಾಮೆರಾ ಗೋ ಆ್ಯಪ್ ಪರಿಚಯಿಸಿತು. ಇದರಿಂದ ಬಳಕೆದಾರರಿಗೆ ಉತ್ತಮ ಅನುಭವ ಹೆಚ್ಚಳಗೊಂಡಿತ್ತಲ್ಲದೆ, ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು.
ಕಡಿಮೆ ಅಥವಾ ಮಂದ ಬೆಳಕಿನ ವಾತಾವರಣದಲ್ಲೂ ಬಜೆಟ್ ಮೊಬೈಲ್‌ಗಳ ಕ್ಯಾಮರಾ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಗೂಗಲ್, ಅಕ್ಟೋಬರ್‌ನಲ್ಲಿ ಕ್ಯಾಮರಾ ಗೋ ಅಪ್ಲಿಕೇಷನ್‌ಗೆ ನೈಟ್ ಮೋಡ್ ಅನ್ನು ಪರಿಚಯಿಸಿತು. ಇದರಿಂದ ರಾತ್ರಿಯಲ್ಲೂ ಹೈ-ಕ್ವಾಲಿಟಿ ಚಿತ್ರವನ್ನು ಸೆರೆಹಿಡಿಯಲು ಸಾಧ್ಯವಾಯಿತು.
ಈಗ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಗೂಗಲ್, ಹೈ ಡೈನಾಮಿಕ್ ರೇಂಜ್ (ಎಚ್‌ಡಿಆರ್) ಮೋಡ್ ಪರಿಚಯಿಸಿದೆ. ಎಚ್‌ಡಿಆರ್‌ನೊಂದಿಗೆ, ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚು ಡಿಟೇಲ್ ಹಾಗೂ ವೈಡೆನಿಂಗ್ ರೇಂಜ್‌ನಲ್ಲಿ ಅದ್ಭುತವಾದ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಗಲಿದೆ.
ಬೇರೆ ಬೇರೆ ಬೆಳಕಿನ ಪ್ರಮಾಣಗಳಲ್ಲಿ ತೆಗೆದ ಚಿತ್ರಗಳನ್ನು ಒಟ್ಟಿಗೆ ಬೆಸೆಯಲು, ಮತ್ತಷ್ಟು ತೀಕ್ಷ್ಣವಾಗಿ ಚಿತ್ರ ಸೆರೆಯಲು ಇದರಿಂದ ಸಾಧ್ಯವಾಗಲಿದೆ.
ಗೂಗಲ್ ಕ್ಯಾಮರಾ ಗೋ ಅಪ್ಲಿಕೇಷನ್‌ನೊಂದಿಗೆ ಬಜೆಟ್ ಫೋನ್‌ಗಳಲ್ಲಿ ತೆಗೆದ ಚಿತ್ರಗಳು ಕತ್ತಲು ಅಥವಾ ಪ್ರಕಾಶಮಾನವಾದ ಸೂರ್ಯ ಬೆಳಕಿನಲ್ಲಿ ನಿಖರವಾದ ಚಿತ್ರಣವನ್ನು ಹೊಂದಿರುತ್ತವೆ.
ಒಟ್ಟಿನಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಬಳಕೆದಾರರ ಪಾಲಿಗೆ ಗೂಗಲ್ ಕ್ಯಾಮರಾ ಗೋ ಎಚ್‌ಡಿಆರ್ ಫೀಚರ್ ವರದಾನವಾಗಲಿದೆ. ಎಂಟ್ರಿ ಲೆವೆಲ್ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ದಿನದ ಯಾವುದೇ ಹೊತ್ತಿನಲ್ಲೂ ಉತ್ಕೃಷ್ಟ ಗುಣಮಟ್ಟದ ಫೋಟೋಗಳನ್ನು ಸೆರೆ ಹಿಡಿಯಲು ಸಾಧ್ಯವಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.