ಶನಿವಾರ, ಜುಲೈ 24, 2021
25 °C

4ಜಿ ಎಲ್‌ಟಿಇ ಬೆಂಬಲದ ಎಚ್‌ಪಿ ನೋಟ್‌ಬುಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೆಕ್‌ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಮಾಡಿರುವ ಎಚ್‌ಪಿ ಕಂಪನಿಯು 4ಜಿ ಎಲ್‌ಟಿಇ (4G Vo*TE ) ಸಂಪರ್ಕಿತ ಹೊಸ ನೋಟ್‌ಬುಕ್‌ ಅನ್ನು ಬಿಡುಗಡೆ ಮಾಡಿದೆ.

ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ನೋಟ್‌ಬುಕ್‌ ವಿನ್ಯಾಸ ಮಾಡಲಾಗಿದೆ. ಇದರ ಆರಂಭಿಕ ಬೆಲೆ ₹ 44,999 ಎಂದು ಎಚ್‌ಪಿ ಕಂಪನಿ ತಿಳಿಸಿದೆ.

ಕೊರೊನಾ ವೈರಸ್‌ ಪರಿಣಾಮ ಲಕ್ಷಾಂತರ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕಡಿಮೆ ತರಂಗಾಂತರಗಳು ಹಾಗೂ ಕಡಿಮೆ ಗುಣಮಟ್ಟದ ವೈಫೈನೊಂದಿಗೆ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಎಚ್‌ಪಿ ಕಂಪನಿಯು ಹೊಸ ನೋಟ್‌ಬುಕ್‌ಗಳಲ್ಲಿ 4ಜಿ ಎಲ್‌ಟಿಇ ಸೌಕರ್ಯ ಕಲ್ಪಿಸಿದೆ. ಇದರಿಂದ ಕಡಿಮೆ ಗುಣಮಟ್ಟದ ತರಂಗಾಂತರಗಳಿದ್ದರೂ 4ಜಿ ಎಲ್‌ಟಿಇ ಮೂಲಕ ವೇಗವಾಗಿ ಕೆಲಸ ಮಾಡಬಹುದು ಎಂದು ಕಂಪನಿ ತಿಳಿಸಿದೆ.

1.5 ಕೆಜಿ ತೂಕ ಇರುವ ಈ ಹೊಸ ಎಚ್‌ಪಿ 14 ಎಸ್ ನೋಟ್‌ಬುಕ್‌ ಹಗುರವಾಗಿದ್ದು ಆಕರ್ಷಕ ವಿನ್ಯಾಸ ಹೊಂದಿದೆ. ವೇಗವಾಗಿ ಚಾರ್ಜ್ ಆಗಬಹುದಾದ ಬ್ಯಾಟರಿ ಇದರಲ್ಲಿದೆ. ಸುಮಾರು 9 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಬಹುದು. ಇಂಟೆಲ್‌ನ 10ನೇ ಪೀಳಿಗೆಯ 13/15 ಪ್ರೊಸೆಸರ್ ಒಳಗೊಂಡಿದ್ದು, ಮೈಕ್ರೋ ಎಡ್ಜ್ ಡಿಸ್‌ಪ್ಲೇ ಮೂಲಕ ವಿಡಿಯೊಗಳನ್ನು
ಆನಂದಿಸಬಹುದು.

ಎಚ್‌ಪಿ 14 ಎಸ್ ನೋಟ್‌ಬುಕ್‌ ಬಿಡುಗಡೆ ಮಾಡಿ ಮಾತನಾಡಿದ ಎಚ್‌ಪಿ ಇಂಡಿಯಾ ಮಾರ್ಕೆಟಿಂಗ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ವಿನಯ್ ಅವಸ್ಥಿ, ‘ನಮ್ಮ ಹೊಸ ನೋಟ್‌ಬುಕ್‌ನಲ್ಲಿ 4ಜಿ ಎಲ್‌ಟಿಇ ತಂತ್ರಜ್ಞಾನ ಅಳವಡಿಸಿರುವುದರಿಂದ ಲಕ್ಷಾಂತರ ಭಾರತೀಯ ಬಳಕೆದಾರರಿಗೆ ಅನುಕೂಲವಾಗಲಿದೆ’ ಎಂದಿದ್ದಾರೆ.

ಎಚ್‌ಪಿ 14 ಎಸ್ ನೋಟ್‌ಬುಕ್‌  ಬೆಲೆ

* HP14s ( ಐ3 ಪ್ರೊಸೆಸರ್, 4ಜಿಬಿ ರ‍್ಯಾಮ್): ₹ 44,999 

* HP14s (ಐ5 ಪ್ರೊಸೆಸರ್, 8ಜಿಬಿ ರ‍್ಯಾಮ್): ₹ 64,999

* HP Pavi*ion 14 (i5): ₹ 84,999

ಈ ಹೊಸ ಎಚ್‌ಪಿ ನೋಟ್‌ಬುಕ್‌ಗಳ ಖರೀದಿ ಮೇಲೆ 6 ತಿಂಗಳವರೆಗೆ ಜಿಯೊ ಮೂಲಕ ಉಚಿತ ಡೇಟಾ (ಇಂಟರ್‌ನೆಟ್‌) ಪಡೆಯುವ ಕೊಡುಗೆಯನ್ನು ಕಂಪನಿ ನೀಡಿದೆ. ಈ ಹೊಸ ಸಾಧನಗಳು ಎಲ್ಲಾ ಎಚ್‌ಪಿ ವರ್ಲ್ಡ್ ಸ್ಟೋರ್ ಹಾಗೂ ಆನ್‌ಲೈನ್‌ ಸ್ಟೋರ್‌ಗಳಲ್ಲಿ ಲಭ್ಯವಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು