ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Co-WIN App: ನಕಲಿ ಅ್ಯಪ್ ಹಾವಳಿ ಬಗ್ಗೆ ಎಚ್ಚರಿಕೆ ನೀಡಿದ ಕೇಂದ್ರ

Last Updated 7 ಜನವರಿ 2021, 12:03 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಕೋವಿಡ್ ಲಸಿಕೆ ನೀಡಿಕೆಗೆ ಸಿದ್ಧತೆ ನಡೆದಿದ್ದು, ಆ್ಯಪ್‌ ಮೂಲಕ ನೋಂದಣಿ ಮಾಡುವ ವಿಚಾರದಲ್ಲಿಯೂ ಸರ್ಕಾರ ಕಾರ್ಯಪ್ರವೃತ್ತವಾಗಿದೆ.


ಈ ಮಧ್ಯೆ, ಕೋವಿಡ್ ಲಸಿಕೆ ಅ್ಯಪ್ ಹೆಸರಿನಲ್ಲಿ ನಕಲಿ ಅ್ಯಪ್‌ ಜನರ ದಾರಿತಪ್ಪಿಸುತ್ತಿದೆ. ಕೋವಿನ್ ಅ್ಯಪ್ ಅನ್ನು ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.


ಅಧಿಕೃತ ಅ್ಯಪ್ ಶೀಘ್ರ ಬಿಡುಗಡೆ:

ಕೋವಿನ್ ಅಧಿಕೃತ ಅ್ಯಪ್ ಅನ್ನು ಸರ್ಕಾರ ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ. ಕೋವಿನ್ ಅ್ಯಪ್, ಲಸಿಕೆ ಕುರಿತ ಮಾಹಿತಿ, ನೋಂದಣಿ ಮತ್ತು ಟ್ರ್ಯಾಕಿಂಗ್ ಸಹಿತ ವಿವಿಧ ಪ್ರಯೋಜನ ಒದಗಿಸಲಿದೆ. ಆದರೆ ನಕಲಿ ಅ್ಯಪ್ ಬಗ್ಗೆ ಎಚ್ಚರಿಕೆ ವಹಿಸಬೇಕು ಸಚಿವಾಲಯ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ.


ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಕಲಿ ಆ್ಯಪ್
ಕೋವಿನ್ ಅಂದರೆ, ಕೋವಿಡ್ ಇಂಟಲಿಜೆನ್ಸ್ ನೆಟ್ವರ್ಕ್ ಹೆಸರಿನ ಅ್ಯಪ್ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಆಗಲೇ ಕಿಡಿಗೇಡಿಗಳು ಗೂಗಲ್ ಪ್ಲೇ ಸ್ಟೋರ್ ಮೂಲಕ ನಕಲಿ ಅ್ಯಪ್ ಅನ್ನು ಪರಿಚಯಿಸಿದ್ದು, ಬಳಕೆದಾರರು ಅಸಲಿ ಅ್ಯಪ್ ಎಂದು ಭಾವಿಸಿ, ನಕಲಿ ಅ್ಯಪ್ ಅಳವಡಿಸಿಕೊಂಡು ಸಮಸ್ಯೆ ಎದುರಿಸುವಂತಾಗಿದೆ.


ಸೈಬರ್ ವಂಚನೆ ಸಾಧ್ಯತೆ
ನಕಲಿ ಕೋವಿನ್ ಅ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡರೆ, ಅದರಿಂದ ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಫೋನ್ ವಿವರ, ಅದರಲ್ಲಿನ ಪ್ರಮುಖ ಸಂಗತಿಗಳು ಸೈಬರ್ ವಂಚಕರ ಪಾಲಾಗುವ ಸಾಧ್ಯತೆಯಿದೆ. ಹೀಗಾಗಿ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT