ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆ ವಿರುದ್ಧ ದೂರು ನೀಡಲು ಆ್ಯಪ್ ತಯಾರಿಸಿದ 9 ಹರೆಯದ ವಿದ್ಯಾರ್ಥಿನಿ

Last Updated 9 ಫೆಬ್ರುವರಿ 2020, 11:06 IST
ಅಕ್ಷರ ಗಾತ್ರ

ಶಿಲ್ಲಾಂಗ್ :ಶಾಲೆಯಲ್ಲಿ ಇತರ ವಿದ್ಯಾರ್ಥಿಗಳ ಬೆದರಿಕೆಯಿಂದ (ಬುಲ್ಲಿಯಿಂಗ್) ಬೇಸತ್ತು ಅದರ ವಿರುದ್ಧ ದನಿಯೆತ್ತುವುದಕ್ಕಾಗಿ ಶಿಲ್ಲಾಂಗ್‌ನ ವಿದ್ಯಾರ್ಥಿನಿಮಿಯಿದೈಬಹುನ್ ಮಜಾವ್ಆ್ಯಪ್‌ವೊಂದನ್ನು ತಯಾರಿಸಿದ್ದಾಳೆ.

ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿರುವ ಮಜಾವ್ ತಯಾರಿಸಿರುವ ಈ ಆ್ಯಪ್ ಮೂಲಕ ಬೆದರಿಕೆಯೊಡ್ಡಿದವರ ಅಥವಾ ದಬ್ಬಾಳಿಕೆ ನಡೆಸಿದ ವ್ಯಕ್ತಿಯ ವಿರುದ್ಧ ಅನಾಮಧೇಯರಾಗಿಯೇ ದೂರುನೀಡಬಹುದಾಗಿದೆ.

ನಾನು ನರ್ಸರಿಯಲ್ಲಿರುವಾಗ ಈ ರೀತಿಯ ಕಿರುಕುಳವನ್ನು ಅನುಭವಿಸಿದ್ದೆ. ಅದು ನನ್ನ ಬದುಕಿನ ಮೇಲೆಯೂ ಪರಿಣಾಮ ಬೀರಿದೆ. ಇದರಿಂದ ಹೊರಬರುವುದು ಹೇಗೆ ಎಂಬುದರ ಬಗ್ಗೆ ನಾನು ಸದಾ ಯೋಚಿಸುತ್ತಿದ್ದೆ. ಯಾವೊಂದು ಮಗುವೂ ಈ ರೀತಿಯ ಕಷ್ಟ ಅನುಭವಿಸಿರಲಿಕ್ಕಿಲ್ಲ ಅಂತಾಳೆ ಮಜಾವ್.

ಈ ಆ್ಯಪ್ ಶೀಘ್ರದಲ್ಲಿಯೇ ಗೂಗಲ್ ಪೇನಲ್ಲಿ ಲಭ್ಯವಾಗಲಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಬೇರೊಂದು ವಿದ್ಯಾರ್ಥಿ ಮೇಲೆ ದಬ್ಬಾಳಿಕೆ ನಡಿಸಿದಾಗ ಅಥವಾ ಬೆದರಿಸಿದಾಗ ಈ ಬಗ್ಗೆ ವಿದ್ಯಾರ್ಥಿ ಅನಾಮಧೇಯವಾಗಿ ಶಿಕ್ಷಕರಿಗೆ, ಪೋಷಕರಿಗೆ ಮತ್ತು ಸ್ನೇಹಿತರಿಗೆ ದೂರು ನೀಡಬಹುದು.

ಈ ಘಟನೆ ಯಾವಾಗ, ಹೇಗೆ ನಡೆಯಿತು ಎಂಬುದರ ಬಗ್ಗೆ ವಿವರವಾಗಿ ಹೇಳಬಹುದು.ಇದನ್ನು ಸಂಬಂಧಪಟ್ಟವರೊಂದಿಗೆ ಹಂಚಿಕೊಳ್ಳಬಹುದು. ಇದರಿಂದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯಾವಾಗುತ್ತದೆ ಎಂದು ಮಜಾವ್ ವಿವರಿಸುತ್ತಾಳೆ.ವಿದ್ಯಾರ್ಥಿನಿಯ ಈ ಸಾಧನೆಯನ್ನು ಮೇಘಾಲಯರಾಜ್ಯ ಶಿಕ್ಷಣ ಸಚಿವ ಲಾಕೆಮೆಮ್ ರಿಂಬುಯಿ ಶ್ಲಾಘಿಸಿದ್ದಾರೆ.

ಸಾಮಾಜಿಕ ಪಿಡುಗು ವಿರುದ್ದ ಹೋರಾಡಲಿರುವ ಮಿಯಿ ಅವರ ಪ್ರಯತ್ನಕ್ಕೆ ಶುಭ ಕೋರುತ್ತೇನೆ. ಅವಳು ಉತ್ತಮ ನಾಗರಿಕಳಾಗಲಿದ್ದಾಳೆ. ಅವಳಿಗೆ ಸಹಾಯ ನೀಡಿದ ಪೋಷಕರಿಗೆ ಅಭಿನಂದನೆಗಳು ಎಂದಿದ್ದಾರೆ ರಿಂಬುಯಿ.

ವಿಪ್ರೊ ಅಪ್ಲೈಯಿಂಗ್ ಥಾಟ್ ಇನ್ ಸ್ಕೂಲ್ಸ್ (ಡಬ್ಲ್ಯುಟಿಐಎಸ್) ಸಹಯೋಗದೊಂದಿಗೆ 2017ರಲ್ಲಿ ದಿ ಟೀಚರ್ ಫೌಂಡೇಷನ್ ನಡೆಸಿದ ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ. 42 ಮಕ್ಕಳು ಶಾಲೆಯಲ್ಲಿ ಬುಲ್ಲಿಯಿಂಗ್‌ಗೆ (ಬೆದರಿಕೆ) ಒಳಗಾಗುತ್ತಾರೆ.

ಅಂದೊಮ್ಮೆ ವಿದ್ಯಾರ್ಥಿಗಳ ಗುಂಪೊಂದು ತನ್ನ ವಿರುದ್ಧ ದಬ್ಬಾಳಿಕೆ ನಡೆಸಿ ನನ್ನನ್ನು ಕ್ಲಾಸಿನಿಂದ ಬಹಿಷ್ಕರಿಸಲು ಸಹಪಾಠಿಗಳಿಗೆ ಹೇಳಿದ್ದರು. ಅದರಲ್ಲಿ ಒಬ್ಬರು ನನ್ನ ಕಾಲಿಗೆ ತುಳಿದಿದ್ದರು. ನನ್ನ ಕೆಲವರು ಗೆಳೆಯರ ಮೇಲೂ ಈ ರೀತಿಯ ದಬ್ಬಾಳಿಕೆ ನಡೆದಿತ್ತು.

ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ ನಡೆದ ಆ್ಯಪ್ ಡೆವೆಲಪ್‌ಮೆಂಟ್ ಕಾರ್ಯಾಗಾರದಲ್ಲಿ ಮಗಳು ಭಾಗವಹಿಸಿದ್ದು, ಅಲ್ಲಿಂದ ಇದನ್ನೆಲ್ಲ ಕಲಿತಳು. ಆ್ಯಪ್ ತಯಾರಿಸುವ ತರಗತಿಗೆ ಆಕೆ ಹಾಜರಾಗಿ, ದಿನದ ಒಂದು ಗಂಟೆ ಅದಕ್ಕಾಗಿ ವ್ಯಯಿಸುತ್ತಾಳೆ ಅಂತಾರೆ ಮಜಾವ್ ಅಮ್ಮ ದಸುಮರ್ಲಿನ್ ಮಜಾವ್. ನಮ್ಮ ಗಮನಕ್ಕೆ ಇದೆಲ್ಲ ಬರುವ ಮುನ್ನ ಆಕೆ 40 ಆಪ್ ತಯಾರಿಸಿದ್ದಳು ಅಂತಾರೆ ಅವರು.

ಅತಿ ಕಿರಿಯ ಕೋಡಿಂಗ್ ತಜ್ಞೆ ಆಗಿರುವ ಮಜಾವ್, ಸಿಲಿಕಾನ್ ವ್ಯಾಲಿಗೆ ಹೋಗಿ ಅಲ್ಲಿ ಹೂಡಿಕೆದಾರನ್ನು ಭೇಟಿ ಮಾಡುವ ಸ್ಕಾಲರ್‌ಶಿಪ್‌ನ್ನೂ ಪಡೆದಿದ್ದಾಳೆ.

ಮಜಾಯ್ ಅವರ ಅಮ್ಮ ಪೂರ್ವ ಖಾಸಿ ಹಿಲ್ಸ್‌ನ ಟೈರ್ಸಾದಲ್ಲಿ ರೆಸಾರ್ಟ್ ನಡೆಸುತ್ತಿದ್ದಾರೆ. ನಮ್ಮ ರೆಸಾರ್ಟ್‌ಗೆ ಬರುವ ಗ್ರಾಹಕರು ಆಹಾರ ಆರ್ಡರ್ ಮಾಡುವ ಆ್ಯಪ್‌ನ್ನು ನಾನು ತಯಾರಿಸಿದ್ದೇನೆ. ಇನ್ನು ಕೆಲವು ಆ್ಯಪ್ ಬಗ್ಗೆ ಕಾರ್ಯ ನಿರತವಾಗಿದ್ದು, ತಜ್ಞರು ಈ ಬಗ್ಗೆ ಗಮನಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಅಂತಾಳೆ ಈ ಜಾಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT