ವಾಟ್ಸಾಪ್ ಬಿಸಿನೆಸ್‌ನಲ್ಲಿ ಕಾರ್ಟ್ ಫೀಚರ್ ಪರಿಚಯಿಸಿದ ವಾಟ್ಸಾಪ್

ಫೇಸ್ಬುಕ್ ಒಡೆತನದ ವಾಟ್ಸಾಪ್ ಕಳೆದ ತಿಂಗಳು ತನ್ನ ಬಿಸಿನೆಸ್ ಮೆಸೆಂಜರ್ ಆ್ಯಪ್ ವರ್ಶನ್ನಲ್ಲಿ ಎಲ್ಲ ಸರಕುಗಳನ್ನು ಒಂದೇ ಕಡೆ ವೀಕ್ಷಿಸಲು ಮತ್ತು ಉದ್ಯಮದ ಮಾಲೀಕರ ಜೊತೆ ಇಂಟರ್ಯಾಕ್ಟ್ ಮಾಡಲು ನಿರ್ದಿಷ್ಟ ಕೆಟಲಾಗ್ ಬಟನ್ ಸೇರಿಸಿತ್ತು. ಇದೀಗ, ಇದೇ ವರ್ಶನ್ನಿನಲ್ಲಿ ಕಂಪನಿಯು ಗ್ರಾಹಕರ ಶಾಪಿಂಗ್ ಅನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ಕಾರ್ಟ್ ಪರಿಚಯಿಸಿದೆ.
`ನಾವು ವಾಟ್ಸಾಪ್‌ನಲ್ಲಿ ರಜೆದಿನಗಳ ಶಾಪಿಂಗ್‌ಗಾಗಿ ಕಾರ್ಟ್ ಪರಿಚಯಿಸುತ್ತಿದ್ದೇವೆ. ಕಾರ್ಟ್ ಮೂಲಕ ಜನರು ಕೆಟಲಾಗ್‌ನಲ್ಲಿ ಒಂದೇ ಬಾರಿಗೆ ಹಲವು ವಸ್ತುಗಳನ್ನ ಆಯ್ಕೆ ಮಾಡಿ ಖರೀದಿಗಾಗಿ ಮೆಸೇಜ್ ಮಾಡಬಹುದು. ಇದು ಉದ್ಯಮಗಳಿಗೆ ತಮಗೆ ಬಂದಿರುವ ಆರ್ಡರ್, ಗ್ರಾಹಕರಿಂದ ನಿರ್ವಹಣೆ ಮನವಿ ಜಾಡು ಹಿಡಿಯಲು ಅನುಕೂಲವಾಗುತ್ತದೆ. ರೆಸ್ಟೋರೆಂಟ ಅಥವಾ ಬಟ್ಟೆ ಅಂಗಡಿ ಸೇರಿದಂತೆ ಹಲವು ವಸ್ತುಗಳನ್ನ ಒಂದೇ ಬಾರಿಗೆ ಖರೀದಿಸಲು ಕಾರ್ಟ್ ಉತ್ತಮವಾಗಿರುತ್ತದೆ' ಎಂದು ವಾಟ್ಸಾಪ್ ಹೇಳಿದೆ.
ಕಾರ್ಟ್‌ನಲ್ಲಿ ಗ್ರಾಹಕರು ವಸ್ತುಗಳನ್ನ ಖರೀದಿಸಿದ ಬಳಿಕ ಹಣ ಪಾವತಿಸಲು ಆಪ್‌ನಿಂದ ಹೊರ ಬರುವ ಅಗತ್ಯವಿಲ್ಲ. ವಾಟ್ಸಾಪ್ ಪೇ ಫೀಚರ್ ಮೂಲಕವೇ ಪೇಮೆಂಟ್ ಮಾಡಬಹುದಾಗಿದೆ.
ವಾಟ್ಸಾಪ್ ಬಿಸಿನೆಸ್‌ನಲ್ಲಿ ಶಾಪಿಂಗ್ ಮಾಡುವುದು ಹೇಗೆ ?
ಹಂತ 1: ವಾಟ್ಸಾಪ್ ಬಿಸಿನೆಸ್ ಆಪ್ >> ಸ್ಟೋರ್ ಐಕಾನ್ ಮೇಲೆ ಟ್ಯಾಪ್ ಮಾಡಿ (ಮೇಲಿನ ಎಡಬದಿಯ ಕಾರ್ನರ್‌ನಲ್ಲಿರುವ ಫೋನ್ ಐಕಾನ್ ಪಕ್ಕದಲ್ಲಿ) >> ಶಾಪಿಂಗ್ ಶುರು ಮಾಡಲು ಕೆಟಲಾಗ್ ಅಕ್ಸೆಸ್ ಪಡೆಯುತ್ತೀರಿ.
ಹಂತ 2: ನೀವು ಕೊಳ್ಳಲು ಬಯಸುವ ವಸ್ತುಗಳಿಗಾಗಿ ಕೆಟಲಾಗ್ ಮೂಲಕ ಬ್ರೌಸ್ ಮಾಡಿ.
ಹಂತ 3: ನೀವು ಯಾವುದೇ ವಸ್ತುವನ್ನು ಖರೀದಿಸಲು ನಿರ್ಧರಿಸಿದಾಗ ಆ್ಯಡ್ ಟು ಕಾರ್ಟ್ ಬಟನ್ ಟ್ಯಾಪ್ ಮಾಡಿ. ಬಳಿಕ ನೀವು ಕೆಟಲಾಗ್‌ಗೆ ಹಿಂದಿರುಗಿ ಶಾಪಿಂಗ್ ಮುಂದುವರಿಸಬಹುದು ಅಥವಾ ನಿಮ್ಮ ಆಯ್ಕೆಯ ಸರಕುಗಳನ್ನು ನೋಡಲು ವೀವ್ ಯುವರ್ ಕಾರ್ಟ್ ಮೇಲೆ ಟ್ಯಾಪ್ ಮಾಡಿ.
ಹಂತ 4: ನಿಮ್ಮ ಕಾರ್ಟ್‌ನಲ್ಲಿ ನೀವು ಒಂದು ಅಥವಾ ಅದಕ್ಕಿಂತ ಹೆಚ್ಚು ವಸ್ತುಗಳನ್ನು ಸೇರಿಸಬಹುದು.
ಹಂತ 5: ನೀವು ನಿಮ್ಮ ಕಾರ್ಟ್ ತುಂಬಿದ ಬಳಿಕ ನಿಮ್ಮ ಆರ್ಡರ್ ಪ್ಲೇಸ್ ಮಾಡಲು ಉದ್ಯಮಕ್ಕೆ ಮೆಸೇಜ್ ಮಾಡಿ.
ನೋಟ್: ಮಾರಾಟಗಾರರು ಖಚಿತಪಡಿಸುವವರೆಗೂ ನಿಮ್ಮ ಆರ್ಡರ್ ಪೂರ್ಣಗೊಳ್ಳುವುದಿಲ್ಲ ಎಂಬ ಸಂದೇಶ ಬರುತ್ತದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.