ಭಾನುವಾರ, ಅಕ್ಟೋಬರ್ 24, 2021
29 °C

ಇನ್ಮುಂದೆ ‘ವಾಟ್ಸ್‌ಆ್ಯಪ್‌ ಪೇಮೆಂಟ್‘ ಬಳಸಿದರೆ ಸಿಗಲಿದೆ ಕ್ಯಾಶ್‌ಬ್ಯಾಕ್!

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇತ್ತೀಚೆಗೆ ತನ್ನ ಬಳಕೆದಾರರಿಗೆ ವಾಟ್ಸ್‌ಆ್ಯಪ್‌ ಅನೇಕ ಆಯ್ಕೆಗಳನ್ನು ನೀಡಲು ಮುಂದಡಿ ಇಡುತ್ತಿದೆ. ವಾಟ್ಸ್‌ಆ್ಯಪ್‌ನ್ನು ಇನ್ನಷ್ಟು ಬಳಕೆದಾರರ ಸ್ನೇಹಿಯಾಗಿ ಮಾಡಲು ಅದು ನಿರಂತರ ಶ್ರಮಿಸುತ್ತಿದೆ.

ಇತ್ತೀಚೆಗೆ ಯುಪಿಐ ಆಧರಿತ ಡಿಜಿಟಲ್ ಪೇಮೆಂಟ್ ಹೆಚ್ಚುತ್ತಿದೆ. ಭಾರತದಲ್ಲಿ ‘ಗೂಗಲ್ ಪೇ’ (Gpay), ‘ಫೋನ್ ಪೇ’ಗೆ ಸ್ಪರ್ಧೆ ಒಡ್ಡಲು ವಾಟ್ಸ್‌ಆ್ಯಪ್‌ ಕೂಡ ತನ್ನಲ್ಲಿ ಯುಪಿಐ ಆಧರಿತ ಡಿಜಿಟಲ್ ಪೇಮೆಂಟ್‌ ಸೌಲಭ್ಯ ಕಲ್ಪಿಸಿದೆ.

ಹೊಸದಾಗಿ ಬಂದಿರುವ ಮಾಹಿತಿಗಳ ಪ್ರಕಾರ ‘ವಾಟ್ಸ್‌ಆ್ಯಪ್‌ ಪೇಮೆಂಟ್‘ ಕಡೆಯಿಂದ ಕ್ಯಾಶ್‌ಬ್ಯಾಕ್ ಅವಕಾಶ ಕೂಡ ಬಳಕೆದಾರರಿಗೆ ಸಿಗಲಿದೆ. ವಾಟ್ಸ್‌ಆ್ಯಪ್‌ ಪೇಮೆಂಟ್ ಹೆಚ್ಚಿಸಲು ಭಾರತದಲ್ಲಿ ಕ್ಯಾಶ್‌ಬ್ಯಾಕ್ ಸೌಲಭ್ಯವನ್ನು ವಾಟ್ಸ್‌ಆ್ಯಪ್‌ ಪರಿಯಚಿಸುತ್ತಿದೆ ಎನ್ನಲಾಗಿದ್ದು, ಸದ್ಯ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಈ ಕುರಿತು WABetaInfo ಬ್ಲಾಗ್ ವರದಿ ಮಾಡಿದೆ.

ವಾಟ್ಸ್‌ಆ್ಯಪ್‌ ಪೇಮೆಂಟ್ ಹೆಚ್ಚೆಚ್ಚು ಬಳಸುವುದರಿಂದ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ನೇರವಾಗಿ ಹಾಗೂ ತುರ್ತಾಗಿ ಹಣ ಕಳಿಸಲು ಶಾರ್ಟ್‌ಕಟ್ ಚಾಟ್ ಎಂಬ ಸೌಲಭ್ಯವನ್ನು ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್‌ ಇತ್ತೀಚೆಗೆ ಪರಿಚಯಿಸಿತ್ತು.

ಅಲ್ಲದೇ ವಾಟ್ಸ್‌ಆ್ಯಪ್ ಇನ್ನೊಂದು ಹೊಸ ಫೀಚರ್ ಪರಿಚಯಿಸುತ್ತಿದ್ದು, ಅದಕ್ಕೆ WhatsApp Ban Review ಎನ್ನಲಾಗಿದೆ. ಅಂದರೆ ನಿಷೇಧಕ್ಕೊಳಗಾದ ಅಕೌಂಟ್ ಬಳಕೆದಾರರು ಈ ಫೀಚರ್ ಮೂಲಕ ತಮ್ಮ ಖಾತೆಯನ್ನು ಪುನಃ ಸ್ಥಾಪಿಸಿಕೊಳ್ಳಬಹುದಾಗಿದೆ.

ಸದ್ಯ ಇದು ಐಓಎಸ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಮುಂದೆ ಆಂಡ್ರಾಯ್ಡ್‌ಗೂ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣ ಬಳಸಲು ಅಧಿಕಾರಿಗಳಿಗೆ ಹಾಗೂ ನೌಕರರಿಗೆ ನಿರ್ಬಂಧ ವಿಧಿಸಿದ ಸರ್ಕಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು