ಮಗ ಪ್ರೀತಿಸಿ ಮೋಸ ಮಾಡಿದ ಹುಡುಗಿಯನ್ನು ಮಗಳಂತೆ ಸಾಕಿ ಮದುವೆ ಮಾಡಿಸಿಕೊಟ್ಟ ಅಪ್ಪ

ಬುಧವಾರ, ಜೂನ್ 19, 2019
23 °C

ಮಗ ಪ್ರೀತಿಸಿ ಮೋಸ ಮಾಡಿದ ಹುಡುಗಿಯನ್ನು ಮಗಳಂತೆ ಸಾಕಿ ಮದುವೆ ಮಾಡಿಸಿಕೊಟ್ಟ ಅಪ್ಪ

Published:
Updated:

ಕೋಟ್ಟಯಂ: ಕೆಲವರ ಜೀವನದಲ್ಲಿ ನಡೆಯುವ ಘಟನೆಗಳು ಸಿನಿಮಾ ಕತೆಗಳಂತೆ ಇರುತ್ತವೆ. ಇಲ್ಲೊಂದು ಮದುವೆಯೂ ಸಿನಿಮಾ ಕತೆಯಂತೆ ನಡೆದಿದೆ. ಕೇರಳದ ಕೋಟ್ಟಯಂ ಜಿಲ್ಲೆಯ ತಿರುನಕ್ಕರ ನಿವಾಸಿ ಶಾಜಿ ಅವರ 'ಮಗಳ' ಮದುವೆ ಬಗ್ಗೆ ಸಂಧ್ಯಾ ಪಲ್ಲವಿ ಎಂಬಾಕೆ ಫೇಸ್‌ಬುಕ್‌ನಲ್ಲಿ ಬರೆದ ಬರಹ ವೈರಲ್ ಆಗಿದೆ.

ಸಂಧ್ಯಾ ಪಲ್ಲವಿ ಫೇಸ್‌ಬುಕ್‌ನಲ್ಲಿ ಬರೆದ ಬರಹ ಹೀಗಿದೆ: 
ಇಂದು ವಿಶೇಷವಾದ ಮದುವೆಯೊಂದರಲ್ಲಿ ಭಾಗಿಯಾದೆ. ಮಾಂಗಲ್ಯಧಾರಣೆ ವೇಳೆ ಕಣ್ಣು ಹನಿಗೂಡಿತು.ನಾನು ನನ್ನ ಸ್ನೇಹಿತರೊಂದಿಗೆ ಈ ಮದುವೆಗೆ ಹೋಗಿದ್ದೆ.

ಕೋಟ್ಟಯಂ ತಿರುನಕ್ಕರ ನಿವಾಸಿ ಶಾಜಿ ಮತ್ತು ಅವರ ಪತ್ನಿ ಅತಿಥಿಗಳನ್ನು ಬರಮಾಡಿಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿದ್ದರು.
6 ವರ್ಷಗಳ ಹಿಂದೆ ಶಾಜಿ ಅವರ ಮಗ ಪ್ಲಸ್ ಟು ವಿದ್ಯಾರ್ಥಿಯಾಗಿದ್ದಾಗ ಸಹಪಾಠಿಯೊಬ್ಬಳನ್ನು ಪ್ರೀತಿಸಿ, ಮನೆಬಿಟ್ಟು ಓಡಿ ಹೋಗಿದ್ದ. ಮಗಳು ಕಾಣೆಯಾಗಿದ್ದಾಳೆ ಎಂದು ಆ ಹುಡುಗಿಯ ಮನೆಯವರು ದೂರು ನೀಡಿದರು. ಪೊಲೀಸರು ಈ ಜೋಡಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಮಾಡಿದರು.

ಹುಡುಗನ ಜತೆ ಓಡಿ ಹೋದ ಹುಡುಗಿ ನಮ್ಮ ಮನೆಗೆ ಬೇಡ ಅಂದರು ಈ ವಿದ್ಯಾರ್ಥಿನಿಯ ಕುಟುಂಬದವರು. ಹೀಗಿರುವಾಗ ಮಕ್ಕಳಿಗೆ 18 ವಯಸ್ಸು ಆದ ನಂತರ ಮದುವೆ ಮಾಡಿಕೊಡುತ್ತೇವೆ ಎಂದು ಹುಡುಗನ ಮನೆಯವರು ಹುಡುಗಿಯನ್ನೂ ತಮ್ಮೊಂದಿಗೆ ಮನೆಗೆ ಕರೆತಂದರು.

ಮಗನನ್ನು ಹಾಸ್ಟೆಲ್‌ಗೆ ಸೇರಿಸಿ ಅಲ್ಲಿ ಕಲಿಕೆ ಮುಂದುವರಿಸಿದರು. ಮಗ ಪ್ರೀತಿಸಿ ಕರೆದುಕೊಂಡ ಬಂದ ಹುಡುಗಿಯನ್ನು ಮನೆಯಲ್ಲಿರಿಸಿ ಓದು ಮುಂದುವರಿಯುವಂತೆ ನೋಡಿಕೊಂಡರು. ಈ ಮಧ್ಯೆ ಮಗ ಬೇರೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಗೊತ್ತಾದ ಕೂಡಲೇ ಶಾಜಿ ಆ ಮಗನನ್ನು ಗಲ್ಫ್‌ಗೆ ಕರೆದುಕೊಂಡು ಹೋದರು. ಕಳೆದ ವರ್ಷ ಊರಿಗೆ ಮರಳಿದ ಮಗ ಬೇರೊಂದು ಹುಡುಗಿಯನ್ನು ಮದುವೆಯಾದ.

ತನ್ನ ಮಗ ಪ್ರೀತಿಸಿದ ಹುಡುಗಿಯನ್ನು ವಂಚಿಸಿದ್ದಕ್ಕಾಗಿ ಶಾಜಿ ಮಗನನ್ನು ಕುಟುಂಬದಿಂದ ಹೊರಹೋಗುವಂತೆ ಹೇಳಿದರು. ಮಗನಿಗಾಗಿ ಇದ್ದ ತನ್ನ ಕುಟುಂಬದ ಆಸ್ತಿಯನ್ನು ಅವನಿಗಾಗಿ ಕಾದು ಕುಳಿತಿದ್ದ ಹುಡುಗಿಯ ಹೆಸರಿಗೆ ಬರೆದರು. ಹೀಗೆ ಮಗ ಪ್ರೀತಿಸಿದ್ದ ಹುಡುಗಿ ಮನೆ ಮಗಳಾದಳು. ಈ ಮಗಳನ್ನು ಕರುನಾಗಪಳ್ಳಿ ನಿವಾಸಿ ಅಜಿತ್ ಎಂಬಾತನಿಗೆ ತಿರುನಕ್ಕರ ದೇವಾಲಯದಲ್ಲಿ ಮದುವೆ ಮಾಡಿಕೊಟ್ಟರು.
ಈ ಅಪ್ಪ- ಅಮ್ಮನ ಮನಸ್ಸು ಅರ್ಥ ಮಾಡಿಕೊಳ್ಳಲು ಆ ಮಗನಿಗೆ ಸಾಧ್ಯವಾಗಲಿಲ್ಲ. 8 ವರ್ಷದ ಇನ್ನೊಬ್ಬ ಮಗನೂ ಇವರಿಗಿದ್ದಾನೆ ಎಂದು  ಸಂಧ್ಯಾ ಪಲ್ಲವಿ ಬರೆದಿದ್ದಾರೆ.

ಈ ಫೇಸ್‌ಬುಕ್ ಬರಹ ವೈರಲ್ ಆದ ನಂತರ ಫೇಸ್‌ಬುಕ್ ಪೋಸ್ಟ್ ಡಿಲೀಟ್ ಆಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 154

  Happy
 • 5

  Amused
 • 8

  Sad
 • 17

  Frustrated
 • 13

  Angry

Comments:

0 comments

Write the first review for this !