ಭಾನುವಾರ, ಸೆಪ್ಟೆಂಬರ್ 19, 2021
30 °C

ಅಶಿತಾ ಸಿಂಗ್: ಇವರೇ ನೋಡಿ ‘ಡುಪ್ಲಿಕೇಟ್’ ಐಶ್ವರ್ಯ ರೈ ಬಚ್ಚನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Aashita Singh Instagram Screengrab

ಬೆಂಗಳೂರು: ಲೋಕದಲ್ಲಿ ಒಬ್ಬರಂತೆ ಕಾಣುವ, ಅವರನ್ನೇ ಹೋಲುವ ಏಳು ಮಂದಿ ಇರುತ್ತಾರೆ ಎನ್ನುವ ಮಾತಿದೆ..

ಅದರಲ್ಲೂ ಸೆಲೆಬ್ರಿಟಿಗಳನ್ನು ಹೋಲುವ ಮುಖಭಾವ ಉಳ್ಳವರು ಹೆಚ್ಚು ಜನಪ್ರಿಯತೆ ಕೂಡ ಗಳಿಸುತ್ತಾರೆ. 

ಬಾಲಿವುಡ್‌ನ ಪ್ರಸಿದ್ಧ ನಟಿ ಐಶ್ವರ್ಯ ರೈ ಬಚ್ಚನ್ ಅವರನ್ನೇ ಹೋಲುವ ಅಶಿತಾ ಸಿಂಗ್ ಎಂಬವರು, ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದ್ದಾರೆ.

ಅಶಿತಾ ಸಿಂಗ್, ಐಶ್ವರ್ಯ ನಟನೆಯ ವಿವಿಧ ಸಿನಿಮಾಗಳ ವಿಡಿಯೊಗಳಿಗೆ ಲಿಪ್ ಸಿಂಕ್ ರೀಲ್ಸ್ ಮಾಡುತ್ತಾರೆ. ಅದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಾರೆ.

ಅಶಿತಾ ಸಿಂಗ್ ಅವರ ವಿಡಿಯೊಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಕೆ ನಟಿ ಐಶ್ವರ್ಯಾ ಅವರಂತೆಯೇ ಇದ್ದಾರೆ ಎಂದಿದ್ದಾರೆ. ಅಲ್ಲದೆ, ಬಾಲಿವುಡ್, ತೆಲುಗು ಚಿತ್ರಗಳಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸಿ ಎಂದು ಕಮೆಂಟ್ ಮಾಡಿದ್ದಾರೆ.

ನಟಿ ಐಶ್ವರ್ಯ ರೈ ಬಚ್ಚನ್ ಅವರನ್ನೇ ಹೋಲುವ ಮತ್ತೋರ್ವ ನಟಿ ಸ್ನೇಹಾ ಉಳ್ಳಾಲ್, ಮರಾಠಿ ನಟಿ ಮಾನಸಿ ನಾಯ್ಕ್ ಮತ್ತು ಪಾಕಿಸ್ತಾನ ಮೂಲದ ವೈದ್ಯೆ ಅಮ್ನಾ ಇಮ್ರಾನ್ ಕೂಡ ಇದೇ ರೀತಿಯಲ್ಲಿ ಜನಪ್ರಿಯತೆ ಗಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು