ಗುರುವಾರ , ಮೇ 26, 2022
30 °C

ಹೊಸ ಸ್ಕಾರ್ಪಿಯೊ ಬಿಡುಗಡೆ ಯಾವಾಗ ಎಂದ ಗ್ರಾಹಕ: ಆನಂದ್ ಮಹೀಂದ್ರಾ ಉತ್ತರ ಹೀಗಿತ್ತು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಎಸ್‌ಯುವಿ ಸ್ಕಾರ್ಪಿಯೊ ಕಾರಿನ ಹೊಸ ಆವೃತ್ತಿ ಬಿಡುಗಡೆ ದಿನಾಂಕದ ಬಗ್ಗೆ ಗ್ರಾಹಕರೊಬ್ಬರು ಕೇಳಿದ ಪ್ರಶ್ನೆಗೆ ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರಾ ಹಾಸ್ಯಮಯವಾಗಿ ಉತ್ತರಿಸುವ ಮೂಲಕ ಗಮನ ಸೆಳೆದಿದ್ದಾರೆ. 

‘ಸರ್, ದಯವಿಟ್ಟು ಸ್ಕಾರ್ಪಿಯೊ ಯಾವ ದಿನಾಂಕದಂದು ಬಿಡುಗಡೆಯಾಗಲಿದೆ ಎಂದು ತಿಳಿಸಿ. ಏಕೆಂದರೆ ನಾವು ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದು ಐಎನ್‌ಸಿ ಪ್ರಾಜೆಕ್ಟ್‌ ಮೆಕರ್ಸ್‌ ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ಪ್ರಶ್ನಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಮಹೀಂದ್ರಾ, ‘ಶ್ಶ್, ನಾನು ನಿಮಗೆ ಹೇಳಿದರೆ, ನನ್ನನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ... ಆದರೆ, ನಾನು ಇಷ್ಟು ಮಾತ್ರ ಹೇಳಬಲ್ಲೆ... ನಾನು ನಿಮ್ಮಂತೆಯೇ ಉತ್ಸುಕನಾಗಿ ಕಾಯುತ್ತಿದ್ದೇನೆ...’ ಎಂದಿದ್ದಾರೆ. 

ಓದಿ... ನೇಪಾಳದಲ್ಲಿ ‘ನೈಟ್‌ ಪಾರ್ಟಿ’: ರಾಹುಲ್ ಜೊತೆ ಕಾಣಿಸಿಕೊಂಡ ಯುವತಿ ಯಾರು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಆನಂದ್ ಮಹೀಂದ್ರಾ, ಜನರೊಂದಿಗೆ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ ಅವರೊಂದಿಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಆನಂದ್ ಮಹೀಂದ್ರಾ ಅವರು ಗ್ರಾಹಕರೊಬ್ಬರು ಕೇಳಿದ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡದಿದ್ದರೂ ಅನೇಕರು ಅವರ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ‘ಹಾಸ್ಯಮಯ’ ಎಂದು ಹೇಳಿಕೊಂಡಿದ್ದಾರೆ. 

‘ಸರ್, ನಾನು ನೋಡಿದ ಅತ್ಯುತ್ತಮ ಹಾಸ್ಯಮಯ ಟ್ವೀಟ್ ಇದು. ‘ಶ್ಶ್, ಹೇಳಿದರೆ ಕೆಲಸದಿಂದ ತೆಗೆದು ಹಾಕುತ್ತೇನೆ’ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಓದಿ... ರೆಹಮಾನ್ ಪುತ್ರಿ ಮದುವೆ ಸಂಭ್ರಮ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖತೀಜಾ–ರಿಯಾಸ್ದೀನ್

ಹೊಸ ಸ್ಕಾರ್ಪಿಯೊ ಬಿಡುಗಡೆ ಕುರಿತು ಕಂಪನಿ ಯಾವುದೇ ನಿರ್ದಿಷ್ಟ ದಿನಾಂಕವನ್ನು ಘೋಷಿಸದಿದ್ದರೂ, ಜೂನ್‌ನಲ್ಲಿ ಸ್ಕಾರ್ಪಿಯೊ 20ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಯಾಗಲಿದೆ ಎನ್ನುವುದು ಗ್ರಾಹಕರ ನಿರೀಕ್ಷೆಯಾಗಿದೆ.

 

ಓದಿ... ವಿವಾಹ ವಾರ್ಷಿಕೋತ್ಸವ: ಎನ್‌ಟಿಆರ್‌–ಪ್ರಶಾಂತ್‌ ನೀಲ್‌ ದಂಪತಿಗಳ ಸಂಭ್ರಮಾಚಣೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು