ಮೌಂಟ್ ಎವರೆಸ್ಟ್ ಶಿಖರದ 360 ಡಿಗ್ರಿ ದೃಶ್ಯ: ವಿಡಿಯೊ ಹಂಚಿಕೊಂಡ ಆನಂದ್ ಮಹೀಂದ್ರಾ

ನವದೆಹಲಿ: ಮೌಂಟ್ ಎವರೆಸ್ಟ್ ಶಿಖರದ ಮೇಲಿಂದ 360 ಡಿಗ್ರಿ ದೃಶ್ಯ ನೋಡುವುದೇ ಒಂದು ಅದ್ಭುತ ಅನುಭವ.
ಮೌಂಟ್ ಎವರೆಸ್ಟ್ ಶಿಖರದ ವಿಡಿಯೊವನ್ನು ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಮೌಂಟ್ ಎವರೆಸ್ಟ್ ಶಿಖರದಿಂದ 360 ಡಿಗ್ರಿ ನೋಟ. ಕೆಲವೊಮ್ಮೆ ನೀವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸನ್ನಿವೇಶ ಬಂದಾಗ ಪ್ರಪಂಚದ ಅಡೆತಡೆಯಿಲ್ಲದ ನೋಟದೊಂದಿಗೆ ನೀವು ಎವರೆಸ್ಟ್ ಶಿಖರದ ಮೇಲಿರುವಿರಿ ಎಂದು ಊಹಿಸಲು ಸಹಾಯ ಮಾಡುತ್ತದೆ. ‘ದೊಡ್ಡ ಚಿತ್ರ’ ನೋಡಲು ಸುಲಭವಾಗುತ್ತದೆ ಎಂದು ಆನಂದ್ ಬರೆದುಕೊಂಡಿದ್ದಾರೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಅದ್ಭುತ ಎಂದು ಪ್ರತಿಕ್ರಿಯಿಸಿದ್ದಾರೆ.
360 degree view from the top of Mount Everest. Sometimes, when you have to make hard decisions, it helps to imagine you’re on top of Everest with an unobstructed view of the world. Becomes easier to see the ‘big picture.’
pic.twitter.com/qciTw4L7j4— anand mahindra (@anandmahindra) April 5, 2022
ಓದಿ...
ಮತ್ತೊಂದು ಹಾಟ್ ಫೋಟೊ ವೈರಲ್: ತಾವೇ ಸ್ವತಃ ಮೇಕಪ್ ಮಾಡಿಕೊಂಡ ದಿಶಾ ಪಟಾನಿ!
ಚಿನ್ನಾಭರಣ ಸೇರಿ ಇಡೀ ಆಸ್ತಿ ರಾಹುಲ್ ಹೆಸರಿಗೆ ವರ್ಗಾಯಿಸಿದ ವೃದ್ಧೆ: ಕಾರಣವೇನು?
ಗಾಂಜಾ ವ್ಯಸನಿ ಮಗನ ಮುಖಕ್ಕೆ ಖಾರದ ಪುಡಿ ಎರಚಿ ಥಳಿಸಿದ ತಾಯಿ: ವಿಡಿಯೊ ವೈರಲ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.