ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಾಭರಣ, ಇಡೀ ಆಸ್ತಿಯನ್ನು ರಾಹುಲ್‌ಗೆ ವರ್ಗಾಯಿಸಿದ ವೃದ್ಧೆ: ಕಾರಣವೇನು?

Last Updated 5 ಏಪ್ರಿಲ್ 2022, 7:07 IST
ಅಕ್ಷರ ಗಾತ್ರ

ಡೆಹ್ರಾಡೂನ್: 78 ವರ್ಷದ ವೃದ್ಧೆ ಪುಷ್ಪಾ ಮುಂಜಿಯಲ್ ಅವರು ತನ್ನ ಚಿನ್ನಾಭರಣ ಸೇರಿದಂತೆ ಇಡೀ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ್ದಾರೆ. ಜತೆಗೆ, ರಾಹುಲ್ ಗಾಂಧಿ ಸೇವೆ ದೇಶಕ್ಕೆ ಅಗತ್ಯವಿದೆ ಎಂದು ಪುಷ್ಪಾ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ಉತ್ತರಖಂಡದ ಡೆಹ್ರಾಡೂನ್‌ನ ನಿವಾಸಿಯಾಗಿರುವ ಪುಷ್ಪಾ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯಿಂದ ಪ್ರಭಾವಿತರಾಗಿದ್ದಾರೆ. ರಾಹುಲ್ ವಿಚಾರಧಾರೆಗಳು ಈ ದೇಶದ ಪ್ರಗತಿಗೆ ಅಗತ್ಯ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಅವರಿಗೆ ಸಾಧ್ಯವಿದೆ. ಹೀಗಾಗಿ ಆಸ್ತಿ ಎಲ್ಲವೂ ಮರಣ ನಂತರ ರಾಹುಲ್ ಗಾಂಧಿಗೆ ಸೇರಬೇಕು ಎಂದು ವಿಲ್‌ (ಉಯಿಲು) ಬರೆದುಕೊಟ್ಟಿದ್ದಾರೆ.

10 ತೊಲ ಬಂಗಾರ (ಸುಮಾರು ₹5.5 ಲಕ್ಷ) ಸೇರಿದಂತೆ ₹50 ಲಕ್ಷ ಮೌಲ್ಯದ ಆಸ್ತಿಯನ್ನು ರಾಹುಲ್ ಹೆಸರಿಗೆ ವರ್ಗಾಯಿಸಿದ್ದಾರೆ. ಈ ಕುರಿತು ಕೋರ್ಟ್‌ಗೆ ವಿಲ್‌ ಪತ್ರವನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಮೆಟ್ರೋಪೊಲಿಟಿಯನ್ ಅಧ್ಯಕ್ಷ ಲಾಲ್‌ಚಂದ್ ಶರ್ಮಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT