ಲಂಡನ್ ಯೂಸ್ಟನ್‌ನ ಅವಂತಿ ವೆಸ್ಟ್ ಕೋಸ್ಟ್ ರೈಲು ನಿಲ್ದಾಣದಲ್ಲಿ ಮ್ಯಾಂಚೆಸ್ಟರ್‌ಗೆ ಇನ್ನೇನು ಹೊರಡಲಿದ್ದ ರೈಲನ್ನು ಬೆಕ್ಕೊಂದು ತಡೆದು ನಿಲ್ಲಿಸಿದೆ. ಮೆಟ್ರೋ ರೈಲಿನ ಮೇಲ್ಭಾಗದಲ್ಲಿ ಕುಳಿತ ಬೆಕ್ಕು, ಅಲ್ಲಿಂದ ಕೆಳಗೆ ಇಳಿದು ಬರಲು ಒಪ್ಪಿಲ್ಲ.

ರೈಲಿನ ಮೇಲೇರಿ ಕುಳಿತ ಬೆಕ್ಕಿನ ಫೋಟೋ ವೈರಲ್ ಆಗಿದ್ದು, ಟ್ವಿಟರ್‌ನಲ್ಲಿ ಜನರು ಪೋಸ್ಟ್ ಮಾಡಿ ಹಂಚಿಕೊಳ್ಳುವ ಮೂಲಕ ನಾನಾ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಬೆಕ್ಕಿನಿಂದಾಗಿ ಆ ರೈಲಿನಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಮತ್ತೊಂದು ರೈಲಿಗೆ ಕಳುಹಿಸಲಾಗಿದೆ. ಅಲ್ಲದೆ, ಬೆಕ್ಕನ್ನು ರಕ್ಷಿಸಲು ಬಂದ ಸಿಬ್ಬಂದಿ ಎರಡೂವರೆ ಗಂಟೆ ಕಾಲ ಶ್ರಮಿಸಿ, ಕೊನೆಗೂ ಬೆಕ್ಕನ್ನು ಕೆಳಗಡೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೈಲಿನ ಮೇಲ್ಭಾಗದಲ್ಲಿ ವಿದ್ಯುತ್ ತಂತಿಗಳು ಕೂಡ ಇದ್ದು, ಬೆಕ್ಕಿಗೆ ಅಪಾಯ ಸಂಭವಿಸುವ ಸಾಧ್ಯತೆಯಿತ್ತು. ಆದರೆ ಬೆಕ್ಕು ಅದಾವುದರ ಪರಿವೆಯೇ ಇಲ್ಲದೆ ಆರಾಮವಾಗಿ ಕುಳಿತಿದ್ದ ಬೆಕ್ಕನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ನಂತರ ರೈಲು ಸಂಚಾರ ಎಂದಿನಂತೆ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.