ಭಾನುವಾರ, ಜನವರಿ 19, 2020
20 °C

ವಿಡಿಯೊ: ಪ್ಲಾಸ್ಟಿಕ್‌ ಬಾಟಲಿ ಕಕ್ಕಿದ ನಾಗರಹಾವು!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬಾಟಲಿ ಹೊರಹಾಕುತ್ತಿರುವ ನಾಗರಹಾವು

ಸಮುದ್ರ ತಳದಲ್ಲಿಯೂ ಪ್ಲಾಸ್ಟಿಕ್‌ನಿಂದ ಜೀವಿಗಳು ತೊಂದರೆಗೆ ಸಿಲುಕಿರುವ ಕುರಿತು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಮನುಷ್ಯ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಹಾವಿನ ಹರಣಕ್ಕೂ ಕುತ್ತಾಗುತ್ತಿರುವುದು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಪ್ಲಾಸ್ಟಿಕ್‌ ಕಕ್ಕಿದ ಹಾವಿನ ವಿಡಿಯೊ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ.  

ಹೊಟ್ಟೆಯ ಮಧ್ಯದಲ್ಲಿ ಸಿಲುಕಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಅದನ್ನು ಹೊರಹಾಕಲು ಬಾಯಿ ತೆರೆದ ಹಾವಿನ ನರಳಾಟ 48 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಕಾಣಬಹುದು. ಇದು ಎಲ್ಲಿ ನಡೆದಿರುವ ಘಟನೆ ಎಂಬುದು ಸ್ಪಷ್ಟವಾಗಿಲ್ಲ. ಸಾಕಷ್ಟು ಪ್ರಯತ್ನ ಪಟ್ಟು ಹಾವು ತನ್ನೊಳಗೆ ಸೇರಿಕೊಂಡಿದ್ದ ಪ್ಲಾಸ್ಟಿಕ್‌ ಬಾಟಲಿಯನ್ನು ಹೊರಹಾಕಿ ಉಸಿರು ಉಳಿಸಿಕೊಂಡಿದೆ. 

ವಿಡಿಯೊ ನೋಡಿರುವ ಟ್ವೀಟಿಗರು, ಒಂದು ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ನ ಪರಿಣಾಮಗಳ ಬಗ್ಗೆ ಚರ್ಚಿಸಿದ್ದಾರೆ. 'ನಾಗರಹಾವುಗಳಿಗೆ ನುಂಗಿದ್ದನ್ನು ಹೊರಹಾಕುವ ಶಕ್ತಿ ಇರುತ್ತದೆ, ಆದರೆ ಎಲ್ಲ ಜೀವಿಗಳಿಗೂ ಅದು ಸಾಧ್ಯವಾಗುವುದಿಲ್ಲ. ಹೊಟ್ಟೆಯೊಳಗೆ ಸೇರಿದ್ದನ್ನು ಅರಗಿಸಿಕೊಳ್ಳಲಾಗದೆ ನೋವಿನಲ್ಲಿ ನರಳಿ ಸಾಯುತ್ತವೆ' ಎಂದು ಐಎಫ್‌ಎಸ್‌ ಅಧಿಕಾರಿ ಪರ್ವೀನ್‌ ಕಾಸ್ವಾನ್‌ ಬರೆದುಕೊಂಡಿದ್ದಾರೆ. 

ವಿಡಿಯೊ 28 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ಸಾವಿರಕ್ಕೂ ಹೆಚ್ಚು ಬಾರಿ ಮರುಹಂಚಿಕೆಯಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು