ನವದೆಹಲಿ: ಸರ್ಕಾರಿ ಶಾಲೆಗಳಲ್ಲಿ ಕೆಲ ಶಿಕ್ಷಕರು ವಿಶೇಷ ಆಸಕ್ತಿವಹಿಸಿ ಉತ್ತಮ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಆ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ತುಂಬುತ್ತಾರೆ.

ಇದೇ ರೀತಿ ದೆಹಲಿಯ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿನಿ ಜೊತೆ ಸಖತ್ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಂಗ್ಲಿಷ್ ಶಿಕ್ಷಕಿ ಮನು ಗುಲಾಟಿ ಎನ್ನುವರು ತರಗತಿಯಲ್ಲಿ ಪಾಠ ಮಾಡುವಾಗ ಹರ್ಯಾಣಿ ಹಾಡಿಗೆ ಡ್ಯಾನ್ಸ್ ಮಾಡಲು ಹೇಳುತ್ತಾರೆ. ಈ ವೇಳೆ ಬಾಲಕಿ ನೃತ್ಯ ಮಾಡಲು ಆರಂಭಿಸಿದಾಗ ಇತರೆ ವಿದ್ಯಾರ್ಥಿನಿಯರು ‘ಮ್ಯಾಮ್ ನೀವು ಕೂಡ ಮಾಡಿ’ ಎನ್ನುತ್ತಾರೆ. ಈ ವೇಳೆ ಮನು ಅವರು ಬಾಲಕಿ ಜೊತೆ ನೃತ್ಯವನ್ನು ಮಾಡಿದ್ದಾರೆ.

ಈ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಮನು ಅವರು, ವಿದ್ಯಾರ್ಥಿಗಳು ಶಿಕ್ಷಕರಾಗಲು ಇಷ್ಟಪಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಮನು ಅವರ ಈ ಪ್ರಯತ್ನಕ್ಕೆ ನೆಟ್ಟಿಗರು ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದು, ಈ ರೀತಿಯ ಶಿಕ್ಷಕರು ವಿದ್ಯಾರ್ಥಿಗಳೊಡನೆ ಸುಮಧುರ ಬಾಂಧವ್ಯ ಸೃಷ್ಟಿಸಲು ಕಾರಣವಾಗುತ್ತಾರೆ ಎಂದು ಹೇಳಿದ್ದಾರೆ.

ವಿಡಿಯೊ: ಅಂಗವಿಕಲ ಮುಸ್ಲಿಂ ಸಹಪಾಠಿಗೆ ನೆರವಾದ ಹಿಂದೂ ಸ್ನೇಹಿತೆಯರು, ಮೆಚ್ಚುಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.