ಚಂಡೀಗಡ: 'ಆಜ್ ಕಲ್ ತೇರೆ ಮೇರೆ ಪ್ಯಾರ್ ಕೇ...' ಹಾಡಿಗೆ ಹೆಜ್ಜೆ ಹಾಕುತ್ತ, ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನೂ ಕೈಹಿಡಿದು ತನ್ನತ್ತ ಸೆಳೆದು ಉತ್ಸಾಹದ ಕ್ಷಣಗಳನ್ನು ಅನುಭವಿಸುತ್ತಿದ್ದರು ಫಾರೂಕ್ ಅಬ್ದುಲ್ಲಾ.

ಚಂಡೀಗಡದಲ್ಲಿ ನಡೆದ ಸಿಎಂ ಅಮರಿಂದರ್ ಅವರ ಮೊಮ್ಮಗಳು ಶೆಹರಿಂದರ್ ಕೌರ್ ವಿವಾಹ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಭಾಗಿಯಾಗಿದ್ದರು. ಕೇಂದ್ರ ಸರ್ಕಾರದ ಜೊತೆಗೆ ಒಂದಿಲ್ಲೊಂದು ವಿಷಯದಲ್ಲಿ ಗುದ್ದಾಟ ನಡೆಸುವ ಫಾರೂಕ್ ಅಬ್ದುಲ್ಲಾ ಎಲ್ಲವನ್ನೂ ಬದಿಗೊತ್ತು 'ಡ್ಯಾನ್ಸ್ ಬ್ರೇಕ್' ತೆಗೆದುಕೊಂಡಿದ್ದಂತೆ ಕಂಡಿತು.

1960, 70ರ ದಶಕದಲ್ಲಿ ಮೊಹಮ್ಮದ್ ರಫಿ ಹಾಡಿದ್ದ ಹಾಡುಗಳನ್ನು ಸಮಾರಂಭದಲ್ಲಿ ಹಾಡಲಾಗುತ್ತಿತ್ತು. ಹಾಡಿನ ಭಾವ, ತಾಳದ ಜೊತೆಗೆ ತಲ್ಲೀನರಾಗಿ ಕ್ಷಣಕ್ಷಣಕ್ಕೆ ಉತ್ಸಾಹ ಇಮ್ಮಡಿಗೊಳಿಸಿಕೊಳ್ಳುತ್ತಿದ್ದ ಫಾರೂಕ್ ಅಬ್ದುಲ್ಲಾ, ಅಮರಿಂದರ್ ಅವರನ್ನೂ ತನ್ನ ಓಘಕ್ಕೆ ಕುಣಿಸಲು ಪ್ರೇರೇಪಿಸುತ್ತಿದ್ದರು. ಒಂದೆರಡು ಹೆಜ್ಜೆ ಹಾಕಿ, ಅಮರಿಂದ್ ಚಪ್ಪಾಳೆ ತಟ್ಟುತ್ತ ತಿಂತರೆ, ಫಾರೂಕ್ ತನ್ನ ಬಾಹುಗಳನ್ನು ಲಯಬದ್ಧವಾಗಿ ಕುಣಿಸುವುದು ಮುಂದುವರಿಸಿದರು.

ದೆಹಲಿ ಮೂಲದ ಉದ್ಯಮಿಯ ಪುತ್ರ ಆದಿತ್ಯ ನಾರಂಗ್ ಜೊತಗೆ ಭಾನುವಾರ ಅಮರಿಂದರ್ ಅವರ ಮೊಮ್ಮಗಳ ಮದುವೆ ನಡೆಯಿತು. ಸಿಸ್ವಾನ್ ಫಾರ್ಮ್‌ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಅಮರಿಂದ್ ಅವರು ಪಂಜಾಬಿ ಸುಹಾಗ್ ಶೈಲಿಯ ಹಾಡುಗಳನ್ನು ಹಾಡಿದರು.

ಫಾರೂಕ್–ಅಮರಿಂದರ್ ಜೋಡಿಯ ಡ್ಯಾನ್ಸ್ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 'ರಾಜಕೀಯ ನಾಯಕರಿಗೆ ಇಂಥ ಉಲ್ಲಾಸದ ಕ್ಷಣಗಳ ಅಗತ್ಯವಿದೆ....' ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.