ಬೆಂಗಳೂರು: ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರ ವರ್ತನೆಗಳು ಆಗಾಗ ಸುದ್ದಿಯಾಗುತ್ತವೆ. ಈಗ ಇಂತಹದೇ ಘಟನೆ ಇಂಡಿಗೊ ವಿಮಾನದಲ್ಲಿ ನಡೆದಿದೆ.

ಪ್ರಯಾಣಿಕನೊಬ್ಬ ಮನೆಯಿಂದ ಫ್ಲಾಸ್ಕ್ನಲ್ಲಿ ತಂದಿದ್ದ ಚಹವನ್ನು ಸಹ ಪ್ರಯಾಣಿಕರಿಗೆ ಹಂಚಿದ ಘಟನೆ ಇತ್ತೀಚೆಗೆ ನಡೆದಿದ್ದು, ಆ ಪ್ರಯಾಣಿಕನ ವರ್ತನೆ ಹಲವರಿಗೆ ಅಚ್ಚರಿ ತರಿಸಿದೆ.

ಈ ಘಟನೆ ಇಂಡಿಗೊ ದೇಶಿ ವಿಮಾನದಲ್ಲಿ ನಡೆದಿದ್ದು ಆದರೆ ಎಲ್ಲಿ? ಯಾವಾಗ ನಡೆದಿದ್ದು? ಎಂಬುದು ಸ್ಪಷ್ಟವಾಗಿಲ್ಲ. ಮೂರು ದಿನಗಳ ಹಿಂದೆ aircrew.in ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಹಂಚಿಕೆಯಾಗಿದ್ದು, ಹಲವರ ಗಮನ ಸೆಳೆದಿದೆ.

ಪ್ರಯಾಣಿಕರು ಹೊರಗಿನಿಂದ ತಿಂಡಿ–ತಿನಿಸು, ಪಾನೀಯಗಳನ್ನು ಹೊರಗಿನಿಂದ ತಂದು ವಿಮಾನದಲ್ಲಿ ತಿನ್ನುವ ಹಾಗಿಲ್ಲ ಎಂಬುದು ವಿಮಾನ ಪ್ರಯಾಣಿಕರಿಗೆ ಇರುವ ಕಟ್ಟುನಿಟ್ಟಿನ ನಿಯಮ. ಆದರೆ, ಈ ವ್ಯಕ್ತಿ ಮನೆಯಿಂದ ಟೀ ತಂದಿದ್ದಲ್ಲದೇ ಅದನ್ನು ಸಹ ಪ್ರಯಾಣಿಕರಿಗೆ ಹಂಚಿದ್ದು ಬೆರಗು ಮೂಡಿಸಿದೆ.

ವಿಮಾನಯಾನ ಸಂಸ್ಥೆಗಳು ವಿಮಾನ ಪ್ರಯಾಣದ ಸಂದರ್ಭದಲ್ಲಿ ಊಟ, ತಿಂಡಿ, ಪಾನೀಯಗಳಿಗೆ ದುಭಾರಿ ಹಣವನ್ನು ಪಡೆಯುವುದನ್ನು ವಿರೋಧಿಸಲು ಆ ವ್ಯಕ್ತಿ ಹೀಗೆ ಮಾಡಿದ್ದಾನೆಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಭಾರತದಲ್ಲಿ ಮತ್ತು ಭಾರತೀಯರಿಂದ ಮಾತ್ರ ಇದು ಸಾಧ್ಯ ಎಂದು ಹಲವು ನೆಟ್ಟಿಗರು ಅನಿಸಿಕೆ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.