ಮೆಡಿಕಲ್‌ ಶಾಪ್‌ಗೆ ಬಂದು ಚಿಕಿತ್ಸೆ ಪಡೆದ ಬೀದಿ ನಾಯಿ: ವೈರಲ್ ವಿಡಿಯೊ 

ಮಂಗಳವಾರ, ಜೂಲೈ 16, 2019
25 °C

ಮೆಡಿಕಲ್‌ ಶಾಪ್‌ಗೆ ಬಂದು ಚಿಕಿತ್ಸೆ ಪಡೆದ ಬೀದಿ ನಾಯಿ: ವೈರಲ್ ವಿಡಿಯೊ 

Published:
Updated:

ಇಸ್ತಾನ್‌ಬುಲ್: ಬೀದಿನಾಯಿಯೊಂದು ಮೆಡಿಕಲ್‌ಗೆ ಬಂದು ಗಾಯವನ್ನು ತೋರಿಸಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ದಿ ಡೊಡೊ ವೆಬ್‌ಸೈಟ್ ಪ್ರಕಾರ, ಕಳೆದವಾರ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಗಾಯಗೊಂಡ ಬೀದಿನಾಯಿಯೊಂದು ಬಾನು ಸೆಂಗಿಜ್ ಅವರ ಮೆಡಿಕಲ್ ಶಾಪ್‌ಗೆ ಬಂದಿತ್ತು. ಪ್ರಾಣಿ ಪ್ರಿಯರಾದ ಬಾನು ಫಾರ್ಮಸಿ ಒಳಗೆ ನಾಯಿಗೆ ಮಲಗಲು ಜಾಗ ಮಾಡಿಕೊಟ್ಟಿದ್ದಾರೆ. ಆದರೆ ನಾಯಿ ಮಲಗುವ ಬದಲು ಬಾನು ಅವರ ಮುಂದೆ ಬಂದು ವಿನಮ್ರ ಭಾವದಿಂದ ನಿಂತುಕೊಂಡಿದೆ. 

ದಿ ಡೊಡೊ ಜತೆ ಮಾತನಾಡಿದ ಬಾನು, ಅವಳು (ನಾಯಿ) ನನ್ನನ್ನೇ ನೋಡುತ್ತಿದ್ದಳು. ಏನಾಯ್ತು ಮಗೂ ಎಂದು ನಾನು ಕೇಳಿದೆ. ಆಗ ಅವಳು ತನ್ನ ಉಗುರುಗಳನ್ನು ತೋರಿಸಿದಳು. ಅಲ್ಲಿ ಗಾಯವಾಗಿತ್ತು, ಕೂಡಲೇ ಮದ್ದು ಹಚ್ಚಿದೆ.  

ಫಾರ್ಮಸಿಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಈ ಎಲ್ಲ ದೃಶ್ಯಗಳು ಸೆರೆಯಾಗಿವೆ.  ಬಾನು ಅವರೇ ಶೇರ್ ಮಾಡಿರುವ ಇನ್ನೊಂದು ವಿಡಿಯೊದಲ್ಲಿ ನಾಯಿಯ ಗಾಯಗಳನ್ನು ಸ್ವಚ್ಛ ಮಾಡಿ ಅದಕ್ಕೆ ಮದ್ದು ಹಚ್ಚುತ್ತಿರುವ ದೃಶ್ಯಗಳಿವೆ.

ಇಷ್ಟೆಲ್ಲಾ ಮಾಡಿದ ಮೇಲೆ ನಾಯಿ ನನಗೆ ಥ್ಯಾಂಕ್ಸ್ ಹೇಳಿತು.ನನಗೆ ನಿನ್ನ ಮೇಲೆ ನಂಬಿಕೆ ಇದೆ ಎಂದಳವಳು ಅಂತಾರೆ ಬಾನು.

ಚಿಕಿತ್ಸೆ ಪಡೆದ ನಂತರ ಸ್ವಲ್ಪ ಹೊತ್ತು ಫಾರ್ಮಸಿಯಲ್ಲೇ ಆ ನಾಯಿ ಮಲಗಿದೆ. ಬಾನು ಸೆಂಗಿಜ್ ಅವರ ಪ್ರಾಣಿ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !