ಬುಧವಾರ, ಮಾರ್ಚ್ 22, 2023
33 °C

ರೇಷನ್ ಕಾರ್ಡ್‌ನಲ್ಲಿ ದತ್ತಾ ಬದಲು ಕುತ್ತಾ! ಆತ ಮಾಡಿದ್ದೇನು ಗೊತ್ತಾ? Video ನೋಡಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ವ್ಯಕ್ತಿಯೊಬ್ಬರ ಹೆಸರನ್ನು ರೇಷನ್ ಕಾರ್ಡ್‌ನಲ್ಲಿ ದತ್ತಾ ಬದಲು ಕುತ್ತಾ (ನಾಯಿ) ಎಂದು ದಾಖಲು ಮಾಡಿದ್ದಕ್ಕೆ ಆತ ಸಂಬಂಧಿಸಿದ ಅಧಿಕಾರಿಗಳಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾನೆ.

ಈ ಘಟನೆ ಪಶ್ಚಿಮ ಬಂಗಾಳದ ಬಂಕುರಾದಲ್ಲಿ ನಡೆದಿದೆ.

ಶ್ರೀಕಾಂತಿ ಕುಮಾರ್ ದತ್ತಾ ಎನ್ನುವ ವ್ಯಕ್ತಿಯ ಹೆಸರಲ್ಲಿ ದತ್ತಾ ಬದಲು ಕುತ್ತಾ ಎಂದು ತಪ್ಪಾಗಿ ನಮೂದಿಸಲಾಗಿದೆ. ಇದರಿಂದ ಕೆರಳಿದ ಶ್ರೀಕಾಂತಿ ಕುಮಾರ್ ಬಂಕುರಾದ ಸ್ಥಳೀಯ ಪಾಲಿಕೆ ಅಧಿಕಾರಿ ಕಾರಿನಲ್ಲಿ ಬರುವಾಗ ಎದುರು ಹೋಗಿ ಪ್ರತಿಭಟನೆ ರೂಪವಾಗಿ ಯಾವುದೇ ಒಂದು ಮಾತು ಮಾತನಾಡದೇ ಬೌ ಬೌ ಎಂದು ಬೊಗಳಿದ್ದಾನೆ. ಇದರಿಂದ ಕಂಗಾಲದ ಅಧಿಕಾರಿ ದಾಖಲೆ ನೋಡಿ ಹೌಹಾರಿದ್ದಾರೆ.

 

ಕಡೆಗೂ ಸುಮ್ಮನಾಗದ ಶ್ರೀಕಾಂತಿ ಕುಮಾರ್ ದತ್ತಾ, ನಾಯಿಯ ಹಾಗೇ ಬೊಗಳಿ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿದೆ. ಕಡೆಗೆ ಅಧಿಕಾರಿಗಳು ಸರಿ ಮಾಡುವುದಾಗಿ ಭರವಸೆ ನೀಡಿ ಕಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು