ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಲ್‌ ವಿಡಿಯೊ: ನಾಯಿ ಮರಿ ರಕ್ಷಿಸಿ ಸೂಪರ್‌ ಹಿರೋಗಳಾದ ಯುವಕರು

Last Updated 29 ಅಕ್ಟೋಬರ್ 2019, 11:47 IST
ಅಕ್ಷರ ಗಾತ್ರ

ಬೀಜಿಂಗ್‌: ಕಾಲುವೆ ನೀರಿನಲ್ಲಿ ಸಿಲುಕಿ ಮೇಲಕ್ಕೆ ಬರಲು ಒದಾಡುತ್ತಿದ್ದ ನಾಯಿ ಮರಿಯನ್ನು ರಕ್ಷಣೆ ಮಾಡಿದ ಇಬ್ಬರು ಯುವಕರುಚೀನಾದಲ್ಲಿ ಸೂಪರ್‌ ಹಿರೋಗಳಾಗಿದ್ದಾರೆ.

ಯುವಕನೊಬ್ಬ ಕಾಲುವೆ ದಡದಲ್ಲಿ ನಿಂತು ಕೈ ಚಾಚಿ ನಾಯಿ ಮರಿಯನ್ನು ರಕ್ಷಣೆ ಮಾಡಿದ್ದಾನೆ. ಆ ಯುವಕನಿಗೆ ಮತ್ತೊಬ್ಬ ಯುವಕ ಸಹಾಯ ಮಾಡಿದ್ದಾನೆ. ಯುವಕರು ನಾಯಿ ಮರಿಯನ್ನು ರಕ್ಷಣೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಣಗಳಲ್ಲಿ ವೈರಲ್‌ ಆಗಿದೆ.

ಚೀನಾದ ನ್ಯೂಸ್‌ ವೆಬ್‌ಸೈಟ್‌ಗಳು ಮತ್ತು ಸುದ್ದಿ ವಾಹಿನಿಗಳಲ್ಲೂ ಈ ವಿಡಿಯೊ ವೈರಲ್‌ ಆಗಿದೆ. ಮೊದಲು ಪೀಪಲ್‌ ಡೈಲಿ ನೂಸ್‌ ವೆಬ್‌ಸೈಟ್‌ ಈ ವಿಡಿಯೊವನ್ನು ಪ್ರಕಟಿಸಿತ್ತು.

ಜೀವದ ಹಂಗು ತೊರೆದು ಯುವಕರು ನಾಯಿ ಮರಿಯನ್ನು ರಕ್ಷಣೆ ಮಾಡಿರುವುದಕ್ಕೆ ಜನರುಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT