ರಾಜಸ್ಥಾನದ ಆ ಮಹಿಳೆ ತನ್ನ ಮಗನಿಗೆ ಬದುಕುವ ರೀತಿ, ವ್ಯವಹಾರ ಜ್ಞಾನವನ್ನು ಕಲಿಸಬೇಕು ಎಂದುಕೊಂಡಿದ್ದರು. ಅದಕ್ಕಾಗಿ, ನಾಲ್ಕು ಗೋಡೆಗಳ ನಡುವೆ ಕೂರಿಸಿಕೊಂಡು ಎಲ್ಲವನ್ನೂ ಹೇಳಿಕೊಡುವುದಕ್ಕಿಂತ, ಪ್ರಾಯೋಗಿಕವಾಗಿಯೇ ಅರ್ಥ ಮಾಡಿಸಬೇಕು ಎಂಬ ತೀರ್ಮಾನವನ್ನೂ ಮಾಡಿದ್ದರು.

ವಿಭಿನ್ನ ಮಾರ್ಗವನ್ನು ಆರಿಸಿಕೊಂಡ ಅವರು, ಉದಯಪುರದ ರಸ್ತೆಗೆ ಮಗನನ್ನು ಕರೆದುಕೊಂಡು ಹೋಗಿ, ಚಿಕ್ಕಿ ಮಾರಲು ಹೇಳಿದರು. ಅಷ್ಟು ಮಾಡಿ ಹೊರಡದೆ, ಪಕ್ಕದಲ್ಲೇ ನಿಂತು ಎಲ್ಲವನ್ನೂ ಗಮನಿಸಲಾರಂಭಿಸಿದರು.

ಬಾಲಕ ರಸ್ತೆ ಬದಿಯಲ್ಲಿ ಸಣ್ಣದೊಂದು ಡಬ್ಬ ಇಟ್ಟುಕೊಂಡು ವ್ಯಾಪಾರ ಶುರುಮಾಡಿದ. ಗ್ರಾಹಕರೊಂದಿಗೆ ಜಾಗರೂಕತೆಯಿಂದ ವ್ಯವಹಾರಕ್ಕಿಳಿದ. ವಿನಯವಾಗಿ ನಗುಮುಖದಿಂದಲೇ ಸಂವಹನ ನಡೆಸಿದ. ಚಿಕ್ಕಿ ಕೊಂಡವರು ಕೊಟ್ಟ ಹಣವನ್ನು ಎಚ್ಚರಿಕೆಯಿಂದ ಎಣಿಸುತ್ತಾ, ಜವಾಬ್ದಾರಿಯಿಂದ ವ್ಯವಹಾರ ನಿಭಾಯಿಸಲಾರಂಭಿಸಿದ.

ಹುಡುಗನ ಆತ್ಮವಿಶ್ವಾಸವನ್ನು ಕಂಡ ದಾರಿಹೋಕರು, ಅವನತ್ತ ಬಂದರು. ಮಾತಿಗಿಳಿದರು. ಚಿಕ್ಕಿ ಕೊಂಡರು. ಆ ಬಾಲಕನ ವ್ಯಾಪಾರವೂ ಕುದಿರಿತು. ಹಾಗೇ ಲೋಕ ಜ್ಞಾನವೂ..

ಇದನ್ನೆಲ್ಲ ಅಪರಿಚಿತರಂತೆ ನಿಂತು ಸ್ವಲ್ಪ ದೂರದಿಂದ ವಿಡಿಯೊ ಮಾಡಿಕೊಂಡ ತಾಯಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ. ವಿಡಿಯೊವನ್ನ ನೋಡಿದ ನೆಟ್ಟಿಗರು ತಾಯಿಗೆ ಸಲಾಂ ಹೊಡೆದು, ವಿಶಿಷ್ಟ ಚಿಂತನೆ ಮಾಡಿದ್ದಕ್ಕೆ ಶಹಬ್ಬಾಸ್ ಹೇಳುತ್ತಿದ್ದಾರೆ.

ಅಂದಹಾಗೆ ಆ ತಾಯಿಯ ಹೆಸರು ಚೀನೀ ಮೆಹ್ತಾ. ಅವರ ಪ್ರಕಾರ ಇದು ವ್ಯವಹಾರ ಅಲ್ಲವೇ ಅಲ್ಲ. ತಮ್ಮ ಮಗನಿಗೆ ಜವಾಬ್ದಾರಿ, ಸ್ವತಂತ್ರವಾಗಿ ಬದುಕುವುದನ್ನು ಕಲಿಸುವ ಪ್ರಾಥಮಿಕ ಶಿಕ್ಷಣವಷ್ಟೇ. ಪಠ್ಯ ಪುಸ್ತಕಗಳು, ಶಾಲಾ ಪರೀಕ್ಷೆಗಳು ಕಲಿಸಲು ಸಾಧ್ಯವಾಗದ ಪಾಠವನ್ನು ತಮ್ಮ ಮಗ, ಅಪರಿಚಿತರೊಂದಿಗೆ ಸಂವಹನ ಹಾಗೂ ಹಣಕಾಸಿನ ವ್ಯವಹಾರ ನಡೆಸುವ ಮೂಲಕ ಸಣ್ಣಪುಟ್ಟ ಸವಾಲುಗಳನ್ನು ಎದುರಿಸುವ ಮೂಲಕ ಕಲಿಯುತ್ತಾನೆ ಎಂಬುದು ಮೆಹ್ತಾ ಅವರ ನಂಬಿಕೆ.

ಈ ಕುರಿತು 'TheBetterIndia' ವೆಬ್ಸೈಟ್ ವರದಿ ಮಾಡಿದ್ದು, 'ದೇಶದಾದ್ಯಂತ ಪೋಷಕರು ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಮ್ಮ ಮಕ್ಕಳಿಗೆ ಪ್ರಾಯೋಗಿಕ ಕಲಿಕೆ ನೀಡುವುದಕ್ಕಾಗಿ ಸಣ್ಣ ಅಂಗಡಿಗಳನ್ನು ನಡೆಸುವುದು ಅಥವಾ ಕೌಟುಂಬಿಕ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದರಿಂದ, ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಲೋಕ ಜ್ಞಾನ ಲಭಿಸುತ್ತದೆ. ಅವರಲ್ಲಿ, ಸ್ವಾವಲಂಬನೆ ಭಾವ ಮೂಡುತ್ತದೆ. ಶ್ರಮ ಮತ್ತು ಪ್ರತಿಫಲದ ನಡುವಿನ ಸಂಬಂಧವನ್ನೂ ಅವರು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ' ಎಂದು ಉಲ್ಲೇಖಿಸಿದೆ.

'ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳ ಇದ್ದದ್ದೇ. ಆದರೆ, ಈ ರೀತಿ ಮುಕ್ತ ವಾತಾವರಣದಲ್ಲಿ ಕಲಿಯುವ ಪಾಠವನ್ನು ಸಾಂಪ್ರದಾಯ ಶಿಕ್ಷಣದಿಂದ ನಿರೀಕ್ಷಿಸಲಾಗದು. ಮೆಹ್ತಾ ಅವರ ಮಗ ಚಿಕ್ಕಿಗಳನ್ನು ಮಾರುತ್ತಾ ನಾಣ್ಯಗಳನ್ನು ಎಣಿಸುತ್ತಲೇ ಗ್ರಾಹಕರೊಂದಿಗೆ ಸಂಭಾಷಣೆ ನಡೆಸುವ ಮೂಲಕ ಬದುಕಿನುದ್ದಕ್ಕೂ ನೆರವಾಗುವ ಕೌಶಲಗಳನ್ನು, ಆತ್ಮ ವಿಶ್ವಾಸವನ್ನು ಪಡೆಯುತ್ತಿದ್ದಾನೆ' ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಅನುಭವ, ತಾಳ್ಮೆ ಮತ್ತು ಸರಿಯಾದ ಮಾರ್ಗದರ್ಶನವಿದ್ದರೆ ಅತ್ಯಂತ ಮೌಲ್ಯಯುತ ಪಾಠಗಳನ್ನೂ ಕಲಿಯಲು ಸಾಧ್ಯ ಎಂಬುದನ್ನು ಮೆಹ್ತಾ ಸಾಬೀತು ಮಾಡಿದ್ದಾರೆ.

ಅದಕ್ಕೇ ಅಲ್ಲವೇ ಹೇಳೋದು 'ತಾಯಿಯೇ ಮೊದಲ ಗುರು' ಎಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.