ಸೋಮವಾರ, ಜೂನ್ 21, 2021
30 °C

ಉದ್ಯೋಗ ಕೋರಿ 3D ವಿಡಿಯೊ ಅರ್ಜಿ ಸಲ್ಲಿಸಿದ ಯುವಕನಿಗೆ ಸಿಕ್ತು ಡ್ರೀಮ್ ಜಾಬ್!

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Avkash Shah

ಮುಂಬೈ: ಉದ್ಯೋಗ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಸಂದರ್ಭ ಕೆಲವರು ಅತ್ಯಂತ ಕ್ರೀಯಾಶೀಲತೆ ಬಳಸುತ್ತಾರೆ. ಅದರಂತೆ ಮುಂಬೈನಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಸಂದರ್ಭ ಯುವಕನೋರ್ವ 3D ವಿಡಿಯೊ ಮೂಲಕ ತನ್ನ ಬಗ್ಗೆ ಹೇಳಿಕೊಂಡಿದ್ದು, ಅದನ್ನು ನೋಡಿ ಮೆಚ್ಚಿದ ಕಂಪನಿ, ಕೂಡಲೇ ಆತನಿಗೆ ಕೆಲಸದ ಆಫರ್ ನೀಡಿದೆ.

ಮುಂಬೈ ಮೂಲದ ಅವಕಾಶ್ ಶಾ ಎನ್ನುವ 21ರ ಯುವಕ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಬಳಸುವ ಕ್ರೆಡ್ ಆ್ಯಪ್ ಕಂಪನಿಯಲ್ಲಿ ಯುವಕ ವಿನ್ಯಾಸ ವಿಭಾಗದಲ್ಲಿ ಕೆಲಸ ಬಯಸಿದ್ದ.

ಅದರಂತೆ, ತನ್ನ 3D ಗ್ರಾಫಿಕ್ಸ್ ಮತ್ತು ಮೋಶನ್ ವಿಡಿಯೋ ಕೌಶಲ ಬಳಸಿಕೊಂಡು, ಅದಕ್ಕೆ ತಕ್ಕಂತೆ ಕಿರು ಪರಿಚಯ ವಿಡಿಯೊ ಒಂದನ್ನು ತಯಾರಿಸಿ, ಲಿಂಕ್ಡ್ ಇನ್ ಮೂಲಕ ಅರ್ಜಿ ಸಲ್ಲಿಸಿದ್ದ.

ಅವಕಾಶ್ ಕ್ರೀಯಾಶೀಲತೆಯ ವಿಡಿಯೊ ಅರ್ಜಿ ಗಮನಿಸಿದ ಕ್ರೆಡ್ ಕಂಪನಿ ಸ್ಥಾಪಕ, ಕುನಾಲ್ ಶಾ, ಕ್ರೆಡ್‌ನ ವಿನ್ಯಾಸ ವಿಭಾಗದ ಮುಖ್ಯಸ್ಥ ಹರೀಶ್ ಶಿವರಾಮಕೃಷ್ಣನ್ ಆತನನ್ನು ಸ್ವಾಗತಿಸಿದ್ದು, ಅಲ್ಲಿಯೇ ಕೆಲಸದ ಆಫರ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಸ್ವತಃ ಲಿಂಕ್ಡ್ ಇನ್ ಕೂಡ ಅವಕಾಶ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಶುಭಹಾರೈಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು