ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಹಾರಾಟದ ಮಧ್ಯೆ ವಿಮಾನದ ಕಿಟಕಿಗೆ ಒದ್ದ ಪಾಕಿಸ್ತಾನದ ಪ್ರಯಾಣಿಕ

Last Updated 20 ಸೆಪ್ಟೆಂಬರ್ 2022, 5:46 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ವಿಮಾನ ಪ್ರಯಾಣದ ವೇಳೆ ಪಾಕಿಸ್ತಾನದ ವ್ಯಕ್ತಿಯೊಬ್ಬ ಶರ್ಟ್‌ ಬಿಚ್ಚಿ ರಾದ್ಧಾಂತ ಮಾಡಿದ್ದಲ್ಲದೆ, ಕಿಟಕಿಗೆ ಬಲವಾಗಿ ಒದೆಯುವ ಮೂಲಕ ಆತಂಕ ಸೃಷ್ಟಿಸಿದ್ದಾನೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ತೀವ್ರ ಕಳವಳ ವ್ಯಕ್ತವಾಗಿದೆ.

ಪೇಶಾವರದಿಂದ ದುಬೈಗೆ ಪ್ರಯಾಣಿಸುತ್ತಿದ್ದ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ನ ಪಿಕೆ-283 ವಿಮಾನದಲ್ಲಿ ಸೆಪ್ಟೆಂಬರ್‌ 14, ಬುಧವಾರ ಈ ಘಟನೆ ಸಂಭವಿಸಿದೆ.

ವಿಮಾನದಲ್ಲಿದ್ದ ಸಿಬ್ಬಂದಿ ಆತನನ್ನು ದುಬೈಗೆ ತಲುಪುವವರೆಗೆ ಸೀಟಿಗೆ ಕಟ್ಟಿಹಾಕಿದ್ದಾರೆ. ಬಳಿಕ ದುಬೈ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಡಾನ್‌ ವರದಿ ಪ್ರಕಾರ, ಪೇಶಾವರ ನಿಲ್ದಾಣದಿಂದ ವಿಮಾನವು ಹಾರಾಟ ಆರಂಭಿಸುತ್ತಿದ್ದಂತೆ ಕೆಳಗಿಳಿಸುವಂತೆ ಸಿಬ್ಬಂದಿ ಬಳಿ ಕೇಳಿಕೊಂಡಿದ್ದಾನೆ. ಬಳಿಕ ಸೀಟುಗಳಿಗೆ ಗುದ್ದುವುದು, ಒದೆಯುವುದು ಮಾಡಿದ್ದಲ್ಲದೆ, ಶರ್ಟ್‌ ಬಿಚ್ಚಿ ಗಲಾಟೆ ಆರಂಭಿಸಿದ್ದಾನೆ. ಇದರಿಂದ ಉಳಿದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ಓರ್ವ ಸಿಬ್ಬಂದಿ ಆತನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾನೆ. ಆತನ ವರ್ತನೆ ಮಿತಿಮೀರಿದಾಗ ಹಿಡಿದು ಸೀಟಿಗೆ ಕಟ್ಟಿಹಾಕಲಾಗಿದೆ. ಬಳಿಕ ದುಬೈ ಪೊಲೀಸರಿಗೆ ದೂರು ನೀಡಲಾಗಿದೆ. ಇತ್ತೀಚಿನ ವರದಿ ಪ್ರಕಾರ ಆತನನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.

ಇದರೊಂದಿಗೆ ಮತ್ತೊಂದು ವಿಡಿಯೊ ವೈರಲ್‌ ಆಗಿದೆ. ಅದರಲ್ಲಿ ಪಾಕಿಸ್ತಾನದ ಪ್ರಯಾಣಿಕನೆಲದಲ್ಲಿ ಮಲಗಿ ಪ್ರಾರ್ಥನೆ ಸಲ್ಲಿಸುತ್ತಿರುವುದು, ಸಿಬ್ಬಂದಿ ಆತನನ್ನು ಬಲವಂತವಾಗಿ ಎಬ್ಬಿಸಿ ಸೀಟಲ್ಲಿ ಕೂರಿಸುತ್ತಿರುವುದು ಇದೆ. ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡದಿರುವುದಕ್ಕೆ ಗಲಾಟೆ ಶುರು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT