ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮೇಲೆ ನದಿಯಂತೆ ಹರಿದ ರೆಡ್ ವೈನ್! ವಿಡಿಯೊ ನೋಡಿ

ಪೋರ್ಚುಗಲ್‌ನಲ್ಲಿ ಘಟನೆ
Published 12 ಸೆಪ್ಟೆಂಬರ್ 2023, 13:36 IST
Last Updated 12 ಸೆಪ್ಟೆಂಬರ್ 2023, 13:36 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾನ್ಯವಾಗಿ ವಿಪರೀತ ಮಳೆಯಿಂದ ಕಾಲುವೆ, ನದಿ ಹಳ್ಳ–ಕೊಳ್ಳಗಳು ತುಂಬಿ ಹರಿಯುವುದನ್ನು ನೋಡಿರುತ್ತೇವೆ. ಮಳೆಯಿಂದ ರಸ್ತೆಗಳೂ ಪ್ರವಾಹದ ರೂಪದಲ್ಲಿ ನೋಡಿದ್ದೇವೆ.

ಆದರೆ, ಪೋರ್ಚುಗಲ್‌ನಲ್ಲಿ ಊರೊಂದರ ರಸ್ತೆಗಳಲ್ಲಿ ಕೆಂಪು ವೈನ್, ನದಿಯಂತೆ ಪ್ರವಾಹ ಸದ್ರಶ್ಯವಾಗಿ ಹರಿದಿರುವ ಅಪರೂಪದ ಘಟನೆ ನಡೆದಿದೆ.

ಈ ಕುರಿತ ವಿಡಿಯೊ ಸಾಮಾಜಿಜ ಜಾಲತಾಣದಲ್ಲಿ ಹರಿದಾಡಿದ್ದು, ಭಾರಿ ಪ್ರಮಾಣದ ವೈನ್ ರಸ್ತೆ ಪಾಲಾಗಿದೆ.

ಪೋರ್ಚುಗಲ್‌ನ Anadia ಪ್ರಾಂತ್ಯದ Sao Lorenco de Bairro ಎಂಬ ಊರಿನಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ.

ವೈನ್ ಕಾರ್ಖಾನೆಯೊಂದರಲ್ಲಿ ಸ್ಪೋಟವಾಗಿದ್ದ ಬ್ಯಾರಲ್‌ಗಳು ಒಡೆದು ಸುಮಾರ 22 ಲಕ್ಷ ಲೀಟರ್ ವೈನ್ ಚೆಲ್ಲಿ, ರಸ್ತೆಯಲ್ಲಿ ನದಿಯಂತೆ ಹರಿದಿದೆ. ಸ್ಥಳೀಯಾಡಳಿತದವರು ಕೂಡಲೇ ಎಚ್ಚೆತ್ತುಕೊಂಡು ವೈನ್ ನದಿ, ಹೊಲ–ಗದ್ದೆಗಳನ್ನು ಸೇರದಂತೆ ಕ್ರಮ ತೆಗೆದುಕೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT