ಸೋಮವಾರ, ಮೇ 23, 2022
30 °C

ಅಪ್ಪ ಹೇಳಿದ ವರನನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಯತ್ನಿಸಿದ ಮಗಳು.. ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಜೀವನ ಸಂಗಾತಿಯನ್ನು ಹುಡುಕಲು ಬಯಸುತ್ತಾರೆ. ಹೀಗೆ ತಂದೆಯೊಬ್ಬರು ಮಗಳಿಗೆ ಮ್ಯಾಟ್ರಿಮೋನಿಯಲ್ ಸೈಟ್‌ನಿಂದ ಹುಡುಗನ ಪ್ರೊಫೈಲ್ ಕಳುಸಿದ್ದರು. ಆದರೆ, ಮಗಳು ಆ ಪ್ರೊಫೈಲ್ ಅನ್ನು ಬಳಸಿಕೊಂಡ ಸೃಜನಶೀಲತೆಯು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಕ್ಕೆ ಕಾರಣವಾಗಿದೆ.

ಫಿನ್‌ಟೆಕ್ ಸಂಸ್ಥೆಯ ಬೆಂಗಳೂರು ಮೂಲದ ಸಾಲ್ಟ್‌ ಸಾರ್ಟಪ್‌ನ ಸಹ ಸಂಸ್ಥಾಪಕಿ ಉದಿತಾ ಪಾಲ್, ತಮ್ಮ ತಂದೆ ಪಾಲ್ ಕಳುಹಿಸಿದ್ದ ಪ್ರೊಫೈಲ್‌ನ ವರನನ್ನು ತಮ್ಮ ಕಂಪನಿಯ ನೌಕರನಾಗಿ ನೇಮಿಸಿಕೊಳ್ಳಲು ಯತ್ನಿಸಿದ್ದಾರೆ.

ತಾನು ಆ ರೀತಿ ಮಾಡಿದ ಬಳಿಕ ತಂದೆಯ ಪ್ರತಿಕ್ರಿಯೆ ಹೇಗಿತ್ತು ಎಂಬುದರ ವಾಟ್ಸ್‌ಆ್ಯಪ್ ಚಾಟಿಂಗ್ ಸ್ಕ್ರೀನ್‌ಶಾಟ್ ಅನ್ನೂ ಉದಿತಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ನಾವೀಗ ಮಾತನಾಡಬಹುದೇ? ತುರ್ತು.. ಎಂದು ಕೇಳಿರುವ ತಂದೆ. ನೀನೇನು ಮಾಡಿರುವೆ ಎಂದು ನಿನಗೆ ತಿಳಿದಿದೆಯೇ? ಮ್ಯಾಟ್ರಿಮೋನಿಯಲ್ ತಾಣಗಳಿಂದ ನೀನು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು. ಅವರ ತಂದೆಗೆ ನಾನು ಏನು ಹೇಳಲಿ’ ಎಂದು ತಂದೆ ಪ್ರಶ್ನಿಸಿದ್ದಾರೆ..

‘ನೀನು ವರನಿಗೆ ಕಳುಹಿಸಿದ್ದ ಮೆಸೇಜ್‌ ಅನ್ನು ನಾನು ನೋಡಿದೆ. ಅವರಿಗೆ ಸಂದರ್ಶನದ ಲಿಂಕ್ ಕಳುಹಿಸಿ, ರೆಸ್ಯೂಮ್ ಕಳುಹಿಸಲು ಹೇಳಿರುವೆ?’ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಅಂತಿಮವಾಗಿ, ತಂದೆಯ ಪ್ರಶ್ನೆಗೆ ಉತ್ತರಿಸಿರುವ ಉದಿತಾ, ನನ್ನನ್ನು ಕ್ಷಮಿಸಿ.. ಎಂದಿದ್ದಾರೆ.

ಈ ವೃತ್ತಾಂತವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಪೋಸ್ಟ್‌ಗೆ 12,000ಕ್ಕೂ ಹೆಚ್ಚು ಲೈಕ್ ಬಂದಿದೆ. 870 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ಇಡೀ ಪ್ರಸಂಗವು ಆನ್‌ಲೈನ್ ಬಳಕೆದಾರರಿಗೆ ರಂಜನೀಯ ವಿಷಯವಾಗಿದ್ದು, ಮ್ಯಾಟ್ರಿಮೋನಿಯಲ್ ಜಾಲತಾಣ, Jeevansathi.com, ನೀವು ಮದುವೆಗೆ ಸಿದ್ಧವಿದ್ದರೆ, ನಮ್ಮ ವೇದಿಕೆಯಲ್ಲಿ ‘ಪರಿಪೂರ್ಣ ಜೀವನ ಸಂಗಾತಿ’ಯನ್ನು ಹುಡುಕಿಕೊಡಲಿದ್ದೇವೆ ಎಂದು ಟ್ವೀಟ್ ಮಾಡಿದೆ.

ಈ ವಿಷಯದ ಕುರಿತಾಗಿ ಕೆಲ ಟ್ವಿಟರ್ ಬಳಕೆದಾರರು ಹಾಸ್ಯ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು