ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಿಯಾದ ಪ್ಯಾಂಟ್ ಧರಿಸಿದ ತಾಂಜೇನಿಯಾ ಸಂಸದೆಗೆ ಸಂಸತ್ತಿನಿಂದ ಗೇಟ್‌‌ಪಾಸ್

ಅಕ್ಷರ ಗಾತ್ರ

ನವದೆಹಲಿ: ಪೂರ್ವ ಆಫ್ರಿಕಾದ ತಾಂಜೇನಿಯಾ ದೇಶದಲ್ಲಿ ವಿಚಿತ್ರವಾದ ಘಟನೆಯೊಂದು ವರದಿಯಾಗಿದ್ದು, ಬಿಗಿಯಾದ ಪ್ಯಾಂಟ್ ಧರಿಸಿದ ಮಹಿಳಾ ಸಂಸದೆಯನ್ನು ಸ್ಪೀಕರ್ ಸಂಸತ್ತಿನಿಂದ ಹೊರಗೆ ಕಳುಹಿಸಿದ್ದಾರೆ.

'ಹೋಗಿಸರಿಯಾಗಿ ಡ್ರೆಸ್ ಧರಿಸಿ ಬನ್ನಿ', ಎಂದು ಮಹಿಳಾ ಸಂಸದೆ ಕಂಡೆಸ್ಟರ್ ಸಿಚ್ವಾಲೆ ಅವರಿಗೆ ಸ್ಪೀಕರ್ ಜಾಬ್ ನ್ಡುಗೈ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಕೆಲವು ಸಹೋದರಿಯರು ವಿಚಿತ್ರವಾದ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಅವರು ಸಮಾಜಕ್ಕೆ ಏನನ್ನು ತೋರಿಸಲು ಬಯಸುತ್ತಿದ್ದಾರೆ ? ಎಂದವರು ಪ್ರಶ್ನೆ ಮಾಡಿದ್ದಾರೆ.

'ಸಂಸತ್' ಸಮಾಜದ ಪ್ರತಿಬಿಂಬವಾಗಿದ್ದು, ಕೆಲವು ಮಹಿಳಾ ಎಂಪಿಗಳು ಬಿಗಿಯಾದ ಜೀನ್ಸ್ ಧರಿಸಿ ಅದನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಸಂಸದ ಹುಸೇನ್ ಅಮರ್ ಆರೋಪಿಸಿದ್ದಾರೆ. ಅಲ್ಲದೆ ಮಹಿಳಾ ಸಂಸದೆ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಮಹಿಳಾ ಸಂಸದೆಯರು ಬಟ್ಟೆ ಧರಿಸುವುದರ ಬಗ್ಗೆ ತನಗೆ ದೂರು ಬರುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದ ಸ್ಪೀಕರ್, ಅನುಚಿತವಾಗಿ ಬಟ್ಟೆ ಧರಿಸಿದ ಸಂಸದರಿಗೆ ಪ್ರವೇಶ ನಿರಾಕರಿಸುವಂತೆ ಚೇಂಬರ್‌ಗೆ ಆದೇಶ ನೀಡಿದರು.

ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಹಳದಿ ಬಣ್ಣದ ಟಾಪ್ ಧರಿಸಿ ಬಂದಿರುವುದು ಮಹಿಳಾ ಸಂಸದೆಗೆ ಮುಳುವಾಗಿ ಪರಿಣಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT