ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ಲ್ಲಿ ಎರಡು ವರ್ಷಗಳ ಬಳಿಕ ಮತ್ತೆ ಮಂಗನ ಹಬ್ಬ, ಪ್ರವಾಸಿಗರಲ್ಲಿ ಸಂಭ್ರಮ

Last Updated 28 ನವೆಂಬರ್ 2021, 11:41 IST
ಅಕ್ಷರ ಗಾತ್ರ

ಲಾಪ್‌ಬುರಿ: ಪ್ರವಾಸಿಗರು ಮತ್ತು ಸ್ಥಳೀಯರು ಥಾಯ್ಲೆಂಡ್‌ನ ಲಾಪ್‌ಬುರಿ ನಗರದಲ್ಲಿ ಸಾವಿರಾರು ಉದ್ದ ಬಾಲದ ಮಂಗಗಳಿಗೆ ಹಣ್ಣು-ತರಕಾರಿಗಳನ್ನು ಕೊಟ್ಟು ಮಂಗನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕೊರೊನಾ ವೈರಸ್‌ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಮಂಗನ ಹಬ್ಬವನ್ನು ಆಚರಿಸಿರಲಿಲ್ಲ. ಇದೀಗ ಲಸಿಕೆ ಪೂರೈಕೆ ಮತ್ತು ಕೊರೊನಾ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆ ಪುನಃ ಮಂಗನ ಹಬ್ಬವನ್ನು ಆಚರಿಸಲಾಗಿದೆ. ಸುಮಾರು ಎರಡು ಸಾವಿರ ಕೆಜಿಯಷ್ಟು ಹಣ್ಣು ಮತ್ತು ತರಕಾರಿಗಳನ್ನು ಮಂಗಗಳಿಗೆ ಹಂಚಲಾಗಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

'ಮಕಾಕ್ಯೂ' ಎಂದು ಕರೆಯಲ್ಪಡುವ ಉದ್ದ ಬಾಲದ ಮಂಗಗಳು ನಗರದ ಎಲ್ಲೆಂದರಲ್ಲಿ ಮನುಷ್ಯರನ್ನು ಹಿಂಬಾಲಿಸುವುದು, ಮೈಮೇಲೆ ಹತ್ತಿ ಆಹಾರಕ್ಕಾಗಿ ಅರಸುವುದು ಇತ್ಯಾದಿ ಕೀಟಲೆಗಳನ್ನು ಮಾಡುವುದು ಸಾಮಾನ್ಯ ದೃಶ್ಯವಾಗಿದೆ.

ಈ ಬಾರಿಯ ಮಂಗನ ಹಬ್ಬದ ಥೀಮ್‌ 'ಗಾಲಿ ಖುರ್ಚಿ ಮಂಗಗಳು' ಎಂದಾಗಿದೆ. ಇದರ ಭಾಗವಾಗಿ ಅಗತ್ಯ 100 ಮಂದಿಗೆ ಗಾಲಿ ಖುರ್ಚಿಗಳನ್ನು ನೀಡಲು ನಿರ್ಧರಿಸಿರುವುದಾಗಿ ಯಾಂಗ್‌ಯುತ್‌ ಕಿಟ್‌ವಟನೌಸೊಂಟ್‌ ತಿಳಿಸಿದ್ದಾರೆ. ಯಾಂಗ್‌ಯುತ್‌ ಇದುವರೆಗೆ ಸುಮಾರು 30 ಮಂಗನ ಹಬ್ಬಗಳನ್ನು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT