ಗುರುವಾರ , ಮೇ 26, 2022
28 °C

ಯುವ ಗಾಯಕನ ಹಾಡಿಗೆ ವಸುಂಧರಾ ರಾಜೆ ಮೆಚ್ಚುಗೆ; ವಿಡಿಯೊ ಹಂಚಿಕೊಂಡ ಮಾಜಿ ಸಿಎಂ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಯುವ ಗಾಯಕನ ಹಾಡಿಗೆ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಾಯಕ ಪಾರ್ಥ್‌ ಅವರು ವಸುಂಧರಾ ರಾಜೆ ಅವರ ಮುಂದೆ ಕೇಸರಿ ಚಿತ್ರದ ‘ತೇರಿ ಮಿಟ್ಟಿ‘ ಹಾಡನ್ನು ಹಾಡಿದ್ದಾರೆ. ಈ ವಿಡಿಯೊ ತುಣುಕನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರಾಜೆ, ಪಾರ್ಥ್‌ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

‘ರಾಜಸ್ಥಾನದ ಸುಜನ್‌ಗಢ್‌ನ ಯುವ ಗಾಯಕ ಪಾರ್ಥ್‌ ಅವರನ್ನು ಭೇಟಿಯಾಗಿ ಸಂತಸಗೊಂಡಿದ್ದೇನೆ. ಅವರು ನಮ್ಮ ಮುಂದೆ ‘ತೇರಿ ಮಿಟ್ಟಿ‘ ಹಾಡನ್ನು ಅದ್ಭುತವಾಗಿ ಹಾಡಿದರು. ಅದನ್ನು ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮಗೆ(ಪಾರ್ಥ್‌) ಶುಭವಾಗಲಿ‘ ಎಂದು ಬರೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು