ಮಂಗಳವಾರ, ಜೂನ್ 28, 2022
20 °C

85ರ ಹರೆಯದಲ್ಲೂ ಯುವಕರನ್ನು ನಾಚಿಸುವಂತೆ ಫಿಟ್ನೆಸ್ ಪ್ರದರ್ಶಿಸಿದ ಧರ್ಮೇಂದ್ರ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Twitter Screenshot

ನವದೆಹಲಿ: ಹಿರಿಯ ನಟ ಧರ್ಮೇಂದ್ರ ಈಗಲೂ ಫಿಟ್ನೆಸ್ ಕುರಿತು ಅಪಾರ ಕಾಳಜಿ ವಹಿಸುತ್ತಾರೆ ಎನ್ನುವುದಕ್ಕೆ ಅವರು ಮಾಡಿರುವ ಟ್ವೀಟ್ ಒಂದು ಸಾಕ್ಷಿಯಾಗಿದೆ.

85 ವರ್ಷದ ಧರ್ಮೇಂದ್ರ ಅವರು, ಲೋನವಾಲದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ವಾಟರ್ ಏರೋಬಿಕ್ಸ್ ಅಭ್ಯಾಸ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ಜತೆಗೆ ಯೋಗ, ಕೆಲವೊಂದು ಲಘು ವ್ಯಾಯಾಮ ಕೂಡ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಆರೋಗ್ಯವೇ ಅತ್ಯಂತ ಮುಖ್ಯ, ನೀವೂ ಕೂಡ ಆರೋಗ್ಯವಾಗಿರಿ ಎಂದು ಟ್ವೀಟ್ ಮಾಡಿರುವ ಧರ್ಮೇಂದ್ರ ಟ್ವೀಟ್‌ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

ಬಿಡುವಿನ ವೇಳೆಯಲ್ಲಿ ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುವ ಧರ್ಮೇಂದ್ರ ಅವರು, ಅತ್ಯಂತ ಉತ್ಸಾಹದಿಂದ ವ್ಯಾಯಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಯುವಕರಿಗೆ ಕೂಡ ಸ್ಫೂರ್ತಿ ನೀಡಿದೆ.

ಟ್ವಿಟರ್ ಮಾತ್ರವಲ್ಲದೆ, ಇನ್‌ಸ್ಟಾಗ್ರಾಂನಲ್ಲೂ ಧರ್ಮೇಂದ್ರ ಆಕ್ಟಿವ್ ಆಗಿದ್ದು, ಫಾರ್ಮ‌್‌ಹೌಸ್‌ನ ವಿವಿಧ ಚಿತ್ರಗಳು, ವಿಡಿಯೊಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು