ಫ್ಲಾರಿಡಾ: ಉಡ ಜಾತಿಗೆ ಸೇರಿದ ಬೃಹತ್ ಗಾತ್ರದ ಹಲ್ಲಿಯೊಂದು ಫ್ಲಾರಿಡಾದ ಮನೆಯೊಂದರ ಕಿಟಕಿ ಗಾಜಿನ ಮೇಲೆ ಪ್ರತ್ಯಕ್ಷಗೊಂಡಿದೆ. ಇದರ ವಿಡಿಯೊವನ್ನು ಜೋಯ್ಸ್‌ಲಿನ್ ಪೆನ್ಸನ್ ಎಂಬುವವರು ಫೇಸ್ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ದೈತ್ಯ ಹಲ್ಲಿಯನ್ನು ನೋಡಿದ ನೆಟ್ಟಿಗರು ಗಾಡ್ಜಿಲ್ಲಾವನ್ನು ನೆನಪಿಸಿಕೊಂಡಿದ್ದಾರೆ. ಆಹಾರವನ್ನು ಹುಡುಕಿಬಂದ ಹಲ್ಲಿಯು ಕಿಟಕಿ ಮೂಲಕ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದೆ. ಇದನ್ನು ಟೆಗೂ ಲಿಜರ್ಡ್ (Tegu Lizard) ಎಂದು ಗುರುತಿಸಲಾಗಿದೆ. ಸಾಮಾನ್ಯವಾಗಿ ಅರ್ಜೆಂಟೈನ್ ಗಯಂಟ್ ಟೆಗೂ ಎಂದು ಕರೆಯಲಾಗುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದ ಟೆಗೂ, ದೈತ್ಯ ಟೆಗೂ ಎಂಬಿತ್ಯಾದಿ ಜಾತಿಗಳು ಇವೆ.

'ಓ ದೇವರೇ! ಎಲ್ಲರು ಇಲ್ಲಿ ನೋಡಿ. ನನ್ನ ಮಗ ಫ್ಲಾರಿಡಾದ ಓರ್ಲಂಡೊದಲ್ಲಿ ನೆಲೆಸಿದ್ದಾನೆ. ಅವನನ್ನು ಇಂದು ಯಾರು ಭೇಟಿಯಾಗಲು ಬಂದಿದ್ದಾರೆ ನೋಡಿ. ಟೆಗೂ ಲಿಜಾರ್ಡ್! ನನಗೆ ಗಾಡ್ಜಿಲ್ಲಾದಂತೆ ಕಾಣಿಸುತ್ತಿದೆ. ನಾನು ಸಧ್ಯಕ್ಕಂತೂ ಆತನ ಮನೆಗೆ ಹೋಗುವುದಿಲ್ಲ! ಆ ಕಿಟಕಿಯ ಮುಂಭಾಗಕ್ಕಂತೂ ಹೋಗುವುದೇ ಇಲ್ಲ!' ಎಂದು ಜೋಯ್ಸ್‌ಲಿನ್ ಪೆನ್ಸನ್ ಅವರು ಅಚ್ಚರಿ ಹಾಗೂ ಭಯವನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೊ ನೋಡಿದವರೆಲ್ಲರೂ ಹಲ್ಲಿಯ ಬೃಹತ್ ಗಾತ್ರವನ್ನು ನೋಡಿ ಹೌಹಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.