ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲೂನ್‌ಗೆ ಬಂದು ಟ್ರಿಮ್‌ ಮಾಡಿಸಿಕೊಂಡ ಮಂಗ: ವಿಡಿಯೊ ನೋಡಿ

Last Updated 4 ಡಿಸೆಂಬರ್ 2021, 8:15 IST
ಅಕ್ಷರ ಗಾತ್ರ

ನವದೆಹಲಿ:ಸೌಂದರ್ಯ ಪ್ರಜ್ಞೆಯಿಲ್ಲದ ಯುವಕ-ಯುವತಿಯರ ಸಂಖ್ಯೆ ಇಂದಿನ ಜಮಾನದಲ್ಲಿ ತುಂಬ ಕಡಿಮೆ. ಎಲ್ಲರಿಗೂ ಸುಂದರವಾಗಿ ಕಾಣಿಸಿಕೊಳ್ಳಬೇಕು, ಸ್ಟೈಲ್‌ ಆಗಿರಬೇಕು ಎಂಬ ಅಭಿಲಾಷೆ.

ಮೊದಲೆಲ್ಲ ಕಟ್ಟಿಂಗ್‌ ಮಾಡಿಸಿಕೊಳ್ಳಲು, ಟ್ರಿಮ್‌ ಅಥವಾ ಶೇವಿಂಗ್‌ ಮಾಡಿಸಿಕೊಳ್ಳಲು ತಂದೆ-ತಾಯಿಯೇ ಒತ್ತಾಯಿಸಬೇಕಿತ್ತು. 'ಕರಡಿ ತರ ಕಾಣಿಸ್ತಿದ್ದೀಯಾ..' ಎಂದು ಯಾರಾದರೂ ತಿವಿದ ಬಳಿಕ ಸಲೂನ್‌ ಕಡೆಗೆ ಹೆಜ್ಜೆಯಿಡುತ್ತಿದ್ದರು. ಎರಡು ತಿಂಗಳಿಗೆ ಒಂದು ಸಲ ಸಲೂನ್‌ ಹೋದರೆ ಅದೇ ಹೆಚ್ಚು.

ಈಗಿನ ಯುವಕರು ವಾರಕ್ಕೊಮ್ಮೆ ಟ್ರಿಮ್‌ ಮಾಡಿಸಿಕೊಳ್ಳಲು ಸಲೂನ್‌ ಮುಂದೆ ಹಾಜರಿರುತ್ತಾರೆ. ತಲೆ ಕೂದಲು, ಗಡ್ಡದ ಮೇಲೆ ಆಗಾಗ ಟ್ರಿಮ್ಮರ್‌ ಓಡುತ್ತಲೇ ಇರಬೇಕು. ಜಗತ್ತೆಷ್ಟು ಬದಲಾಗಿದೆ ಎಂದು ಯೋಚಿಸುತ್ತಿರುವಾಗಲೇ ಮಂಗಗಳಿಗೂ ಸೌಂದರ್ಯ ಪ್ರಜ್ಞೆ ಬಂದಿರುವುದು ಸೋಜಿಗವೆನಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಂಗವೊಂದು ಸಲೂನ್‌ನಲ್ಲಿ ಮುಖದ ಕೂದಲನ್ನು ಟ್ರಿಮ್‌ ಮಾಡಿಸಿಕೊಳ್ಳುತ್ತಿರುವ ವಿಡಿಯೊ ಜನರನ್ನು ಸೆಳೆಯುತ್ತಿದೆ. ಸಲೂನ್‌ ಡ್ರೆಸ್‌ನಲ್ಲಿ ಕುಳಿತ ಮಂಗ ಕೇಶ ವಿನ್ಯಾಸಕಾರ ಹೇಳಿದಂತೆ ಮುಖ ತಿರುಗಿಸುತ್ತ, ಕತ್ತು ಮೇಲೆ ಮಾಡುತ್ತ ಸಹಕರಿಸುತ್ತಿದೆ. ಎಲೆಕ್ಟ್ರಿಕ್‌ ಟ್ರಿಮ್ಮರ್‌ಅನ್ನು ಮುಖದ ಬಳಿ ತಂದರೂ ಹೆದರದೆ ಆರಾಮವಾಗಿ ಕುಳಿತಿರುವುದು ವಿಡಿಯೊದಲ್ಲಿದೆ. ಅಬ್ಬಾಬ್ಬಾ, ಥೇಟ್‌ ಮನುಷ್ಯರಂತೇ ಕುಳಿತು ಟ್ರಿಮ್‌ ಮಾಡಿಸಿಕೊಳ್ಳುತ್ತಿದೆಯಲ್ಲಾ? ಎಂದು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT