ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಫೋನ್ ಬಿದ್ದು ಹಾಳಾಗಿದೆ ಎಂದು ಹೊಸ ನಂಬರ್ ಹಂಚಿಕೊಂಡ ವೀರೇಂದ್ರ ಸೆಹ್ವಾಗ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Former Indian cricketer Virender Sehwag. Credit: PTI Photo

ಬೆಂಗಳೂರು: ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಾಮಾಜಿಕ ತಾಣಗಳಲ್ಲಿ ಸದಾ ಸಕ್ರೀಯರಾಗಿದ್ದು, ಸಮಾಜದಲ್ಲಿನ ಆಗುಹೋಗುಗಳಿಗೆ ಪ್ರತಿಕ್ರಿಯಿಸುತ್ತಿರುತ್ತಾರೆ.

ಟ್ವಿಟರ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಸೆಹ್ವಾಗ್ ವಿವಿಧ ವಿಚಾರಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಅದೇ ರೀತಿಯಲ್ಲಿ ಮಂಗಳವಾರ ಸೆಹ್ವಾಗ್ ಮಾಡಿರುವ ಪೋಸ್ಟ್ ಒಂದು ಚರ್ಚೆಗೆ ಗ್ರಾಸವಾಗಿದೆ.

ಸೆಹ್ವಾಗ್ ಪೋಸ್ಟ್ ಮಾಡಿದ್ದೇನೆಂದರೆ, ನನ್ನ ಫೋನ್ ಅನ್ನು ಬಾತ್‌ರೂಮ್‌ನಲ್ಲಿ ಬೀಳಿಸಿಕೊಂಡಿದ್ದೇನೆ. ಅದನ್ನು ಸರಿಪಡಿಸಲಾಗುತ್ತಿದೆ. ಅಲ್ಲಿಯವರೆಗೂ, 9112083319 ಸಂಖ್ಯೆಗೆ ಕರೆ ಮಾಡಬಹುದು ಎಂದಿದ್ದಾರೆ.

ಸೆಹ್ವಾಗ್ ಟ್ವೀಟ್ ಮಾಡುತ್ತಿದ್ದಂತೆ, ಜನರು ಆ ಪೋಸ್ಟ್‌ಗೆ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಟ್ರೂಕಾಲರ್ ಮೂಲಕ ಹುಡುಕಿದಾಗ ಆ ಸಂಖ್ಯೆಯ ಹೆಸರು ವೀರೇಂದ್ರ ಸೆಹ್ವಾಗ್ ಎಂದು ತೋರಿಸಿದರೂ, ಅದು ನಕಲಿ ಎಂಬ ಟ್ಯಾಗ್ ಕಾಣಿಸಿಕೊಳ್ಳುತ್ತದೆ. ಆದರೂ ಬಹಳಷ್ಟು ಮಂದಿ ಕರೆ ಮಾಡಿದ್ದಾರೆ. ಕರೆ ಮಾಡಿದಾಗ ಅಲ್ಲಿ ರೆಕಾರ್ಡೆಡ್ ವಾಯ್ಸ್ ಕೇಳಿಸುತ್ತಿದ್ದು, ಅದೊಂದು ಬ್ರ್ಯಾಂಡ್ ಜಾಹೀರಾತಿನ ಪ್ರಚಾರದಂತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು