ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟ್‌ಮ್ಯಾನ್‌ ಬೈಕ್‌ ಅಲ್ಲ, ಓವರ್‌ಲೋಡ್‌ ಸ್ಕೂಟರ್‌: ವಿಡಿಯೊ ವೈರಲ್‌

ಅಕ್ಷರ ಗಾತ್ರ

ನವದೆಹಲಿ: ವ್ಯಕ್ತಿಯೊಬ್ಬರು ಸ್ಕೂಟರ್‌ನಲ್ಲಿ ನಿಗದಿತ ಮಿತಿಗಿಂತ ಅಧಿಕ ಪ್ರಮಾಣದ ಸರಕುಗಳನ್ನು (ಓವರ್‌ಲೋಡ್‌) ಸಾಗಿಸುವ ಮೂಲಕ ಟ್ರಾಫಿಕ್ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸ್ಕೂಟರ್‌ನಲ್ಲಿ ಅಧಿಕ ಪ್ರಮಾಣದ ಸರಕುಗಳನ್ನು ಸಾಗಾಟ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಸಾಗರ್ ಎಂಬುವವರು ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ‘ನನ್ನ 32GB ಮೊಬೈಲ್‌ ಫೋನ್‌ನಲ್ಲಿ 31.9 GB ಡೇಟಾವನ್ನು ಸಾಗಿಸುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.

ಸದ್ಯ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ತೆಲಂಗಾಣ ಪೊಲೀಸರು, ‘ಮೊಬೈಲ್ ಫೋನ್ ಹಾನಿಗೊಳಗಾದರೂ ಡೇಟಾವನ್ನು ಹಿಂಪಡೆಯಬಹುದು. ಆದರೆ, ಜೀವ ಹಾಗಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ವ್ಯಕ್ತಿಯೊಬ್ಬರು ತಮ್ಮ ಸ್ಕೂಟರ್‌ನಲ್ಲಿ ಕೂರಲು ಸಾಧ್ಯವಾಗದಷ್ಟು ಅಧಿಕ ಪ್ರಮಾಣದ ಸರಕುಗಳನ್ನು ತುಂಬಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಸ್ಕೂಟರ್‌ನ ಮುಂಭಾಗ (ಬಾನೆಟ್‌ ಮೇಲೆ) ಎರಡು ಬ್ಯಾಗ್‌ಗಳನ್ನು ಕಟ್ಟಿರುವುದು ಕಂಡುಬಂದಿದೆ. ಆ ವ್ಯಕ್ತಿ ಹೆಲ್ಮೆಟ್ ಧರಿಸಿ ಸ್ಕೂಟರ್‌ ಚಲಾಯಿಸಿದ್ದಾರೆ. ಆದರೆ, ಅವರ ಪಾದಗಳು ರಸ್ತೆಗೆ ತಾಕುವಂತಿರುವ ದೃಶ್ಯ ಕಾಣಬಹುದಾಗಿದೆ.

ಈ ವಿಡಿಯೊ ವೀಕ್ಷಿಸಿರುವ ನೆಟ್ಟಿಗರು ಹ್ಯಾಸ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ‘ಇದೊಂದು ಅಪಾಯಕಾರಿ ಕೃತ್ಯ’, ‘ಇದು ಬ್ಯಾಟ್‌ಮ್ಯಾನ್‌ ಬೈಕ್‌ಅಲ್ಲ, ಕೇವಲಸ್ಕೂಟರ್‌’ ಎಂದು ಪ್ರತಿಕ್ರಿಯಿಸಿದ್ದಾರೆ.

ಟ್ವಿಟರ್‌ನಲ್ಲಿ ಈ ವಿಡಿಯೊವನ್ನು 7.22 ಲಕ್ಷ ಮಂದಿ ವೀಕ್ಷಿಸಿದ್ದು, 25 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT